ನನ್ನ ಸಖಿ – ಪ್ರೊ. ರೂಪೇಶ್ ಪುತ್ತೂರು



ಪ್ರೊ. ರೂಪೇಶ್ ಪುತ್ತೂರು ಅವರ ಬಗ್ಗೆ ನಾಲ್ಕು ಸಾಲು ಓದುಗರಿಗೆ ತಿಳಿಸಬೇಕು,ರೂಪೇಶ್ ಅವರ ಮಾತೃ ಭಾಷೆ ಮಳಿಯಾಳಂ, ಪ್ರೀತಿಯ ಭಾಷೆ ಕನ್ನಡ. ನಾನು ಒಳ್ಳೆಯ ಬರಹಗಾರನಲ್ಲ ಎನ್ನುತ್ತಲೇ ಕನ್ನಡದಲ್ಲಿ ಸಾಕಷ್ಟು ಲೇಖನಗಳನ್ನು ಬೆರೆದಿದ್ದಾರೆ. ಸದಾ ಹಸನ್ಮುಖಿಯಾಗಿರುವ ರೂಪೇಶ್ ಅವರು ಕವಿತೆಗಳನ್ನು ಕೂಡ ಬರೆದಿದ್ದಾರೆ. ಅವರ ಬರವಣಿಗೆಯಲ್ಲಿ ಆತ್ಮೀಯತೆಯಿದೆ, ಪ್ರೀತಿಯಿದೆ. ಈಗ ಅವರ ‘ನನ್ನ ಸಖಿ’ ಕವನ ನಿಮ್ಮ ಮುಂದಿದೆ, ಓದಿ…ಅವರನ್ನು ಪ್ರೋತ್ಸಾಹಿಸಿ…

ನೀರವ ಆಲಸ್ಯವೇಕೆ
ನನ್ನ ಸಖಿಯೇ
ನಿನ್ನ ಸೌಂದರ್ಯಾ ಆಸ್ವಾಹನೆಗೆ ನಾ
ನಿಲ್ಲವೇನೇ ಪ್ರಿಯತಮೇ….

ಕೈ ಬಳೆ ಒಡೆದರೇನು
#ನನ್ನ_ಸಖಿಯೇ
ನಿನ್ನ ಹೊಳೆವ ಪರಿಭವನಯನ
ಅಗತ್ಯ ನನಗೆ ಪ್ರಿಯತಮೇ…

ಕಾಲ್ಗೆಜ್ಜೆ ಮೌನವಾದರೇನು
ನನ್ನ ಸಖಿಯೇ
ನಿನ್ನ ಬಹುನುಡಿಯ ಮಾತು
ಸಾಕಲ್ಲವೇ ನನಗೆ ಪ್ರಿಯತಮೇ…

ಒಡವೆಯ ಭಾರವೇಕೆ
ನನ್ನ ಸಖಿಯೇ
ನನ್ನ ಪ್ರಣಯ ನಿನಗಾಭರಣ
ಆಗಿರುವುದಲ್ಲವೇ ಪ್ರಿಯತಮೇ…

ತಟಸ್ಥವಾದ ಧನ
ಯಾಕೆ ಸಖಿಯೇ
ನಿನ್ನ ಮಡಿಲಲ್ಲಿ ನನ್ನ ಕಣ್ಮಣಿ
ಸಾಕಲ್ಲವೇ ಪ್ರಿಯತಮೇ….

ಮುಡಿದ ಹೂ ಬಾಡಿದರೂ
ನನ್ನ ಸಖಿಯೇ
ನಿನ್ನ ನಗುವಿನ ಮೊಗ್ಗೆಂದೆಂದೂ
ದಣಿಯಬಾರದು ಪ್ರಿಯತಮೇ..

ಹೂಹಾರದೊಳಗಿನ ಮೌನವಾದ
ಎರಡು ಚೆಂಡು
ಹೂಗಳಂತಿರುವುದಕ್ಕಿಂತ
ಸಖಿಯೇ…

ಅಲೆಗಳೊಡಲೊತ್ತ ಕಾಲುವೆಯಂತೆ,
ಪಾದಮುದ್ರೆ ಅನುಸರಿಸುವ ತೀರ್ಥಾಟಕರಂತಿರುವದೊಳ್ಳೆದಲ್ಲವೇ
ಪ್ರಿಯತಮೇ…..
ನಿಮ್ಮವ ನಲ್ಲ

– ರೂಪು


  • ಪ್ರೊ. ರೂಪೇಶ್ ಪುತ್ತೂರು (ರಾಸಾಯನ ಶಾಸ್ತ್ರ ವಿಭಾಗ, ಉಪನ್ಯಾಸಕರು, ಬೆಂಗಳೂರು)

One thought on “ನನ್ನ ಸಖಿ – ಪ್ರೊ. ರೂಪೇಶ್ ಪುತ್ತೂರು”

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading