‘ಬೇಕಾದವನಾಗಿದ್ದ ರಂಜು’ ಕತೆ – ಪ್ರೊ.ರೂಪೇಶ್



ಮನುಷ್ಯನಾಗಿ ಹುಟ್ಟಿದ ಮೇಲೆ ಎಲ್ಲರೂ ಮನುಷ್ಯರೇ ಎಂದು ಅರಿತರೆ ಒಳ್ಳೆಯದು, ಮೃಗವಾಗಿ ವರ್ತಿಸುವುದು ಬೇಡ. ಪ್ರೊ,ರೂಪೇಶ್ ಅವರ ರಂಜು ಕತೆ ಮಾನವೀಯತೆ ಮೌಲ್ಯದ ಬಗ್ಗೆ ಪಾಠ ಮಾಡುತ್ತದೆ. ಮುಂದೆ ಓದಿ…

#ನಂದಿನಿ_ಲೇ_ಔಟ್ ನಿಂದ ಕೋರಮಂಗಲಕ್ಕೆ ಕೆಲಸಕ್ಕೆ ಹೋಗುತ್ತಿದ್ದೆ. ನನ್ನ ಕಿರಿಯ ಎಲೆಕ್ಟ್ರಾನಿಕ್ಸ್ ಕಲಿತ ಶಶಿಧರ ಬಸ್ಸಿನಲ್ಲಿ ಕಂಡು ಪರಿಚಯವಾಗಿ

” ರೂಪಣ್ಣಾ, ನನ್ನ ಜೊತೆ ಕೆಲಸ ಮಾಡುವನೊಬ್ಬ ಅಜಿತ್  ಅಂತ ಇದ್ದಾನೆ, ಅವನು ಓಡಿಸ್ಸಾದವ. ಅವನ ಜೊತೆ ದೀಪಕ್ ಅಂತ ಇನ್ನೊಬ್ಬನಿದ್ದಾನೆ,  ಕಂಪ್ಯೂಟರ್ ಕಲಿಯಲು ಬಂದವ. ಇಬ್ಬರೂ ಕೋರಮಂಗಲದಲ್ಲಿದ್ದಾರೆ. ರೂಂ ನಲ್ಲಿ ಒಬ್ಬ #ಕನ್ನಡಿಗ ಬೇಕು ಅಂತಿದ್ದರು ಎಂದಿದ್ದ. ಆಗಾಗಲೇ ನಾನು ಬಸವಲಿಂಗಯ್ಯ, ನಾಗರಾಜ್ ಮತ್ತು ಜಗದೀಶ್ ಎಂಬ ಹೃದಯವಂತಿಕೆಯರ ಜೊತೆ ನಂದಿನಿ ಬಡಾವಣೆಯಲ್ಲಿ ಕೊಠಡಿಯನ್ನು ಹಂಚಿಕೊಂಡಿದ್ದೆ. ಜಗದೀಶ್ ಸ್ವಲ್ಪ ಸೋಮಾರಿಯಾಗಿದ್ದರು. ಬಸವಲಿಂಗಯ್ಯ ಬಾಗೇಪಳ್ಳಿಗೆ ಡಿಪ್ಲೋಮಾ ಕಾಲೇಜು ಉಪನ್ಯಾಸಕನಾಗಿದ್ದರು ಮತ್ತು ನಾಗರಾಜ್ ಅವರು ಸಂಶೋಧನೆ ವಿದ್ಯಾರ್ಥಿಯಾಗಿದ್ದರು, ಬಸವಲಿಂಗಯ್ಯ,ನಾಗರಾಜ್ ಅವರು ಮನೆಯಲ್ಲಿಲ್ಲದಾಗ  ನನಗೆ ಜಗದೀಶ್ ಜೊತೆ ಇರುವುದು ಅಸಾಧ್ಯವಾಯಿತು. ಕೊನೆಗೆ ಕೊರಮಂಗಲದ ಓಡಿಸ್ಸಾದವರೊಡನೆ ಸೇರಿದೆ. ಅದು ಬೇರೇ ಕಥೆ. ಆ ಎರಡು ವಾರಗಳಲ್ಲಿ ರೂಂ ಬಿಡುವ ಮೊದಲು, ಹೋಟೆಲ್ ಹೈ ವೇ (ಬೀದಿ ಬದಿ ದೂಡು ಗಾಡಿ) #ತಟ್ಟೆ_ಇಡ್ಲಿ ತಿನ್ನುವಾಗ ಅಕಸ್ಮಾತ್ ಒಬ್ಬ ಲೈನ್- ಸ್ನಾಕ್ ಡಿಸ್ಟ್ರಿಬ್ಯೂಷನ್ ವ್ಯಾನ್ ಚಾಲಕ ‘ರಂಜು’ ಪರಿಚಯವಾದ. ನನ್ನ ಮಾತುಗಳು ಇಷ್ಟವಾಗಿ ನನ್ನ ಕಾಲೇಜಿನ ಸಂಪರ್ಕ ಸಂಖ್ಯೆ ಪಡೆದ, ಯಾವಾಗಲಾದರೂ ಕರೆ ಮಾಡತೊಡಗಿದ.

ನಂತರ ನಾನು ಮೊಬೈಲ್ ಖರೀದಿಸಿದ ಮೇಲೆ ಅವನಿಗೆ ನನ್ನ ಸಂಪರ್ಕ ಸಂಖ್ಯೆ ಕೊಟ್ಟೆ. ವರುಷಗಳು ಉರುಳಿದವು. ಅವನ ಯಜಮಾನ ಮಂತ್ರಿಯಾದ. ಲೈನ್ ವ್ಯಾನ್ ನಿಂದ ರಂಜು ಯಜಮಾನನ ಐಶಾರಾಮಿ ಕಾರಿನ ಚಾಲಕನಾದ. ನಂತರ ಪ್ರತಿ ಕ್ಷಣ ಹಗಲಿರುಳು ತನ್ನ ಯಜಮಾನನ ಏಳಿಗೆಗೆ ತನ್ನನ್ನು ತಾನು ಸಮರ್ಪಿಸಿದ ಈ ರಂಜು. ಅಂದು ಯಜಮಾನನ ಮನೆಯೊಳಗೆ ಮಕ್ಕಳನ್ನು ಆಟವಾಡಿಸುವವ, ಶಾಲೆಗೆ ಕರ್ಕೊಂಡು ಹೋಗುವವ, ತರಕಾರಿ ತಂದು ಕೊಡುವವ, ಎಲ್ಲಾ ಸಂತೋಷದಲ್ಲೂ ಭಾಗೀದಾರನಾದ. ಕುಟುಂಬದ ಅವಿಭಾಜ್ಯ ಅಂಗವಾಗಿದ್ದ.  ರಂಜು. ಇಂದು ಅವನು ಯಜಮಾನನ ಮನೆಯ‌ ಹೊರಗೆ ಕಾಯ “ಬೇಕಾದವನಾದ”.

ಒಂದು ಕಾಲದಲ್ಲಿ ಯಜಮಾನ ವ್ಯಾಪಾರಿಯಾಗಿದ್ದಾಗ, ಯಜಮಾನತಿಯ ಹೆರಿಗೆ ಸಮಯದಲ್ಲಿ ವಿರಳವಾದ ರಕ್ತ ತನ್ನ ದೇಹದಿಂದ ಕೊಟ್ಟವನು, ಟೈಫೋಯಡ್ ಆಗಿ ಹೋದಾಗ , ಆಕ್ಸಿಡಂಟ್ ಆಗಿ ಕೋಮಾದಲ್ಲಿದ್ದಾಗ ಈ ಯಜಮಾನನ ಪಕ್ಕದಲ್ಲೇ ನಿದ್ರೆಗೆಟ್ಟು ಕೂತವನೇ ಈ ರಂಜುವೇ. ಇಂದು ಯಜಮಾನ ಮಂತ್ರಿಯಾದಾಗ, ಮನೆಯ ನಾಯಿಗೆ ಖರ್ಚು ಮಾಡುವ ಹಣದ 20% ಸಂಬಳ ಪಡೆವವನೇ ಈ ರಂಜು. ಯಜಮಾನನ ಮನೆಯೊಳಗೆ ನಾಯಿ ವಾಸವಾದರೆ, ಕಾರ್ ಶೆಡ್ ತನಕ ಮಾತ್ರ ಪರವಾನಿಗೆ ರಂಜುವಿಗೆ ಸೀಮಿತವಾಯಿತು. ಮಂತ್ರಿ ಸ್ಥಾನ ಪಡೆದು, ಹೊಸದಾಗಿ ಪರಿಚಯವಾದ ಧುರೀಣರು, ಶ್ರೀಮಂತರ ಮದುವೆಗೆ , ನಾಮಕರಣಕ್ಕೆ ಬೆಲೆ ಬಾಳುವ ಚಿನ್ನ-ವಜ್ರದ ಉಡುಗೊರೆ ಖರೀದಿಸಲು ಅಂಗಡಿಗೆ ಕಾರು ಚಲಾಯಿಸಿ ಹೋಗುವಾಗ, ತನಗೂ ಈ ರೀತಿ ಉಡುಗೊರೆ ಸಿಗಬಹುದೆಂಬ ಲೋಕದಲ್ಲಿದ್ದ ರಂಜು.



ರಂಜುವಿನ ಮದುವೆಗೆ, ಮೊದಲನೇ (ಗಂಡು) ಮಗುವಿನ ನಾಮಕರಣಕ್ಕೆ ಯಜಮಾನ – ಯಜಮಾನತಿ ಬರುವರೆಂದು ಆಸೆಯಾಗಿಯೇ ಉಳಿಯಿತು. ಋತುಮಾನಗಳು ಉರುಳಿದಾಗ , ರಂಜುವಿನ ಎರಡನೇ ಮಗು ಹೊತ್ತ ಹೆಂಡತಿಗೆ ಹೆರಿಗೆಗೆ ತುಂಬಾ ಅನಾನುಕೂಲವಾಯಿತು. ಶಸ್ತ್ರಚಿಕಿತ್ಸೆ (operation)ಗೆ ನುರಿತ ಆಸ್ಪತ್ರೆ ಹಾಗೂ ದುಡ್ಡಿನ ಅವಶ್ಯಕತೆ ಬಹಳವೇ ಇತ್ತು. ಪ್ರಭಾವ/
Influence ಪಡೆಯಲು ಯಜಮಾನನಿಗೆ ಫೋನು ಹಾಯಿಸಿದ, ಯಜಮಾನತಿಗೂ ಫೋನು ಹಾಯಿಸಿದ ಯಾರೂ ಫೋನ್ ಎತ್ತಲಿಲ್ಲ. ತನ್ನ ಮಿತ್ರ ಚಾಲಕನಾದ ಈರಣ್ಣನ ಫೋನಿನಿಂದ ಕರೆ ಮಾಡಿದಾಗ ಯಜಮಾನ ಕರೆ ಸ್ವೀಕರಿಸಿ “ಇಲ್ಲಿ ಒಬ್ಬ ಪ್ರಖ್ಯಾತ ನಟ ತೀರಿಹೋಗಿದ್ದಾನೆ. ನಿನ್ನ ಹೆಂಡತಿಯ ಹೆರಿಗೆ ನಿನ್ನ ಜವಾಬ್ದಾರಿ. ಆಮೇಲೆ ಇದೆ ನಿನಗೆ.. ” ಎಂದ.

#ಹೆರಿಗೆ ಸಮಯದಲ್ಲಿ ಹೆಂಡತಿ ಅಸುನೀಗಿದಳು.

ರಕ್ತ ಲೇಪಿತ ಮಗುವಿನ ನಗುವಿನೊಳಗೆ ತಾನು ಅಸಹಾಯಕನಲ್ಲ ಎಂಬ ನಿಟ್ಟುಸಿರು ಬಂದಿದ್ದು ಈರಣ್ಣನ ಹೆಂಡತಿ ಜಾನು ಆ ಮಗುವಿನ ಜವಾಬ್ದಾರಿ ಹೋರುತ್ತೇನೆ ಅಂದಾಗ. ” ಅಣ್ಣಾ ನಾನು ಈ ಮಗುವಿಗೆ ತಾಯಿಯ ಎಲ್ಲಾ ಸುಖ ಕೊಡುತ್ತೇನೆ. ಚಿಂತಿಸಬೇಡ”

ಎರಡ್ಮೂರು ದಿನದ ನಂತರ ಕೆಲಸಕ್ಕೆ ಹೋದಾಗ,

“ಮ್ಯಾನರ್ಸ್ ಇಲ್ಲದವನೇ… ಇನ್ನು ಇಲ್ಲಿ ಕೆಲಸಕ್ಕೆ ಬರಬೇಡ” ಎಂದು ಯಜಮಾನ ಉಗಿದು ಕಳುಹಿಸಿದ.

ಇಪ್ಪತ್ತು ವರುಷದಿಂದ ದುಡಿವ ರಂಜು , 2-3 ವರುಷದಲ್ಲಿ ಪರಿಚಯವಾದ ನಟ. ಇವರಿಬ್ಬರೂ ಹೃದಯ ಶ್ರೀಮಂತರೇ ಆದರೆ ಆ ಯಜಮಾನ…,.

ಮಿತ್ರ ಈರಣ್ಣ ಇನ್ನೊಂದು ಕಡೆ ಕೆಲಸ ಹುಡುಕಿ ಕೊಟ್ಟ. ರಂಜು ತನ್ನ ಕಾಯಕ ಅಲ್ಲಿ ಮುಂದುವರಿಸುತ್ತಿದ್ದಾನೆ. ಬೆಳಿಗ್ಗೆ ಮಗನನ್ನು ಶಾಲೆಗೆ ಸಜ್ಜು ಗೊಳಿಸಿ, ಮಗಳನ್ನು ಜಾನು ಕೈಯಲ್ಲಿ ಕೊಟ್ಟು, ಮಗನನ್ನು ಶಾಲೆಗೆ ಬಿಟ್ಟು , ಕೆಲಸದ ಕಡೆ ಹೋಗುತ್ತಾನೆ. ಸಂಜೆ ಈರಣ್ಣ ಅವನ ಮಕ್ಕಳ ಜೊತೆ ರಂಜುವಿನ ಮಗನನ್ನು ತನ್ನ ಮನೆಗೆ ಕರೆ ತರುತ್ತಾನೆ. ಕೆಲಸ ಮುಗಿಸಿ ಮರಳುವ ರಂಜು, ಈರಣ್ಣ ಜೊತೆ ಊಟ ಮಾಡಿ, ಮನೆಗೆ ಮುರಳಿ, ಮಗ ಮಲಗಿದ ನಂತರ , ಮಗಳ ನಗು ನಿಂತಾಗ ತನ್ನ ಹೆಂಡತಿಯ ನೆನಪಿನೊಳಗೆ ನುಸುಳಿ ನಿದ್ರಿಸುವವನಾಗಿದ್ದಾನೆ.

ಮನುಷ್ಯನಾಗಿ ಹುಟ್ಟಿದ ಮೇಲೆ ಎಲ್ಲರಂತೆ ತಾನೂ ಒಬ್ಬ ಮನುಷ್ಯನೆಂದು ಅರಿತರೆ ಅದೇ ದೊಡ್ಡ ಸಾಧನೆ. ರಂಜು – ಈರಣ್ಣನ ಮಿತ್ರತ್ವ ಬಹಳಾ ಸುಂದರ ಎಂದು ಕಾಣುತ್ತಿದೆ. ಅದು ಹಾಗೇ ಮುಂದುವರಿಯಲಿ ಎಂದು ಆಶಿಸೋಣ.

ನಿಮ್ಮವ ನಲ್ಲ
*ರೂಪು*


  • ಪ್ರೊ.ರೂಪೇಶ್ ಪುತ್ತೂರು (ರಾಸಾಯನ ಶಾಸ್ತ್ರ ವಿಭಾಗ, ಉಪನ್ಯಾಸಕರು) ಬೆಂಗಳೂರು.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW