ಗೋಕಾಕನ ಕವಿ ಶಿವಾ ಮದಭಾoವಿ ಅವರ ಕವನವನ್ನು ತಪ್ಪದೆ ಮುಂದೆ ಓದಿ…
ಸಿಕ್ಕಿದೆ ಉತ್ತರ
ದೊರಕಿದೆ ಉತ್ತರ
ನೆತ್ತರು ಬಲಿದಾನಗಳಿಂದ
ಆರದ ಗಾಯದಿಂದ
ಕೋಟ್ಯಾನುಕೋಟಿ
ಸಾವು-ನೋವಿನಿಂದ
ಲೂಟಿಯಾದ ಸಂಪದ್ಭರಿತ
ಸಂಪತ್ತಿನಿಂದ
ಸಿಕ್ಕಿದೆ ಉತ್ತರ…
ದೊರಕಿತು ಉತ್ತರ
ನ್ಯಾಯಕ್ಕೆ ಮುಕ್ತಿ ಅನ್ಯಾಯದಿಂದ
ಬಿಟ್ಟು ಬಿಡದ ಪ್ರಯತ್ನದಿಂದ
ಎಷ್ಟೋ ಮಹಾತ್ಮರ ಪುಣ್ಯದಿಂದ
ಎಲ್ಲಾ ದೇವರ ಆಶೀರ್ವಾದದಿಂದ
ಕಳೆದುಕೊಂಡಿದ್ದನ್ನು ದೊರಕಿಸಿಕೊಂಡೆವು
ಇಂದೆ ನಮ್ಮ ಶುಭಘಳಿಗೆಯ ಶುಭದಿನವು
- ಶಿವಾ ಮದಭಾoವಿ – ಗೋಕಾಕ.
