'ಭಾರತೀಯ ವಿದ್ಯಾ ಭವನ' ಪತ್ರಿಕೋದ್ಯಮ ಕಾಲೇಜಿಗೀಗ ಚಿನ್ನದ ಹಬ್ಬ

೧೯೫೧ರಲ್ಲಿ ಮೈಸೂರು ವಿದ್ಯಾಲಯವು ಪತ್ರಿಕೋದ್ಯಮ ವಿಷಯವನ್ನು ಬಿ.ಎ.ಪದವಿ ಹಂತದಲ್ಲಿಐಚ್ಚಿಕ ವಿಷಯವನ್ನಾಗಿ ರೂಪಿಸಿತು. ಆದರೆ ಬೆಂಗಳೂರಿನಲ್ಲಿ ಪತ್ರಿಕೋದ್ಯಮಕ್ಕೆ ಪ್ರತ್ಯೇಕ ಕಾಲೇಜು ಇರಲಿಲ್ಲ. ಈ ಕೊರತೆಯನ್ನು ಬೆಂಗಳೂರಿನ ಭಾರತೀಯ ವಿದ್ಯಾಭವನವು ನೀಗಿಸಿತು. ಅಲ್ಲಿಂದ ನಿರಂತರವಾಗಿ ನಡೆದ ಬಂದ ಕಾಲೇಜು ಈ ವರುಷ ಚಿನ್ನದ ಹಬ್ಬವನ್ನು ಆಚರಿಸುತ್ತಿದೆ. ಇಲ್ಲಿಂದ ಹೊರ ಬಂದ ವಿದ್ಯಾರ್ಥಿಗಳು ಪತ್ರಿಕೋದ್ಯಮ, ವಿದ್ಯಾನ್ಮಾನ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಉನ್ನತ ಸ್ಥಾನಗಳಲ್ಲಿರುವುದು ಈ ಕಾಲೇಜಿನಲ್ಲಿಯೇ ಹೆಗ್ಗಳಿಕೆಯಾಗಿದೆ.

೧೯೩೮ರಲ್ಲಿ ಡಾ.ಕೆ.ಎಂ.ಮುನ್ಷಿಯವರ ಕನಸಿನಂತೆ ರೂಪಗೊಂಡ ವಿದ್ಯಾಭವನದ ಬೆಂಗಳೂರು ಕೇಂದ್ರ ೧೯೬೫ರಲ್ಲಿ ಆರಂಭವಾಯಿತು. ಅಂದಿನ ಭಾರತದ ಪ್ರಧಾನಿ ಮಂತ್ರಿಗಳಾದ ಲಾಲ್ ಬಹುದ್ದೂರ್ ಶಾಸ್ತ್ರೀ ಇದನ್ನು ಉದ್ಘಾಟಿಸಿದರು. ಸಾಂಸ್ಕೃತಿಕ ಕ್ಷೇತ್ರದಂತೆಯೇ ವೃತ್ತಿಪರ ನೈಪುಣ್ಯದ ಗುರುತಿಸಿದ್ದು ಭಾರತೀಯ ವಿದ್ಯಾ ಭವನದ ಹೆಗ್ಗಳಿಕೆ ಇದಕ್ಕಾಗಿ ಭವನದ ಅಂಗ ಸಂಸ್ಥೆಯಾಗಿ ರೂಪುಗೊಂಡಿದ್ದು ಹರಿಲಾಲ್ ಭವತಿ ಕಾಲೇಜ್ ಕರ್ನಾಟಕಕ್ಕೂ ಇದು ಬೇಕು ಎಂಬ ಕನಸನ್ನು ಕಂಡವರು ಪತ್ರಿಕೋದ್ಯಮ ಕ್ಷೇತ್ರದಲ್ಲಿಯೂ ತಮ್ಮದೇ ಆದ ಹಿರಿಮೆಯನ್ನು ಹೊಂದಿರುವ ಹಿರಿಯ ಸ್ವತಂತ್ರ ಹೋರಾಟಗಾರ ಮತ್ತು ರಾಜಕೀಯ ಮುತ್ಸುದ್ದಿ ಆರ್.ಆರ್. ದಿವಾಕರ್ ಅವರ ಪ್ರಯತ್ನದ ಫಲವಾಗಿ ಎಚ್.ಬಿ.ಕಾಲೇಜಿನ ಸ್ನಾತಕೋತ್ತರ ಕೇಂದ್ರ ಬೆಂಗಳೂರಿನಲ್ಲಿ ಕೂಡ ಆರಂಭವಾಯಿತು.

(ಮಾಜಿ ಪ್ರಧಾನ ಮಂತ್ರಿ ಲಾಲ್ ಬಹುದ್ದೂರ್ ಶಾಸ್ತ್ರೀ ಅವರ ಭಾವಚಿತ್ರ)

ಮ್ಯಾನೇಜ್ ಮೆಂಟ್ ಮತ್ತು ಪತ್ರಿಕೋದ್ಯಮ ಕ್ಷೇತ್ರಗಳಲ್ಲಿ ಇಲ್ಲಿ ತರಗತಿಗಳು ಆರಂಭವಾದವು.೧೮೬೮-೧೯ ರಲ್ಲಿ ಮೊದಲ ಪತ್ರಿಕೋದ್ಯಮದ ತರಗತಿಗಳನ್ನು ಅಂದಿನ ಉಪರಾಷ್ಟ್ರಪತಿಗಳು ಮತ್ತು ಮುಂದೆ ರಾಷ್ಟ್ರಪತಿಗಳು ಆದ ಡಾ.ವಿ.ವಿ.ಗಿರಿಯವರು ಉದ್ಘಾಟನೆಯನ್ನು ಮಾಡಿದ್ದರು. ಆರಂಭದಲ್ಲಿ ಕನ್ನಡ ಪತ್ರಿಕೋದ್ಯಮದ ಪಿತಾಮಹ ಎಂದೇ ಗುರುತಿಸಲ್ಪಟ್ಟಿರುವ ಡಾ.ನಾಡಿಗ ಕೃಷ್ಣಮೂರ್ತಿ ಮಾರ್ಗದರ್ಶನ ನೀಡಿದರು.

ಭಾರತೀಯ ಪತ್ರಿಕೋದ್ಯಮದಲ್ಲಿ ತಮ್ಮದೇ ಆದ ವಿಶಿಷ್ಟವಾದ ಸ್ಥಾನವನ್ನು ಪಡೆದಿರುವ ಡೆಕ್ಕನ್ ಹೆರಾಲ್ಡ್ ‘ಓವರ್ ದಿ ಕಪ್ ಆಫ್ ಟೀ’ ಯಿಂದ ಹೆಸರಾಗಿದ್ದ ಪೋತನ್ ಜೋಸೆಫ್ ಆರಂಭಿಕ ವಿಷಯಗಳಲ್ಲಿ ಪತ್ರಿಕೋದ್ಯಮ ಕಾಲೇಜು ಸುಸಜ್ಜಿತವಾಗಿ ರೂಪಗೊಳ್ಳಲು ಕಾರಣಕರ್ತರಾದರು. ಆರಂಭಿಕ ದಿನಗಳ ಸ್ವರೂಪವನ್ನು ಅವರೇ ನಿರ್ಧರಿಸಿದರು. ೧೯೪೮ ರಿಂದ ೧೯೮೪ರವರೆಗೆ ಡೆಕ್ಕನ್ ಹೆರಾಲ್ಡ್ ನಲ್ಲಿ ಹಲವು ಪ್ರಮುಖ ಹುದ್ದೆಗಳನ್ನು ನಿರ್ವಹಿಸಿದ್ದ ಕೆ.ಶೇಷಾದ್ರಿಯವರು ೧೯೮೫ರಲ್ಲಿ ಈ ಕಾಲೇಜಿನಲ್ಲಿ ಮುಖ್ಯಸ್ಥರಾದರು. ಅವರ ಆಡಳಿತ ಕಾಲವನ್ನು ‘ಚಿನ್ನದ ಕಾಲ’ ವೆಂದು ಪರಿಗಣಿಸಲಾಗಿದೆ. ಪಠ್ಯದಲ್ಲಿ ಗಮನಾರ್ಹ ಬದಲಾವಣೆಗಳನ್ನು ಮಾಡಿ ಪತ್ರಿಕಾರಂಗದಲ್ಲಿ ಕಾರ್ಯ ನಿರ್ವಹಿಸಲು ಅಗತ್ಯವಾದ ಕೌಶಲ್ಯಗಳನ್ನು ನೀಡಲು ಅವರ ಅನೇಕ ಯೋಜನೆಗಳನ್ನು ರೂಪಿಸಿದರು. ಇಲ್ಲಿಯವರೆಗೆ ಇಂಗ್ಲಿಷ್ ಭಾಷೆಯಲ್ಲಿ ಮಾತ್ರ ಪತ್ರಿಕೋದ್ಯಮದ ತರಗತಿಗಳು ನಡೆಯುತ್ತಿದ್ದವು. ರಾಷ್ಟ್ರೀಯ ಪತ್ರಿಕೋದ್ಯಮದಲ್ಲಿ ಕೂಡ ಹೆಸರು ಮಾಡಿದ್ದ ನಾರಾಯಣ್ ಅವರು ಭಾರತೀಯ ಸೇವೆ ಸಲ್ಲಿಸುತ್ತಿದ್ದಾಗ ಕನ್ನಡ ಭಾಷೆಯಲ್ಲಿ ಕೂಡ ತರಗತಿಗಳನ್ನು ಆರಂಭಿಸುವ ಪ್ರಸ್ತಾಪ ಇಟ್ಟರು. ಹಿರಿಯ ಪತ್ರಕರ್ತ ಜಿ.ಎನ್.ರಂಗನಾಥ ರಾವ್ ಕನ್ನಡ ಪತ್ರಿಕೋದ್ಯಮದ ಮುಖ್ಯಸ್ಥರಾದರು. ಹೊಸ ಕಾಲಕ್ಕೆ ಅನುಗುಣವಾಗಿ ಬದಲಾದ ತರಗತಿಗಳು ೨೦೧೪ರಲ್ಲಿ ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿರುವ ಬರಹಗಾರರಾಗಿಯು ಹೆಸರು ಮಾಡಿರುವ ಎನ್.ಎಸ್.ಶ್ರೀಧರ್ ಮೂರ್ತಿಯವರು ಈ ಕೋರ್ಸಿನ ನಿರ್ದೇಶಕರಾದರು.

ಅವರು ಹೊಸ ಕಾಲದ ಅಗತ್ಯಕ್ಕೆ ತಕ್ಕಂತೆ ಕೋರ್ಸಿನಲ್ಲಿ ಅನೇಕ ಬದಲಾವಣೆಗಳನ್ನು ಮಾಡಿದ್ದಾರೆ ಮುದ್ರಣ ಮಾಧ್ಯಮದಂತೆ, ವಿದ್ಯಾನ್ಮಾನ ಮಾಧ್ಯಮ ಮತ್ತು ಕಾರ್ಪೊರೇಟ್ ಮಾಧ್ಯಮದ ಕುರಿತು ಈಗ ಬೋಧನೆಯನ್ನು ನಡೆಸುತ್ತದೆ ವೆಬ್ ಜರ್ನಲಿಸಂ,ಸೋಷಿಯಲ್ ಮೀಡಿಯಾ ಮ್ಯಾನೇಜ್ಮೆಂಟ್,ಸೈಬರ್ ಲಾ ಹೀಗೆ ಹಲವು ವಿನೂತನ ವಿಷಯವನ್ನು ಕಲಿಸುವ ಮೂಲಕ ವಿದ್ಯಾರ್ಥಿಗಳನ್ನು ಹೊಸ ಯುಗ ಸವಾಲುಗಳಿಗೆ ಸಜ್ಜುಗೊಳಿಸಲಾಗುತ್ತಿದೆ ಹೆಚ್ಚಿನ

ವಿವರಗಳಿಗೆ : ಎನ್ .ಎಸ್. ಶ್ರೀಧರ್ ಮೂರ್ತಿ – 9538181140

0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW