ಸದ್ದಿಲ್ಲದೇ ಸುದ್ದಿಯಾದ URI – ಸರ್ಜಿಕಲ್ ಸ್ಟ್ರೆಕ್ ಸಿನಿಮಾ

ಗಾಢ ನಿದ್ದೆಯಲ್ಲಿದ್ದಾಗ ಒಂದು ಸೊಳ್ಳೆ ಕಚ್ಚಿದರು ಸಾಕು. ಆ ಸೊಳ್ಳೆಯನ್ನು ಹೊಡೆಯುವರೆಗೂ ಮನಸ್ಸಿಗೆ ನೆಮ್ಮದಿ ಸಿಗುವುದಿಲ್ಲ. ಅಂಥದರಲ್ಲಿ ಸೆಪ್ಟೆಂಬರ್ ೨೯,೨೦೧೬ ರಲ್ಲಿ ಪಾಕಿಸ್ತಾನದ ಉಗ್ರರು ಅಕ್ರಮವಾಗಿ ಭಾರತದ ಗಡಿ ದಾಟಿ ಬಂದಿದ್ದಲ್ಲದೆ, ನಮ್ಮ ಭಾರತೀಯ ಸೇನಾ ನೆಲೆಯ ಮೇಲೆ ಯದ್ವಾ-ತದ್ವಾ ಗುಂಡು ಹಾರಿಸಿದರಲ್ಲ. ಅದರ ಪರಿಣಾಮವಾಗಿ ಎಷ್ಟೋ ನಮ್ಮ ಯೋಧರು ಪ್ರಾಣವನ್ನೇ ಕಳೆದುಕೊಂಡರು. ಇದೆಲ್ಲವನ್ನು ಸುದ್ದಿ ಮಾಧ್ಯಮಗಳಲ್ಲಿ ಕೇಳಿದಾಗ ಅಥವಾ ಓದಿದಾಗ ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯದೇ ಇರಲಿಲ್ಲ. ಇದಕ್ಕೆ ಮೋದಿ ಸರಕಾರ ಸುಮ್ಮನೆ ಹಲ್ಲು ಕಡೆಯುತ್ತ ಕೂಡಲಿಲ್ಲ. ಬದಲಾಗಿ ಪಾಕಿಸ್ತಾನ ಅಟ್ಟಹಾಸಕ್ಕೆ ಕೊಟ್ಟಂತಹ ಉತ್ತರವೇ ‘ಸರ್ಜಿಕಲ್ ಸ್ಟ್ರೈಕ್’. ಪಾಕಿಸ್ತಾನದ ಹುಚ್ಚಾಟಕ್ಕೆ ನಾವು ಸುಮ್ಮನೆ ಕೂಡುವುದಿಲ್ಲ ಎನ್ನುವ ಭಯವನ್ನು ಪಾಕಿಸ್ತಾನದ ಉಗ್ರರಲ್ಲಿ ಮೋದಿ ಸರಕಾರ ಹುಟ್ಟಿಸಿತು. ಅರೆರೇ…ಚುನಾವಣೆ ಬಂತು, ಮೋದಿ ಸರಕಾರ ಪರವಾಗಿ ಪ್ರಚಾರ ಮಾಡುತ್ತಿದ್ದೇನೆ ಎಂದು ಕೊಳ್ಳಬೇಡಿ.ನನ್ನ ಮದುವೆ ವಾಷಿಕೋತ್ಸವ ಸಂದರ್ಭದಲ್ಲಿ ನಾನು ನೋಡಿದಂತಹ ಅದ್ಭುತವಾದ ಸಿನಿಮಾ URI ಸರ್ಜಿಕಲ್ ಸ್ಟ್ರೈಕ್’ ಸಿನಿಮಾದ ಬಗ್ಗೆ ಮಾತಾಡುತ್ತಿದ್ದೇನೆ.

ಈ ಸಿನಿಮಾ ಒಬ್ಬ ಹಿರೋನ್ ಕತೆಯಲ್ಲ. ಒಂದು ಕುಟುಂಬದ ಕತೆಯಲ್ಲ. ಒಂದು ರಾಜಕೀಯ ಕತೆಯಲ್ಲ. ಇದು ಒಂದು ಪ್ರೇಮದ ಕತೆ. ಪ್ರೇಮಾ ಎಂದಾಕ್ಷಣ ಹುಡುಗ-ಹುಡುಗಿಯರ ನಡುವಿನ ಪ್ರೇಮವಲ್ಲ. ದೇಶದ ಮೇಲಿನ ಪ್ರೇಮ ಕತೆ. ಒಬ್ಬ ಯೋಧನ ಕತೆ,ಯೋಧನ ಕುಟುಂಬದ ಕತೆ.

ಯೋಧರ ಬಗ್ಗೆ ಈ ಹಿಂದೆ ಸಾಕಷ್ಟು ಸಿನಿಮಾಗಳು ಬಂದಿವೆ. ಅದರಲ್ಲಿ ‘ಬಾರ್ಡರ್’ ಎನ್ನುವಂತ ಅದ್ಬುತ ಹಿಂದಿ ಸಿನಿಮಾವು ಒಂದು. ದೇಶಕ್ಕಾಗಿ ಹಾಕಿ, ಕ್ರಿಕೆಟ್, ಕುಸ್ತಿ ಕುರಿತಾದ ಸಿನಿಮಾಗಳನ್ನು ಒಂದರ ಮೇಲೆ ಒಂದರಂತೆ ಬಂದಿದ್ದನ್ನು ನೋಡಿದ್ದೇವೆ. ಆದರೆ ದೇಶಕ್ಕಾಗಿ ಹೋರಾಡುವ ಯೋಧನ ಬಗ್ಗೆ ಮನಸ್ಸಿಗೆ ನಾಟುವಂತೆ ಯಾವ ಸಿನಿಮಾಗಳು ಸದ್ಯದಲ್ಲಿ ಬಂದಿರಲಿಲ್ಲ. ಆದರೆ URI ಸರ್ಜಿಕಲ್ ಸ್ಟ್ರೈಕ್ ಇಷ್ಟು ವರ್ಷದ ಆ ಕೊರತೆಯನ್ನು ಈಡೇರಿಸಿತು.

ಒಬ್ಬ ಯೋಧನೆಂದರೆ ತನ್ನ ಸರ್ವಸ್ವವನ್ನೆಲ್ಲ ತ್ಯಾಗ ಮಾಡಿ ದೇಶದ ರಕ್ಷಣೆಗಾಗಿ ಗಡಿನಾಡಿನಲ್ಲಿ ಬಂದು ನಿಲ್ಲುವ ಒಬ್ಬ ಸಿಪಾಯಿ. ಮತ್ತು ಇತ್ತ ಕಡೆ ತಮ್ಮೆಲ್ಲ ಸುಖವನ್ನೆಲ್ಲ ತ್ಯಾಗ ಮಾಡಿ ದೇಶದ ರಕ್ಷಣೆಗೆ ಒಬ್ಬ ವೀರನನ್ನು ಸಮರ್ಪಿಸುತ್ತದೆ ಯೋಧನ ಕುಟುಂಬ. ಹೀಗೆ ಯೋಧರ ಬಗ್ಗೆ ಹಾಗೆ-ಹೀಗೆ ಎಂದೆಲ್ಲ ಕಲ್ಪಿಸಿಕೊಂಡಿದ್ದೇವೆ. ಆದರೆ ಯೋಧ ಅನುಭವಿಸುವ ಕಷ್ಟಗಳನ್ನು ಸ್ವತಃ ನಾವುಗಳು ಅನುಭವಿಸಿರಲಿಲ್ಲ. ಆದರೆ ಈ ಸಿನಿಮಾ ಆ ಕಷ್ಟಗಳನ್ನು ಅನುಭವಿಸುವಂತೆ ಮಾಡಿತು.

ಇದರಲ್ಲಿ ಅಭಿನಯಿಸಿದ ವಿಕಿ ಕೌಶಲ್, ಯಾಮಿ ಗೌತಮ್ , ಮೋಹಿತ್ ರೈನಾ, ಪರೇಶ್ ರಾವಲ್ ಮತ್ತು ಕೀರ್ತಿ ಕುಲ್ಹರಿ ಕೇವಲ ಪಾತ್ರಧಾರಿಗಳಾಗಿ ಕಾಣಿಸಲಿಲ್ಲ. ಬದಲಾಗಿ ಅವರೆಲ್ಲರೂ ಪ್ರೇಕ್ಷಕರನ್ನು ಯುದ್ಧದ ಭೂಮಿಯಲ್ಲಿ ನಿಲ್ಲಿಸಿಬಿಟ್ಟರು. ನನಗಷ್ಟೇ ಈ ಅನುಭವ ಆಗುತ್ತಿದೆಯೇನೋ ಎಂದು ಚಿತ್ರ ಮಂದಿರದ ಅಕ್ಕ ಪಕ್ಕದಲ್ಲಿ ಕಣ್ಣಾಡಿಸಿ ನೋಡಿದೆ. ಆ ಅನುಭವ ನನಗಷ್ಟೇ ಅಲ್ಲ. ಚಿತ್ರಮಂದಿರದಲ್ಲಿನ ಪ್ರತಿಯೊಬ್ಬ ನೋಡುಗನಿಗೂ ಆಗಿತ್ತು. ಚಿತ್ರ ಮಂದಿರದಲ್ಲಿದ್ದಂತಹ ಪ್ರತಿಯೊಬ್ಬ ಪ್ರೇಕ್ಷಕನ್ನು ಸಿನಿಮಾ ಮುಗಿವಷ್ಟರಲ್ಲಿ ಕುರ್ಚಿ ತುದಿಗೆ ಬಂದು ಬಿಟ್ಟಿದ್ದ. ಪಾಕಿಸ್ತಾನ ಮಾಡಿದಂತಹ ಕ್ರೌರ್ಯ ವಿರುದ್ಧದ ಕಿಚ್ಚು ಎಲ್ಲರಲ್ಲೂ ಕಾಣಿಸಿತು. ಸಿನಿಮಾಕ್ಕೆ ಇಂಟರ್ವೆಲ್ ಬಂದಾಗ ಯಾವ ಪ್ರೇಕ್ಷಕನೂ ತಮ್ಮ ಕುರ್ಚಿಯಿಂದ ಪಾಪ್ ಪಾಪ್ ಕಾರ್ನ್ ಗಾಗಿ ಓಡಾಡದ್ದಿದ್ದನ್ನು ನಾನು ಗಮನಿಸಿದೆ. ಬೇರೆ ಸಿನಿಮಾ ನೋಡಲು ಹೋದಾಗ ಸಿನಿಮಾ ಟಿಕೆಟ್ ಎಷ್ಟು ಫಾಸ್ಟ್ ಆಗಿ ಸೇಲ್ ಆಗುತ್ತದೆಯೋ, ಅಷ್ಟೇ ಫಾಸ್ಟ್ ಆಗಿ ಪಾಪ್ ಕಾರ್ನ್ ಕೂಡ ಸೇಲ್ ಆಗುತ್ತದೆ. ಆದರೆ ಈ ಸಿನಿಮಾ ಯೋಧನ ಬಲಿದಾನದ ಸಿನಿಮಾವಾಗಿದ್ದರಿಂದ ಬಹುಶ ಎಷ್ಟೋ ಪ್ರೇಕ್ಷಕರು ಪಾಪ್ ಕಾರ್ನ್ ತ್ಯಾಗ ಮಾಡಿದರು ಎನ್ನಿಸಿತು.

ಯಾವುದೇ ಆಡಂಬರದ ಪ್ರಚಾರವಿಲ್ಲದೆ ಸದ್ದಿಲ್ಲದೇ ಸುದ್ದಿ ಮಾಡಿದ URI ಸರ್ಜಿಕಲ್ ಸ್ಟ್ರೈಕ್ ಸಿನಿಮಾವನ್ನು ಪ್ರತಿಯೊಬ್ಬ ಭಾರತೀಯರು ನೋಡಲೇ ಬೇಕು. ಯುದ್ಧ ಭೂಮಿಯ ಅನುಭವವನ್ನು ಪ್ರತಿಯೊಬ್ಬರು ಪಡೆಯಲೇ ಬೇಕು. ಅಷ್ಟರ ಮಟ್ಟಿಗೆ ನಿರ್ದೇಶಕ, ಪಾತ್ರಧಾರಿಗಳು ಮತ್ತು ಸಿನಿಮಾಕ್ಕಾಗಿ ಕೆಲಸ ಮಾಡಿದ ಪ್ರತಿಯೊಬ್ಬರೂ ಮನಸ್ಸಿನಲ್ಲಿ ಕಾಡುತ್ತಾರೆ. ಈ ಸಿನಿಮಾದಲ್ಲಿ ಯಾರನ್ನು ಹೊಗಳಬೇಕು ಎಂದು ಗೊತ್ತಾಗುವುದಿಲ್ಲ.ಅಷ್ಟರ ಮಟ್ಟಿಗೆ ಅವರವರ ಕೆಲಸವನ್ನುಎಲ್ಲರೂ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.

ದೇಶದ ಪ್ರಧಾನಿಯಾದವರಿಗೆ ಎಷ್ಟೆಲ್ಲ ಸವಾಲುಗಳು, ಸಮಸ್ಯೆಗಳು ಎದುರಿಸಬೇಕಾಗುತ್ತದೆ. ಗಾಡಿ ಹೋದ ಮೇಲೆ ಟಿಕೆಟ್ ತಗೆದುಕೊಂಡರೆ ಅರ್ಥವಿಲ್ಲ ಎನ್ನುವುದಕ್ಕೆ ಈ ಸಿನಿಮಾ ಒಳ್ಳೆಯ ಉದಾಹರಣೆಯಾಗಿದೆ.ಸಮಸ್ಯೆಗಳು ಬಂದಾಗ ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರಗಳು ಮುಖ್ಯವಾಗಿರುತ್ತದೆ. ಪ್ರಧಾನಿ ಮೇಲಿನ ಒತ್ತಡಗಳು ಹೇಗಿರುತ್ತದೆ ಎನ್ನುವುದರ ಸಣ್ಣ ಝಲಕ್ ಈ ಸಿನಿಮಾದಲ್ಲಿ ನೋಡಬಹುದು.

ಪಾಕ್ ಅಟ್ಟಹಾಸಕ್ಕೆ ಮೋದಿ ಅವರ ಸರಕಾರ ತಗೆದುಕೊಂಡಂತಹ ಸರ್ಜಿಕಲ್ ಸ್ಟ್ರಿಕ್ ನಿರ್ಧಾರಕ್ಕೆ ಚಪ್ಪಾಳೆ ಸಿಗಲೇ ಬೇಕು. ಈ ಸಿನಿಮಾ ಮೋದಿಜಿ ಅವರನ್ನು ಹೊಗಳುವುದಕ್ಕಾಗಿ ಮಾಡಿದಂತಹ ಸಿನಿಮಾವೆನ್ನಿಸಲಿಲ್ಲ. ಬದಲಾಗಿ ಅವರ ಒಳ್ಳೆಯ ಕೆಲಸಕ್ಕಾಗಿ ಮಾಡಿದಂತ ಸಿನಿಮಾ ಅನ್ನಿಸಿತು. ನೈಜ್ಯ ಕತೆಯನ್ನು ಇಟ್ಟುಕೊಂಡು ಭಾರತೀಯರಲ್ಲಿ ದೇಶ ಪ್ರೇಮ ಜಾಗೃತಿ ಮೂಡಿಸುವಲ್ಲಿ ನಿರ್ದೇಶಕನ ಕೈ ಚಳಕಕ್ಕೆ ಹೃತ್ಪೂರ್ವಕವಾಗಿ ಅಭಿನಂದನೆಯನ್ನು ಸಲ್ಲಿಸಲೇಬೇಕು.

‘ಹೌ’ಸ್ ದಿ ಜೋಶ್?’ಎನ್ನುವ ಪಂಚಿಂಗ್ ಸಂಭಾಷಣೆ ಇನ್ನು ನನ್ನ ತಲೆಯಲ್ಲಿ ಉಳಿದುಕೊಂಡಿದೆ. ಅಷ್ಟರ ಮಟ್ಟಿಗೆ ಈ ಸಿನಿಮಾ ನನ್ನನ್ನುಆವರಿಸಿಕೊಂಡಿದೆ. ಈ ಸಿನಿಮಾ ತಂಡದ ಶ್ರಮಕ್ಕೆ ಜೈ ಹೋ…

(For Best Experience Use Headphones)

(ಹಾಡಿನ ರಚನೆ ಮತ್ತು ಹಾಡಿದವರು : ಪ್ರದೀಪ್ ಭಟ್)

Related Article –

”ಪೂವಲ್ಲಿ” ನಾಡಿನ ದೇಶ ಭಕ್ತರು

ಲೇಖನ : ಶಾಲಿನಿ ಪ್ರದೀಪ್

ak.shalini@gmail.com

0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW