(‘ರಂಗ ನೇಪಥ್ಯ’ ಸಮಗ್ರ ರಂಗಭೂಮಿಯ ಒಡನಾಡಿ ಪತ್ರಿಕೆ)
ಕನ್ನಡದ ಹೆಸರಾಂತ ರಂಗ ಪತ್ರಿಕೆ ರಂಗ ನೇಪಥ್ಯವು ಪ್ರತಿತಿಂಗಳೂ ರಂಗ ಸುದ್ದಿಗಳನ್ನು ನಾಡಿನಾದ್ಯಂತ ಪಸರಿಸುತ್ತ ರಂಗಾಸಕ್ತರ ಗಮನ ಸೆಳೆದಿದೆ. ಅಲ್ಲದೆ ವರ್ಷದಲ್ಲಿ ಮೂರು ಬಾರಿ ಸಾಧನೆ ಮಾಡಿದ ಹಿರಿಯ ರಂಗ ವ್ಯಕ್ತಿಗಳ ಕುರಿತು ವಿಶೇಷಾಂಕಗಳನ್ನು ತಂದು ನಾಡಿನ ರಂಗಾಸಕ್ತರ ಗಮನ ಸೆಳೆದಿದೆ. ಹೊಸ ವರ್ಷದ ಮೊದಲ ವಿಶೇಷಾಂಕವಾಗಿ ನಾಟಕಕಾರ ಹೂಲಿ ಶೇಖರರ ರಂಗ ಸಾಧನೆ ಕುರಿತು ಹೊರಹೊಮ್ಮಲಿದೆ. ಹೂಲಿ ಶೇಖರ್ ಪ್ರಖ್ಯಾತ ನಾಟಕಕಾರರು. ಪ್ರಕಟಿತ ನಾಟಕಗಳ ಸಂಖ್ಯೆ ೩೦ ಇದ್ದರೂ ಅಪ್ರಕಟಿತ ನಾಟಕಗಳ ಸಂಖ್ಯೆ ಇನ್ನೂ ಹೆಚ್ಚಿವೆ. ಬರೆದ ಎಲ್ಲ ನಾಟಕಗಳೂ ರಂಗದ ಮೇಲೆ ಹತ್ತಾರು-ನೂರಾರು ಪ್ರಯೋಗ ಕಂಡಿವೆ.
ರಂಗನಟರಾಗಿ, ನಿರ್ದೇಶಕರಾಗಿ, ಸಂಘಟಕರಾಗಿ, ನಾಟಕ ಅಕಾಡೆಮಿಯ ಸದಸ್ಯರಾಗಿ, ಯಶಸ್ವಿ ನಾಟಕಕಾರರಾಗಿ ರಂಗಭೂಮಿಯಲ್ಲಿ ಅಹಿರ್ನಿಶಿ ದುಡಿದಿದ್ದಾರೆ. ಗಾದೆ, ನುಡಿಗಟ್ಟು, ಪ್ರತಿಮೆಗಳ ಮೂಲಕ ಉತ್ತರ ಕರ್ನಾಟಕದ ಭಾಷೆಯನ್ನು ಸಮರ್ಥವಾಗಿ ಕಟ್ಟಿಕೊಡುವ ಮಹತ್ವದ ನಾಟಕಕಾರರಾಗಿದ್ದಾರೆ. ರಂಗ ನೇಪಥ್ಯ ಪತ್ರಿಕೆ ಅವರ ಕುರಿತು ವಿಶೇಷಾಂಕವೊದನ್ನು ಹೊರತರಲು ನಿರ್ಧರಿಸಿದೆ. ಹೂಲಿ ಶೇಖರ್ ಅವರನ್ನು ಹತ್ತಿರದಿಂದ ಬಲ್ಲವರು, ಅವರ ನಾಟಕಗಳ ಸಾಹಿತ್ಯಕ -ಪ್ರಯೋಗಾತ್ಮಕ ಗುಣಗಳ ವಿಶ್ಲೇಷಣೆ ಮಾಡಬಲ್ಲವರು ಹಾಗೂ ಅವರ ಕೊಡುಗೆ ಕುರಿತು ಈ ವಿಳಾಸಕ್ಕೆ-
ಗುಡಿಹಳ್ಳಿ ನಾಗರಾಜ, ಸಂಪಾದಕರು,
ರಂಗ ನೇಪಥ್ಯ, 10/2, ನೇಪಥ್ಯ, 4ನೇ ಕ್ರಾಸ, 2ನೇ ‘ಎ’ ಮುಖ್ಯ ರಸ್ತೆ,
ಗೋವಿಂದರಾಜನಗರ,
ಬೆಂಗಳೂರು – 560040 ಅಥವಾ ಇ ಮೇಲ್- gudihalli@gmail.com, mobail no. 9448568646