ಕನ್ನಡದ ಹೆಸರಾಂತ ಸಮಾಜವಾದಿ ಲೇಖಕ, ಚಿಂತಕ, ಸಂಕ್ರಮಣ ಸಾಹಿತ್ಯ ಪತ್ರಿಕೆಯ ಸಂಪಾದಕ ಪ್ರೊ.ಚಂದ್ರಶೇಖರ ಪಾಟೀಲ ಅವರು ನಮ್ಮನ್ನು ಅಗಲಿದ್ದಾರೆ.
ಬಂಡಾಯ ಸಾಹಿತ್ಯ ಸಂಘಟನೆಯ ಪ್ರಮುಖ ರೂವಾರಿಗಳಲ್ಲೊಬ್ಬರಾಗಿ, ದಲಿತ ಸಂಘರ್ಷ ಸಮಿತಿ ಹಾಗೂ ರೈತ ಚಳವಳಿಯ ಹಿತೈಷಿ ಸ್ನೇಹಿಯಾಗಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ, ಪರ್ಯಾಯ ರಾಜಕಾರಣದ ಚಿಂತಕರಾಗಿ, ಕವಿ- ನಾಟಕಕಾರ – ವಿಮರ್ಶಕ- ಅಂಕಣಕಾರರಾಗಿ ಪ್ರೊ.ಚಂಪಾ ಅವರು ಕನ್ನಡ ಸಾಂಸ್ಕೃತಿಕ ಲೋಕಕ್ಕೆ ಕೊಟ್ಟ ಕೊಡುಗೆ ಗಣನೀಯವಾದದ್ದು.


‘ಕನ್ನಡ ಕನ್ನಡ ಬರ್ರಿ ನಮ್ಮ ಸಂಗಡ’ ಎಂದು ಅವರು ಕೊಟ್ಟ ಕರೆ ಮತ್ತು ‘ಆದಿಕವಿ ಪಂಪ ಅಂತ್ಯಕವಿ ಚಂಪಾ’ ಎಂದು ಪಿ.ಲಂಕೇಶ್ ಅವರು ಕೊಟ್ಟ ವಿಡಂಬನಾತ್ಮಕ ಬಿರುದು ಅತ್ಯಂತ ಜನಪ್ರಿಯವಾಗಿರುವುದನ್ನು ಕನ್ನಡ ಜಗತ್ತು ಎಂದಿಗೂ ಮರೆಯಲಾಗುವುದಿಲ್ಲ. ಪ್ರೊ.ಚಂಪಾ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ.
- ಡಾ.ವಡ್ಡಗೆರೆ ನಾಗರಾಜಯ್ಯ
