ಶಿವನ ವರಿಸಿದ ಶಕ್ತಿ ರೂಪಿಯೆ, ಭವದ ಭಯವನು ಕಳೆಯುವೆ…ಕವಿ ಚನ್ನಕೇಶವ ಜಿ ಲಾಳನಕಟ್ಟೆ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…
ಚಂದ್ರ ಬಿಂಬವು ಘಂಟೆ ರೂಪದಿ
ಹಣೆಯಲಾಕೃತಿ ತಳೆದಿದೆ
ಚಂದ್ರಘಂಟಾ ಮಾತೆ ನಿನ್ನೊಳು
ಮಾತೃ ಪ್ರೇಮವು ನೆಲೆಸಿದೆ
ಶಿವನ ವರಿಸಿದ ಶಕ್ತಿ ರೂಪಿಯೆ
ಭವದ ಭಯವನು ಕಳೆಯುವೆ
ಬುವಿಯ ಮಕ್ಕಳ ನಂಟು ಬೆಳೆಸುವ
ಮಾತೃ ಹೃದಯದ ಬಂಧುವೆ
ಗದೆ ಕಮಂಡಲ ಶೂಲ ಪಿಡಿಯುತ
ಸಿಂಹ ವಾಹನವೇರುವೆ
ಸದೆದು ರಕ್ಕಸರಟ್ಟಹಾಸವ
ಕುಂದು ಚಣದೊಳು ಕಳೆಯುವೆ
ದುಷ್ಟರೆದೆಯನು ತರಿವ ತಾಯಿಯೆ
ಭಕ್ತ ಜನರನು ಪೊರೆಯುವೆ
ಇಷ್ಟದಿಂದಲಿ ಪೂಜೆ ಸಲ್ಲಿಸೆ
ಅಷ್ಟ ಸಿರಿಯನು ನೀಡುವೆ.
- ಚನ್ನಕೇಶವ ಜಿ ಲಾಳನಕಟ್ಟೆ
