ಹದಿನೆಂಟು ವರ್ಷದ ಊನಾ ಓ ನೇಲ್ ಗೆ ಐವತ್ನಾಲ್ಕರರ ಚಾರ್ಲಿ ಚಾಪ್ಲಿನ್ ಪ್ರೇಮ ನಿವೇದನೆಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ ದೀಪಾ ಗೋನಾಳ ಅವರು, ತಪ್ಪದೆ ಮುಂದೆ ಓದಿ…
ಚಾರ್ಲೀ ಚಾಪ್ಲಿನ್ ಊನಾ ಓ ನೇಲ್ ಗೆ
ಪ್ರೇಮದ ನಿವೇದನೆ ಮಾಡಿದಾಗ ಅವಳಿಗೆ ಕೇವಲ ಹದಿನೆಂಟು
ಮತ್ತು ಅವನು ಐವತ್ನಾಲ್ಕರವನಾಗಿದ್ದ.
ಜಗತ್ತು ಹುಬ್ಬೇರಿಸಿತ್ತು.
ಆದರಿದು ಹಗರಣವಾಗಿರಲಿಲ್ಲ.
ಇದೊಂದು ನೈಜ ಪ್ರೇಮವಾಗಿತ್ತು.
ಅವನು ಅವಳ ಕೈ ಹಿಡಿದ
“ನನ್ನ ಬಾಳ ಸಂಗಾತಿಯಾಗಿ ಬಾ ನಾ ನಿನಗೆ ಬದುಕುವುದು ಹೇಗೆಂದು ಕಲಿಸುವೆ. ಮತ್ತು ನೀ ನನಗೆ ಹೇಗೆ ಸಾಯುವುದೆಂದು.”
ಅವಳು ಮುಗುಳ್ನಕ್ಕು ಹೇಳಿದಳು.
“ಇಲ್ಲ ಚಾರ್ಲೀ, ನಾ ನಿನ್ನ ಮದುವೆಯಾಗುವೆ ಅದರಿಂದ ನೀ ನನಗೆ ಬೆಳೆಯಲು ಸಹಾಯ ಮಾಡಬಲ್ಲೆ. ಮತ್ತು ನಾ ನಿನ್ನನ್ನ ಕೊನೆಗಾಲದತನಕ ತರುಣನಾಗಿರಲು ಸಹಾಯ ಮಾಡಬಲ್ಲೆ.” ಮತ್ತು ಅಕ್ಷರಶಃ ಹಾಗೆ ಆಯಿತು.
ಅವರು 1943 ರಲ್ಲಿ ದಾಂಪತ್ಯ ಗೀತೆಗೆ ಸ್ವರ ಸೇರಿಸಿದರು.
8 ಮಕ್ಕಳಿಗೆ ಅಪ್ಪ ಅಮ್ಮಂದಿರಾದರು.
ಕಾಲ ಅವರೀರ್ವರನ್ನ ಬೇರ್ಪಡಿಸುವವರೆಗೂ
ಜೊತೆಯಾಗಿದ್ದರು.
ಚಾರ್ಲೀ 1977 ರಲ್ಲಿ ತನ್ನ 88 ನೇ ವಯಸ್ಸಿನಲ್ಲಿ ಅಸುನೀಗಿದ.
ಊನಾ ತನ್ನ 66 ನೇ ವಯಸ್ಸಿನಲ್ಲಿ 1991 ರಲ್ಲಿ ಕಾಲವಾದಳು.
ಅವಳು ಮತ್ತೊಂದು ಮದುವೆಯಾಗಲಿಲ್ಲ.
ಯಾಕೆಂದರೆ ಒಲವು ಅಮರವಾದಾಗ
ನೀವದನ್ನ ಬದಲಾಯಿಸುವುದಿಲ್ಲ.
ಅವಳಿಗಾಗಿ ಚಾಪ್ಲಿನ್ ಒಂದು ಹೃದಯಸ್ಪರ್ಶಿ ಚಿತ್ರ ಒಂದನ್ನು ರಚಿಸಿದ್ದ.
“ಲೈಮ್ ಲೈಟ್” (ಕ್ಯಾಂಡಲೇಜಸ್) –
“ಮೃದುತ್ವದಲಿ ನೆನಸಿದ ಮಧುರತೆ
ಸುದೀರ್ಘವಾದ ಸಂದೇಶ ನಯವಾಗಿ ಮಾರ್ದನಿಸುವಂತೆ”
“ಬಳಿ ಬಂದೆ ನೀ- ನಾನು ಹೊರ ನಡೆಯುತ್ತಿದ್ದಂತೆ,
ನೀನು ಎಪ್ರೀಲಿನ ಬೆಳಕಿನಂತೆ-
ನಾನು ಮಂಕಾದ ಮಧ್ಯಾಹ್ನ”
“ಅಮರತ್ವದ” ಪೂರ್ಣ ಸಾಹಿತ್ಯ ಈ ಜಗದಾಚೆಗಿನ ಪ್ರೇಮದ ಕುರಿತು ಗುನುಗುತ್ತದೆ.
ನಾನು ನಿನ್ನ ನಿತ್ಯ ಪ್ರೇಮಿಸುತ್ತಲೇ ಇರುವೆ.
ನಿಜವಾದ ಒಲವಿನಿಂದ, ಅಂತ್ಯವಿಲ್ಲದೆಯೇ..
ನನ್ನೆದೆಯ ಆದಿಯಿಂದ, ನನ್ನ ಎದೆಯೊಳಗೆ
ನನಗಿದು ಯಾವಾಗಲೂ ತಿಳಿದಿರುವಂತೆ
ನೀನು ನನ್ನವಳಾಗಿರುವಾಗ ನನ್ನವಳು ಮಾತ್ರ ಆಗಿರುವಾಗ ಸೂರ್ಯ ಜಗಮಗಿಸುತ್ತಾನೆ.
ಅಲ್ಲಿ ಯಾವೊಬ್ಬ ಹೊಸಬರು ಇಲ್ಲ ನನಗೆ, ಓ ಪ್ರಿಯೆ
ಆಕಾಶವೇ ಕಳಚಿ ಬೀಳಬಹುದು
ನೆನಪಿರಲಿ, ನಾ ನಿನಗೆ ನಂಬಿಕಸ್ಥನಾಗಿರುವೆ
ನಿನ್ನ ಪ್ರೀತಿಸುವೆ ಅಂತ್ಯವೇ ಇಲ್ಲದಂತೆ.
ಅರಿವು:
ಯಾರು ನಿಜಕ್ಕೂ ಪ್ರೇಮಿಸುತ್ತಾರೊ
ಕೈ ಬಿಡುವುದಿಲ್ಲ
ಓಡಿ ಹೋಗುವುದಿಲ್ಲ
ಸುಳ್ಳಾಡುವುದಿಲ್ಲ
ಕ್ಷಮೆಗಳ ಹಿಂದೆ ನುಸುಳುವುದಿಲ್ಲ
ಅವರು ನಿಲ್ಲುತ್ತಾರೆ ಕೊನೆತನಕ
- ಕನ್ನಡಕ್ಕೆ – ದೀಪಾ ಗೋನಾಳ
