ಲಲನೆಯರ ಹೃದಯ ಕದ್ದ ತಿನಿಸುಗಳು



ಕ್ಷಣ ಹೊತ್ತು ನಾಲಿಗೆ ಮಾತು ಕೇಳಿ, ರಾಸಾಯನಿಕವನ್ನ ಹೊಟ್ಟೆಗೆ ಸುರುವಿಕೊಂಡು ಕಾಯಿಲೆ ತಂದುಕೊಳ್ಳದಿರಿ. ನಾಲಿಗೆಗೆ ಮೂಗುದಾರ ಹಾಕಿ ಎಚ್ಚರ… ಎನ್ನುತ್ತಾರೆ ವೈದ್ಯರಾದ ಡಾ.ಪ್ರಕಾಶ ಬಾರ್ಕಿಯವರು. ರುಚಿಗೆ ಬಳಸುವ ಟೇಸ್ಟಿಂಗ್ ಪೌಡರ್ ಬಗ್ಗೆ ತಿಳಿದಿರಿ…

ಜಿಹ್ವಾಚಾಪಲ್ಯ ತಣಿಸುವ ತಿನಿಸುಗಳ ರಹಸ್ಯ

ಪ್ರತಿ ದಿನ ಸೂರ್ಯ ಮುಳುಗುವ ತರಾತುರಿ ಸಂಜೆಯಾದರೆ ಸಾಕು, ಹೆಂಗಳೆಯರು ಜೇನು ನೋಣದಂತೆ ಮುತ್ತಿಕ್ಕುವುದು ರಸ್ತೆ ಬದಿಯ ಗೂಡಂಗಡಿಗಳಿಗೆ.

ಅಲ್ಲಿ ಸಿಗುವಂತ ಬಗೆಬಗೆಯ ಬಣ್ಣ, ಸುವಾಸನೆ, ರುಚಿ ಇರುವ ಗೋಬಿ ಮಂಚೂರಿ, ಪಾನಿ ಪೂರಿ, ಎಗ್ಗರೈಸ್, ಪ್ರೈಡ್ ರೈಸ್, ಮ್ಯಾಗಿ, ಮಾಂಸದ ವಿವಿಧ ತಿನಿಸು, ಚೀನಿ ಫಾಸ್ಟ್ ಫುಡ್ ಗಳಿಗೆ. ಹಾಗಂತ ಗಂಡಸರು ಹಿಂದೇ ಬಿದ್ದಿಲ್ಲ.

ಮಕ್ಕಳಿಂದ ಹಿಡಿದು ಎಲ್ಲರೂ ಪ್ರತಿದಿನ ಹೀಗೆ ಇಷ್ಟಪಡುವ ತಿಂಡಿಗಳು ಆರೋಗ್ಯಕರವಲ್ಲದಿದ್ದರೂ.. ಜಿಹ್ವಾಚಾಪಲ್ಯ ತೀರಿಸುವಲ್ಲಿ ಅಗ್ರಗಣ್ಯ ತಿನಿಸುಗಳು.

ಆ ತಿನಿಸುಗಳು ನಾಲಿಗೆಯ ರುಚಿಗ್ರಂಥಿಗಳನ್ನೆ ಮರಳು ಮಾಡಿಬಿಡುತ್ತವೆ. ನಾವೋ ನಾಲಿಗೆಯ ಮಾತು ಪಾಲಿಸುವವರು.

ಇಂತಿಪ್ಪ ತಿನಿಸುಗಳು ಅದ್ಯಾಕೆ ಅಷ್ಟು ರುಚಿ ಅಂತ ಕೆದಕತೊಡಗಿದಾಗ.. ತಿಳಿದಿದ್ದು “ಟೇಸ್ಟಿಂಗ್ ಪೌಡರ್” ರಹಸ್ಯ.

 

ಫೋಟೋ ಕೃಪೆ : verywellhealth

ಅಬ್ಬಾ..!! ಟೆಸ್ಟಿಂಗ್ ಪೌಡರ್ ಮಹಿಮೆ ಅಪಾರ.

ಎಲ್ಲರನ್ನೂ ಜೊಲ್ಲು ಸುರಿಯುವಂತೆ ಮಾಡಿಬಿಡುತ್ತೆ.

ಸಾಮಾನ್ಯವಾಗಿ ಎಲ್ಲರೂ “ಟೇಸ್ಟಿಂಗ್ ಪೌಡರ್” ಅಂತ ಕರೆಯುವ ಈ ಸಾಲ್ಟನ್ನ “ಅಜಿನೋಮೋಟೋ” (ಜಪಾನ್ ಕಂಪನಿ ಹೆಸರು) ಎನ್ನುತ್ತಾರೆ.

ಟೇಸ್ಟಿಂಗ್ ಪೌಡರ್, ಚೀನಿ ಸಾಲ್ಟ್, ಅಜಿನೋಮೋಟೋ, taste enhancer, food flavour ಅಂತಾ ವಿವಿಧ ನಾಮಧೇಯ ಹೊಂದಿರುವ ಈ ಪೌಡರ್… ಮೋನೊಸೋಡಿಯಂ ಗ್ಲುಟಮೇಟ್ (#Monosodium_Glutamate) ರಾಸಾಯನಿಕ.

ಅಜಿನೋಮೋಟೋ ಪೌಡರ ಹಲವು ಹೋಟೆಲ್ಗಳ ರುಚಿಯ ಹಿಂದಿನ #ಚಿದಂಬರ_ರಹಸ್ಯ. ಇನ್ನೂ ಚೀನಾ ಫಾಸ್ಟ್ ಫುಡ್ಗಳಲ್ಲಿ ಯಥೇಚ್ಛವಾಗಿ ಬಳಸುತ್ತಾರೆ. ಅದಕ್ಕೆ ಜಪಾನಿನಲ್ಲಿ ತಯಾರಾದರೂ.. ಚೀನಿ ಸಾಲ್ಟ್ ಅಂತ ಕರೆಯುವುದು.

ಪ್ಯಾಕ್ಡ್ ಫುಡ್, ಮ್ಯಾಗಿ, ಚಿಪ್ಸ್, ಎಗ್ಗರೈಸ್ , ಗೋಬಿ ಮಂಚೂರಿ ಮುಂತಾದ ತಿನಿಸುಗಳಲ್ಲಿ ಕಡ್ಡಾಯವಾಗಿ ಹಲವರು ಬಳಸುತ್ತಾರೆ ಸಾಲದ್ದಕ್ಕೆ ಕಲುಷಿತ ಎಣ್ಣೆ, ಹಲವು ಮಾರಕ ರಾಸಾಯನಿಕ ಬಣ್ಣಗಳು.

ಫೋಟೋ ಕೃಪೆ : youtube

Monosodium Glutamate/Ajinomoto (ಟೆಸ್ಟಿಂಗ್ ಪೌಡರ್) ಬಗ್ಗೆ ನೋಡುವ.

ಇದೊಂದು ವಿವಾದಾತ್ಮಕ ರಾಸಾಯನಿಕ. ವೈದ್ಯರ ಪ್ರಕಾರ ಟೇಸ್ಟಿಂಗ್ ಪೌಡರ್ “ಸೈಲೆಂಟ್ ಕಿಲ್ಲರ್”.

ನಿಧಾನವಾಗಿ ದೇಹವನ್ನ ಸೇರುತ್ತಾ ಮುಂದೊಂದು ದಿನ ಮರ್ಮಾಘಾತ ಕಾಯಿಲೆ ತಂದೊಡ್ಡುವ ರಾಸಾಯನಿಕ.

ಕೆಲವು ತಿನಿಸುಗಳನ್ನ ಸೇವಿಸಿದ ನಂತರ ಕೈಕಾಲು ತಣ್ಣಗಾದಂತಾಗಿ ಜೋಮು ಹಿಡಿಯುವುದು, ಹೃದಯ ಬಡಿತ ಹೆಚ್ಚಾಗಿ ಬೆವರುವುದು, ಮುಖ ಕೆಂಪಗಾಗಿ ಊದಿಕೊಳ್ಳುವುದು, ತಲೆಭಾರ ಅನ್ನಿಸಿ ಉಬ್ಬಳಿಸಿದಂತಾಗುವುದನ್ನ #Chinese_restaurant_syndrome “ಚೈನಿಸ್ ರೆಸ್ಟೋರೆಂಟ್ ಸಿಂಡ್ರೋಮ್” ಅಂತಾ ಕರೀತಾರೆ. ಮುಖ್ಯ ಕಾರಣ ಮೊನೋಸೋಡಿಯಂ ಗ್ಲುಟಮೇಟ್ ರಾಸಾಯನಿಕ ಅದೇ ಟೇಸ್ಟಿಂಗ್ ಪೌಡರ್.

ಸೇವಿಸಿದ ಆಹಾರದಲ್ಲಿ ಯಥೇಚ್ಛವಾಗಿ ಟೇಸ್ಟಿಂಗ್ ಪೌಡರ್ ಸುರಿದಿದ್ದಾರೆ ಅಂತಾನೇ ಅರ್ಥ.

ಗೊತ್ತಾಯಿತಲ್ಲ ಲಲನೆಯರ ಮನಗೆದ್ದ ತಿನಿಸುಗಳು ಹಿಂದಿನ ಮಾಂತ್ರಿಕ ರಹಸ್ಯ “ಮೊನೋಸೋಡಿಯಂ ಗ್ಲುಟಮೇಟ್” ಅಂತ.

ಫೋಟೋ ಕೃಪೆ : The Mirror

ಪ್ರತಿದಿನ ಹೀಗೆಯೇ ನಾಲಿಗೆ ಮತ್ತು ಮೂಗಿನ ಘ್ರಾಣ ಮೋಹಕ್ಕೆ ಬಿದ್ದರೆ ಆಗುವ ಅನಾಹುತಗಳನ್ನ ಓದಿದರೆ ಕೈಕಾಲು ಸಣ್ಣಗೆ ನಡುಗಲು ಪ್ರಾರಂಭಿಸುತ್ತವೆ.

#ತಲೆನೋವು#ಮುಖ_ಊದುವಿಕೆ,  #ತೀವ್ರ_ಬೆವರು
#ಹೃದಯ_ಬಡಿತ_ಏರುಪೇರು.
#ಉಬ್ಬಳಿಕೆ  #ಕಣ್ಣು_ಮಂಜಾಗುವಿಕೆ, #ವಾಂತಿ, ಭೇದಿ ಇವು ಸಾಮಾನ್ಯ ಅಡ್ಡಪರಿಣಾಮಗಳು.

  • ದೀರ್ಘಕಾಲದವರೆಗೆ ನಾವು ಟೇಸ್ಟಿಂಗ್ ಪೌಡರ್ ಸುರಿದ ತಿನಿಸು ತಿಂದರೆ..ಆಗುವ ಅವಘಡಗಳು…ಒಂದೆರಡಲ್ಲ
  • ಅರ್ಧ ತಲೆನೋವು (Migraine)
  • ಎದೆ ಉರಿ ಮತ್ತು ಎದೆ ಬಿಗಿತ.
  • ಕೀಲು, ಎಲುಬುಗಳಲ್ಲಿ ತೀವ್ರ ನೋವು ಕಾರಣ ಕ್ಯಾಲ್ಸಿಯಂ ದೇಹದಿಂದ ಹೂರದೂಡಲ್ಪಡತ್ತೆ.
  •  ರಕ್ತದೊತ್ತಡ (Blood pressure) ಹೆಚ್ಚು ಅಥವಾ ಕಡಿಮೆಯಾಗುತ್ತೆ. (Tachycardia or Bradycardia)
  • ನರರೋಗಗಳು.
  •  ಮೆದುಳಿನ ಮೇಲೆ ತೀವ್ರಾಘಾತ ಉದಾಹರಣೆಗೆ ಅಲ್ಜೀಮರ್, ಪಾರ್ಕಿನ್ಸನ್ ಮುಂ.. ಕಾಯಿಲೆ.
  • ಅಸ್ತಮಾ, ಉಸಿರಾಟದ ತೊಂದರೆ.
  • ಹೃದಯದ ಮಾಂಸ ಖಂಡಗಳು ಶಕ್ತಿಹೀನವಾಗಿ ಹೃದಯಾಘಾತ ಸಂಭವಿಸಬಹುದು.
  • ದೇಹದ ತೂಕ ಹೆಚ್ಚಾಗುವುದು (ಬೊಜ್ಜು, Obesityಬಂಜೆತನ (infertility)
  • ಹೊಟ್ಟೆಯ ಕ್ಯಾನ್ಸರ್.
  • ಗರ್ಭಿಣಿಯರು ಸೇವಿಸಿದರೆ placenta (ಜರಾಯು) ಛಿದ್ರವಾಗಿ, ಭ್ರೂಣದ ಆಹಾರ ಸರಬರಾಜುವಿನಲ್ಲಿ ಏರುಪೇರಾಗಿ.. ಭ್ರೂಣದ ಪ್ರಾಣಕ್ಕೆ ಕಂಟಕ.
  •  ವ್ಯಸನದಂತೆ ಗಂಟುಬೀಳುವುದು (Addictive)

ಆಲ್ಕೋಹಾಲ್ (ಸಾರಾಯಿ), ನಿಕೋಟಿನ್ (ತಂಬಾಕು)ಗಿಂತ ಅಪಾಯಕಾರಿ, ಸೈಲೆಂಟ್ ಕಿಲ್ಲರ್ ಮತ್ತು ವ್ಯಸನಕ್ಕೆ ಕೆಡುವುವಂತ ರಾಸಾಯನಿಕವಿದು ಎಂಬುದು ವೈದ್ಯರ ಅಂಬೋಣ.
FDA ಪ್ರಕಾರ Safe taste enhancer ಅಂತೆ.



ಹೆಚ್ಚು ಮೊನೋಸೋಡಿಯಂ ಗ್ಲುಟಮೇಟ್ (ಟೇಸ್ಟಿಂಗ್ ಪೌಡರ) ತೀರಾ ಅಪಾಯಕಾರಿ.

ನೀವು ಯಾವುದಾದರೂ Packed ತಿನಿಸು, ಆಹಾರ ಪದಾರ್ಥ ಕೊಳ್ಳುವ ಮೊದಲು ingredients ಮೇಲೆ ಒಮ್ಮೆ ಕಣ್ಣಾಡಿಸಿ flavour enhancer, Taste enhancer, glutamate ಅಂತಾ.. ಟೇಸ್ಟಿಂಗ್ ಪೌಡರ ಸೇರಿಸಿದ್ದನ್ನ ಗಮನಿಸಿ ನಂತರ ಖರೀದಿಸಿ.

ಜನ ಮರುಳೋ..ಜಾತ್ರೆ ಮರುಳೋ.‌.. ಟೇಸ್ಟಿಂಗ್ ಪೌಡರ್ಗೆ ಅನ್ನುವಂತಾಗಿದೆ.

ಕ್ಷಣ ಹೊತ್ತು ನಾಲಿಗೆ ಮಾತು ಕೇಳಿ, ರಾಸಾಯನಿಕವನ್ನ ಹೊಟ್ಟೆಗೆ ಸುರುವಿಕೊಂಡು ಕಾಯಿಲೆ ತಂದುಕೊಳ್ಳದಿರಿ. ನಾಲಿಗೆಗೆ ಮೂಗುದಾರ ಹಾಕಿ.
ಎಚ್ಚರ!!!!!


  • ಡಾ.ಪ್ರಕಾಶ ಬಾರ್ಕಿ(ವೈದಕೀಯ ಬರಹಗಾರರು, ಆಯುರ್ವೇದ ವೈದ್ಯರು) , ಕಾಗಿನೆಲೆ

1 1 vote
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW