ನಮ್ಮ ಗಾಬರಿ, ಶಬ್ಧ, ಕೂಗಾಟ ಕೇಳಿಸಿಕೊಂಡು ನಮ್ಮವರು ಕೂಡಲೇ ಬಂದು ನೋಡಿದರೆ….ಏನಿತ್ತು? ತಪ್ಪದೆ ಮುಂದೆ ಓದಿ.. ಸರ್ವಮಂಗಳ ಜಯರಾಮ್ ಅವರ ‘ಚೌಚೌ ಬಾತ್’ ಅಂಕಣದಲ್ಲಿ ‘ಮಿಕ್ಸಿ ಆನ್ ಮಾಡಿದಾಗ’
ಆಗ ನನ್ನ ಮಗಳಿಗೆ ಒಂದು ವರ್ಷದ ಹಾಗೂ ನನ್ನ ಮಗನಿಗೆ ನಾಲ್ಕು ವರ್ಷದ ಹುಟ್ಟು ಹಬ್ಬದ ಸಂಭ್ರಮ. ಇಬ್ಬರದ್ದು ಜನವರಿ ತಿಂಗಳಿನಲ್ಲಿ ಬರ್ತಡೇ ಇದ್ದಿದ್ದರಿಂದ ಒಟ್ಟಿಗೆ ಒಂದೇ ದಿನ ಆಚರಿಸುತ್ತಿದ್ದೆವು. ಮನೆ ತುಂಬಾ ನೆಂಟರು ತುಂಬಿದ್ದರು. ಅಂದು ಸಂಜೆ ನಾನು ಗಡಿಬಿಡಿಯಲ್ಲಿ ಹಬ್ಬದ ಅಡುಗೆ ಮಾಡುತ್ತಿದ್ದೆ. ಒಬ್ಬಟ್ಟಿನ ಕೆಲಸ ಮುಗಿದಿತ್ತು.
ಸಾಂಬಾರಿಗೆ ಖಾರ ರುಬ್ಬಿಕೊಳ್ಳಲು ಎಲ್ಲಾ ಸಾಮಗ್ರಿ ಜೋಡಿಸಿಕೊಂಡು ಮಿಕ್ಸಿಗೆ ಹಾಕುತ್ತಿದ್ದೆ. ಮಧ್ಯ ಮಧ್ಯ ಸ್ವಲ್ಪ ನೀರು ಹಾಕಲೆಂದು ಮಿಕ್ಸಿ ಜಾರ್ ನ ಮುಚ್ಚಳ ತೆಗೆದೆ. ಎಲ್ಲಿಂದ ಬಂದಳೋ ನಮ್ಮ ಪುಟ್ಟಿ ….ಪುಟ್ಟ ಪುಟ್ಟ ಹೆಜ್ಜೆ ಇಟ್ಟು ನನ್ನ ಸಮೀಪ ಬಂದಳು. ಅವಳು ಆಗಿನ್ನೂ ನಡೆಯುವುದನ್ನು ಕಲಿಯುತ್ತಿದ್ದಳು. ಬಂದವಳೇ ಮಿಕ್ಸಿ ಆನ್ ಮಾಡಿಬಿಟ್ಟಳು. ಒಂದೇ ಕ್ಷಣದಲ್ಲಿ ಮಿಕ್ಸಿ ಜಾರ್ ನೊಳಗಿದ್ದ ಅಷ್ಟೂ ಕಾರವೆಲ್ಲ ಮನೆಯ ಅಡುಗೆ ಕೋಣೆಯ ಗೋಡೆಗೆ ಸಿಡಿದಿದ್ದಲ್ಲದೆ ನನ್ನ ತಲೆ ಮೇಲೆ, ಮುಖದ ಮೇಲೆ, ಬಟ್ಟೆ ಮೇಲೆಲ್ಲಾ ಸಿಡಿದು ಬಿಟ್ಟಿತ್ತು. ಏನಾಯ್ತು ಎಂದು ಗಾಬರಿಯಿಂದ ನೋಡುವಷ್ಟರಲ್ಲಿ ಎಲ್ಲಾ ಕಡೆ ಖಾರ ಸಿಡಿದು ಬಿಟ್ಟಿತ್ತು. ಪುಣ್ಯಕ್ಕೆ ನಾನು ಜಾರ್ ನೊಳಕ್ಕೆ ಕೈ ಇಟ್ಟಿರಲಿಲ್ಲ.
ನಮ್ಮ ಗಾಬರಿ, ಶಬ್ಧ, ಕೂಗಾಟ ಕೇಳಿಸಿಕೊಂಡು ನಮ್ಮವರು ಕೂಡಲೇ ಬಂದು ಮಿಕ್ಸಿ ಆಫ್ ಮಾಡಿದರು. ಆ ಶಬ್ದಕ್ಕೆ ನೆಂಟರೆಲ್ಲರೂ ಅಡುಗೆ ಮನೆಗೆ ಓಡಿ ಬಂದು ನನ್ನನ್ನು ನೋಡಿ ಬಿದ್ದು ಬಿದ್ದು ನಕ್ಕರು. ಮುಖ, ತಲೆ ಮೇಲೆ, ಬಟ್ಟೆ ಮೇಲೆಲ್ಲಾ ಕಾರ ಸಿಡಿಸಿಕೊಂಡು ಕೆಂಬೂತವಾಗಿದ್ದ ನನ್ನನ್ನು ನೋಡಿ ನಗದೇ ಇರುತ್ತಾರೆಯೇ. ನನಗೂ ನಗು ಬಂತು. ತಕ್ಷಣ ಹೋಗಿ ಮತ್ತೆ ಸ್ನಾನ ಮಾಡಿ ಬಂದೆ. ಆ ಕ್ಷಣಕ್ಕೆ ನನಗೆ ನಮ್ಮ ಪುಟ್ಟಿಯ ಮೇಲೆ ಕೋಪ ಬಂದು, ಚೆನ್ನಾಗಿ ಹೊಡೆಯಬೇಕೆನಿಸಿತು. ಅಷ್ಟು ಕೋಪ ಬಂತು. ಆದರೆ ಪಾಪ ಏನೂ ಅರಿಯದ ಮುಗ್ಧ ಕಂದಮ್ಮ ಕುತೂಹಲಕ್ಕೆಂದು ಆ ರೀತಿ ಮಾಡಿರುತ್ತಾಳೆ ಎಂದು ಸುಮ್ಮನಾಗದೆ ವಿಧಿ ಇರಲಿಲ್ಲ. ಅಲ್ಲದೆ ಮನೆಗೆ ಬಂದ ನೆಂಟರ ಮುಂದೆ ಮಗುವನ್ನು ಹೊಡೆಯಲಾದೀತೇ …. ಬರ್ತಡೇ ಗರ್ಲ್ ಬೇರೆ ಅವಳು. ಬೊಂಬೆಯಂತೆ ರೆಡಿ ಆಗಿದ್ದಳು. ನಾವೆಲ್ಲರೂ ನಡೆದ ಘಟನೆಯ ಬಗ್ಗೆ ನಗುತ್ತಾ ಮಾತನಾಡುತ್ತಿದ್ದರೆ ಅವಳು ಏನೊಂದೂ ಅರಿಯದೆ ಪಿಳಿ ಪಿಳಿ ಕಣ್ಣು ಬಿಡುತ್ತಿದ್ದಳು. ಮತ್ತೆ ಸಾಂಬಾರಿಗೆ ಬೇರೆ ಖಾರ ರುಬ್ಬಿದ್ದಾಯಿತು.
ಖಾರ ಎಲ್ಲಾದರೂ ಹೋಗ್ಲಿ ಅಡಿಗೆ ಮನೆ ಕ್ಲೀನ್ ಮಾಡೋದಿದೆಯಲ್ಲ ಅದು ಭಾರೀ ತಲೆನೋವಿನ ಕೆಲಸ. ಹೇಗೋ ನೆಂಟರೆಲ್ಲರೂ ಸೇರಿಕೊಂಡು ಅಡುಗೆ ಮನೆ ಕ್ಲೀನ್ ಮಾಡಿಕೊಟ್ಟರು. ಇಂದಿಗೂ ಮಿಕ್ಸಿ ಆನ್ ಮಾಡಿದಾಗಲೆಲ್ಲ ಆ ಘಟನೆ ನೆನಪಾಗಿ ನಗು ಬರುತ್ತದೆ. ಈಗ ನನ್ನ ಮಗಳಿಗೆ ಹೇಳಿದರೆ… ಸಾಕು ಬಿಡು ಮಮ್ಮಿ , ಎಷ್ಟು ಸಲ ಅಂತ ಹೇಳಿದ್ದೇ ಹೇಳ್ತೀಯಾ ಅಂತ ಹುಸಿ ಕೋಪದಿಂದ ಕೆನ್ನೆ ಉಬ್ಬಿಸುತ್ತಾಳೆ.
ಅಂಕಣದ ಹಿಂದಿನ ಸಂಚಿಕೆಗಳು :
- ‘ಚೌಚೌ ಬಾತ್’ ಅಂಕಣ (ಭಾಗ-೧)
- ‘ಚೌಚೌ ಬಾತ್’ ಅಂಕಣ (ಭಾಗ – ೨)
- ‘ಚೌಚೌ ಬಾತ್’ ಅಂಕಣ (ಭಾಗ – ೩)
- ‘ಚೌಚೌ ಬಾತ್’ ಅಂಕಣ (ಭಾಗ – ೪)
- ‘ಚೌಚೌ ಬಾತ್’ ಅಂಕಣ (ಭಾಗ – ೫) – ಕ್ಯಾಂಡಲ್ ಫೋಟೋ ಹವಾ
- ‘ಚೌಚೌ ಬಾತ್’ ಅಂಕಣ (ಭಾಗ – ೬) -ಶ್ರೀಮಂತ ಭಿಕ್ಷುಕ
- ‘ಚೌಚೌ ಬಾತ್’ ಅಂಕಣ (ಭಾಗ – ೭) – ಬೆರಕೆ ಸೊಪ್ಪು
- ‘ಚೌಚೌ ಬಾತ್’ ಅಂಕಣ (ಭಾಗ –೮) – ಪಾಸ್ ಪ್ರಸಂಗ
- ‘ಚೌಚೌ ಬಾತ್’ ಅಂಕಣ (ಭಾಗ – ೯) – ಸುಲಭವೇನೇ ಗೆಳತಿ
- ‘ಚೌಚೌ ಬಾತ್’ ಅಂಕಣ (ಭಾಗ –೧೦) – ಆತ್ಮಹತ್ಯೆ ಎಂಬ ದುಷ್ಕೃತ್ಯ
- ‘ಚೌಚೌ ಬಾತ್’ ಅಂಕಣ (ಭಾಗ – ೧೧) – ಬುಸ್ ಬುಸ್ ನಾಗಪ್ಪ
- ‘ಚೌಚೌ ಬಾತ್’ ಅಂಕಣ (ಭಾಗ –೧೩)- ‘ಒನ್ ಫೋರ್ ಥ್ರೀ’
- ‘ಚೌಚೌ ಬಾತ್’ ಅಂಕಣ (ಭಾಗ –೧೪) – ‘ಮಕ್ಕಳ ನಿರ್ಲಕ್ಷ್ಯ ತಂದ ಆಪತ್ತು’
- ‘ಚೌಚೌ ಬಾತ್’ ಅಂಕಣ (ಭಾಗ –೧೫)- ‘ಎಲ್ಲಿಗೆ ಬಂದಿದೆ ಸ್ವಾತಂತ್ರ್ಯ’
- ‘ಚೌಚೌ ಬಾತ್’ ಅಂಕಣ (ಭಾಗ –೧೬) – ತಾಳ್ಮೆ ಇಲ್ಲದ ಜೀವನ
- ‘ಚೌಚೌ ಬಾತ್’ ಅಂಕಣ (ಭಾಗ –೧೭) – ತಾಳ್ಮೆ ಇಲ್ಲದ ಜೀವನ
- ‘ಚೌಚೌ ಬಾತ್’ ಅಂಕಣ (ಭಾಗ –೧೮)-ಮೊಲೆ ಮೂಡದ ಹೊತ್ತಿನಲ್ಲಿ
- ‘ಚೌಚೌ ಬಾತ್’ ಅಂಕಣ (ಭಾಗ –೧೯)- ‘ಬೀಡಿ ಲಿಂಗಮ್ಮಜ್ಜಿ’
- ‘ಚೌಚೌ ಬಾತ್’ ಅಂಕಣ (ಭಾಗ –೨೦) -ಕುರಿ ಕಳ್ಳರು
- ‘ಚೌಚೌ ಬಾತ್’ ಅಂಕಣ (ಭಾಗ –೨೧) – ನಚ್ಚಗಾಗುವುದೆಂದರೆ
- ‘ಚೌಚೌ ಬಾತ್’ ಅಂಕಣ (ಭಾಗ –೨೨) -ರಾಗಿ ಮುದ್ದೆಗೂ ಒಂದು ಕಾಲ
- ‘ಚೌಚೌ ಬಾತ್’ ಅಂಕಣ (ಭಾಗ – ೨೩)- ಸೋಲೇ ಗೆಲುವಿನ ಸೋಪಾನ
- ‘ಚೌಚೌ ಬಾತ್’ ಅಂಕಣ (ಭಾಗ – ೨೪) – ದೇವರ ಪ್ರತಿರೂಪ
- ‘ಚೌಚೌ ಬಾತ್’ ಅಂಕಣ (ಭಾಗ – ೨೫)- ‘ವಿಚಿತ್ರ ಬಾಲಕ’
- ‘ಚೌಚೌ ಬಾತ್’ ಅಂಕಣ (ಭಾಗ – ೨೬)- ದೆಹಲಿಯ ಸುತ್ತಮುತ್ತ
- ‘ಚೌಚೌ ಬಾತ್’ ಅಂಕಣ (ಭಾಗ – ೨೭) – ಅತಿಮಾನುಷ ಶಕ್ತಿಯ ಅನುಭವ
- ‘ಚೌಚೌ ಬಾತ್’ ಅಂಕಣ (ಭಾಗ – ೨೮) – ಸಬ್ಬಸಿಗೆ ಸೊಪ್ಪು
- ‘ಚೌಚೌ ಬಾತ್’ ಅಂಕಣ (ಭಾಗ – ೨೯) – ಊರ್ ಉಸಾಬರಿ ನಮಗ್ಯಾಕೆ
- ‘ಚೌಚೌ ಬಾತ್’ ಅಂಕಣ (ಭಾಗ – ೩೦) – ಮದುವೆ ಊಟದ ಕಿರಿಕಿರಿ
- ‘ಚೌಚೌ ಬಾತ್’ ಅಂಕಣ (ಭಾಗ – ೩೧) – ‘ಸಂಸ್ಕಾರ ಕಲಿಸಿದ ಪುಸ್ತಕ’
- ‘ಚೌಚೌ ಬಾತ್’ ಅಂಕಣ (ಭಾಗ – ೩೨) – ‘ಭೂತಣ್ಣನ ಹಲಸಿನ ಹಣ್ಣು’
- ‘ಚೌಚೌ ಬಾತ್’ ಅಂಕಣ (ಭಾಗ – ೩೩) – ‘ಕಾಲ್ಗೆಜ್ಜೆಯ ನಾದವಿಲ್ಲ’
- ‘ಚೌಚೌ ಬಾತ್’ ಅಂಕಣ (ಭಾಗ – ೩೪) – ‘ತಾಯಿಯ ಆಶಯ’
- ಸರ್ವಮಂಗಳ ಜಯರಾಮ್ – ಗೌರಿಬಿದನೂರು.
