ಕವಿಯತ್ರಿ ಗೀತಾ ಜಿ ಹೆಗಡೆ ಕಲ್ಮನೆ ಅವರ ಲೇಖನಿಯಲ್ಲಿ ಅರಳಿದ ಚುಟುಕುಗಳು ‘ಓ…ನನ್ನ ಪ್ರೇಮಿ.. ನೀನು ಯಾವುದಕ್ಕಿಲ್ಲ ಕಮ್ಮಿ… ತಪ್ಪದೆ ಎಲ್ರು ಓದಿ ಮುಂದಿನ ಸಾಲುಗಳನೊಮ್ಮೆ…
ಚಳಿ
ನೀನು ಮೌನಕ್ಕೆ ಆಗಾಗ
ಶರಣಾಗುವುದು ಗೊತ್ತಿಲ್ಲವೆಂದೇನಲ್ಲ
ಆದರೂ ಒಂದಿಷ್ಟು ಹೊತ್ತು
ನೀನು ಅರಳುರಿದಂತೆ ಮಾತನಾಡುವುದು
ಈ ಕಿವಿಗಳು ಕೇಳಬೇಕಂತೆ
ನಿನ್ನ ಮೌನದ ದಿನಗಳಲ್ಲಿ
ಅದು ಈ ಚಳಿಗೆ
ಮಿರ್ಚಿ ಮಂಡಕ್ಕಿ ಇದ್ದಂತೆ.
***********
ಹಲೋ…
ನಾನು ಪ್ರೇಮಿ
ನೀನು ಹರಾಮಿ
ಅದಕೆ ನನಗೂ ನಿನಗೂ
ಕೂಡಿ ಬರೋದಿಲ್ಲ
ಐಷಾರಾಮಿ!
ಹಿ…ಹಿ…
ಇದಕ್ಕಾದರೂ ಈ ಚಳಿಗೆ
ಹೀರಿಬಿಡೋಣ
ಒಂದು ಖಡಕ್ ಬಿಸಿ ಬಿಸಿ ಚಹಾ
ಮತ್ತೆ ಮರೆತು ಬಿಡೋಣ
ಯಾರಿಗೂ ತಿಳಿಯದಂತೆ.
***********
ನನಗಂತೂ ಊಟ ಬೇಕಾಗಿದೆ
ಒಗ್ಗರಿಸಿಬಿಡು ತಡ ಮಾಡದೆ
ನಿನ್ನ ನಿಧಾನ ಗತಿ ಸಾಕಾಗಿದೆ
ಹೊಟ್ಟೆ ತುಂಬಾ ಹಸಿವಾಗುತಿದೆ
ಮತ್ತೆ ಮತ್ತೆ…..
ಈ ಚಳಿಗೆ ನಿನ್ನ ತಬ್ಬಿಕೊಂಡು
ಮಲಗಬೇಕಾಗಿದೆ!
**********
ಓ…ನನ್ನ ಪ್ರೇಮಿ
ನೀನು ಯಾವುದಕ್ಕಿಲ್ಲ ಕಮ್ಮಿ
ಆಗಾಗ ಬಂದು ಕಿಚಾಯಿಸ್ತೀಯಾ
ಬರಿ ಬರಿ ಅಂತೀಯಾ
ಹೋಗೋ ನಾನು ಬರೆಯೋದಿಲ್ಲಾ ಏನೂ
ಯಾಕಂತಂತಂದ್ರೆ …..
ಈ ಚಳಿ ಬಿಟ್ಟಿಲ್ಲಾ ಇನ್ನೂ.
***********
ಬರುವೆನೆಂದು ಬಾರದಿಹ ನೀನು
ಹೋಗಿದ್ದಾದರೂ ಎಲ್ಲಿಗೆ?
ಚಳಿಯ ನಡುಕ ಎದೆ ತಾಕುವ ಮುನ್ನ
ಬಿರೀನೆ ಬಂದುಬಿಡಬೇಕಿತ್ತು
ಈಗ ಬಂದು ಗುರಾಯಿಸುವುದೇಕೆ
comಬಳಿಯ ಅವಸ್ಥೆ ನೋಡಿ.
***********
ಒಮ್ಮೆ ನಕ್ಕುಬಿಡು ನೀನು ಸಾಕು
ಈ ಚಳಿಗೆ ಕಚಗುಳಿ ಇಟ್ಟಂತಾಗುವುದು
ಇದೇ ಗುಂಗಲ್ಲಿ ಅಟ್ಟಾಡಿಸಿಕೊಂಡು
ಓಡಿಸಿಬಿಡುವೆ ಚಳಿಯ ನಾನು!
- ಗೀತಾ ಜಿ ಹೆಗಡೆ ಕಲ್ಮನೆ – ಕತೆಗಾರರು, ಕವಿಯತ್ರಿ, ಬೆಂಗಳೂರು.
