ಕಾಂಟ್ಯಾಕ್ಟ್ ಮತ್ತು ಕನೆಕ್ಷನ್ : ಚಿನ್ವತ

ನಿಮ್ಮ ಕಾಂಟ್ಯಾಕ್ಟ್ ಮತ್ತು ಕನೆಕ್ಷನ್ ಪ್ರಶ್ನೆಗೆ ನನ್ನ ಉತ್ತರ ಸ್ವಾಮೀಜಿ ಪತ್ರಕರ್ತನಿಗೆ ಸುಂದರವಾಗಿ ಅರ್ಥೈಸುತ್ತಾನೆ. ಅದರ ಬಗ್ಗೆ ಲೇಖಕರಾದ ಚಿನ್ವತ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ನ್ಯೂಯಾರ್ಕ್ ಟೈಮ್ಸ್ ಪತ್ರಕರ್ತರೊಬ್ಬರ ಒಂದು ಸಂದರ್ಶನ…..

ಪತ್ರಕರ್ತ: ಸರ್, ನೀವು ನಿಮ್ಮ ಹಿಂದಿನ ಉಪನ್ಯಾಸದಲ್ಲಿ ಕಾಂಟ್ಯಾಕ್ಟ್ ಮತ್ತು ಕನೆಕ್ಷನ್ ಬಗ್ಗೆ ಹೇಳಿದ್ದಿರಿ. ನನಗೆ ಸ್ವಲ್ಪ ಗಲಿಬಿಲಿ ಉಂಟಾಗಿದೆ. ದಯವಿಟ್ಟು ವಿವರಣೆ ಕೊಡಲು ಸಾಧ್ಯವೇ?

ಸ್ವಾಮೀಜಿ: ಕಾವಿ ಧಿರಿಸಿನ ಸನ್ಯಾಸಿ ಮುಗುಳ್ನಕ್ಕು ಪತ್ರಕರ್ತನಿಗೇ ಪ್ರಶ್ನೆ ಕೇಳಿದರು. “ನೀವು ನ್ಯೂಯಾರ್ಕ್ ನಗರದವರಾ?”

ಪತ್ರಕರ್ತ:ಹೌದು

ಸ್ವಾಮೀಜಿ: ಮನೆಯಲ್ಲಿ ಯಾರ್ಯಾರಿದ್ದಾರೆ?

ಈ ಸ್ವಾಮೀಜಿ ತನ್ನ ಪ್ರಶ್ನೆಗೆ ಉತ್ತರಿಸುವುದನ್ನು ತಪ್ಪಿಸಿಕೊಳ್ಳಲು ನೋಡುತ್ತಿದ್ದಾರೆ. ಅವರಿಗೆ ಬೇಡದ ನನ್ನ ವೈಯಕ್ತಿಕ ವಿಚಾರ ಎಂದುಕೊಂಡರೂ… “ಅಮ್ಮ ತೀರಿಕೊಂಡಿದ್ದಾರೆ. ಅಪ್ಪ ಇದ್ದಾರೆ. ಮೂವರು ಸಹೋದರರು. ಒಬ್ಬ ಸಹೋದರಿ. ಎಲ್ಲರೂ ವಿವಾಹಿತರು…”

ಮತ್ತೆ ಆ ಸನ್ಯಾಸಿ ನಗುತ್ತಲೇ… “ನೀವು ನಿಮ್ಮ ತಂದೆಯೊಂದಿಗೆ ಮಾತನಾಡುವಿರಾ?” ಎಂದರು.

ಪತ್ರಕರ್ತನ ಮುಖದಲ್ಲಿ ಕಿರಿಕಿರಿ ಕಾಣಿಸಿತು.

ಸ್ವಾಮೀಜಿ : ಇತ್ತೀಚೆಗೆ ನೀವು ನಿಮ್ಮ ತಂದೆಯೊಂದಿಗೆ ಯಾವಾಗ ಮಾತಾಡಿದಿರಿ?

ತನ್ನ ಕಿರಿಕಿರಿಯನ್ನು ಅದುಮಿಟ್ಟುಕೊಂಡ ಪತ್ರಕರ್ತ “ಬಹುಶಃ ಒಂದು ತಿಂಗಳ ಹಿಂದೆ” ಎಂದ.

ಸ್ವಾಮೀಜಿ: ನೀವು ಸೋದರ ಸೋದರಿಯರು ಸಾಕಷ್ಟು ಸಲ ಪರಸ್ಪರ ಭೇಟಿ ಆಗುವಿರಾ? ಕುಟುಂಬದ ಎಲ್ಲ ಸದಸ್ಯರೂ ಹಿಂದೆ ಭೇಟಿ ಮಾಡಿದ್ದು ಯಾವಾಗ?

ಈಗ ಪತ್ರಕರ್ತನ ಹಣೆಯ ಮೇಲೆ ಬೆವರಿನ ಹನಿಗಳು ಮೂಡಿದವು. ಇದೇನು? ಈ ಸ್ವಾಮೀಜಿಯವರೇ ನನ್ನ ಸಂದರ್ಶನ ನಡೆಸುತ್ತಿದ್ದಾರೆ ಎಂದುಕೊಂಡ ಪತ್ರಕರ್ತ.
ನಿಟ್ಟುಸಿರಿಟ್ಟು “ಎರಡು ವರ್ಷಗಳ ಹಿಂದೆ ಕ್ರಿಸ್‌ಮಸ್‌ನಲ್ಲಿ ಒಟ್ಟಿಗೆ ಸೇರಿದ್ದೆವು” ಎಂದರು .

ಸ್ವಾಮೀಜಿ: ಆಗ ಎಲ್ಲರೂ ಒಟ್ಟಿಗೇ ಜೊತೆಯಲ್ಲಿ ಎಷ್ಟು ದಿನಗಳಿದ್ದೀರಿ?

ಪತ್ರಕರ್ತ : (ಹುಬ್ಬಿನ ಮೇಲಣ ಬೆವರೊರೆಸಿಕೊಳ್ಳುತ್ತಾ): ಮೂರು ದಿನಗಳು.

ಸ್ವಾಮೀಜಿ: ನಿಮ್ಮ ತಂದೆಯೊಂದಿಗೆ ಅವರ ಪಕ್ಕದಲ್ಲೇ ಕುಳಿತು ಎಷ್ಟು ಸಮಯ ಕಳೆದ್ದೀರಿ?

ಪತ್ರಕರ್ತ : ಆಯಾಸಗೊಂಡವನಂತೆ ಮುಜುಗರಗೊಂಡವನಂತೆ ಒಂದು ಕಾಗದದ ಮೇಲೆ ಏನನ್ನೋ ಗೀಚತೊಡಗಿದ…

ಸ್ವಾಮೀಜಿ: ಒಟ್ಟಿಗೆ ಬೆಳಗಿನ ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿಯ ಭೋಜನ ಒಟ್ಟಿಗೆ ಮಾಡಿದ್ದೀರಾ? ನಿಮ್ಮ ತಂದೆ ಹೇಗಿರುವರೆಂದು ವಿಚಾರಿಸಿದ್ದೀರಾ? ನಿಮ್ಮ ಅಮ್ಮ ತೀರಿಕೊಂಡ ಮೇಲೆ ಆತನ ದಿನಗಳು ಹೇಗೆ ಕಳೆಯುತ್ತಿವೆ ಎಂದು ಕೇಳಿದ್ದೀರಾ?

ಪತ್ರಕರ್ತನ ಕಂಗಳಿಂದ ನೀರು ದಳದಳನೆ ಸುರಿಯಲಾರಂಭಿಸಿತು. ಸ್ವಾಮೀಜಿ ಪತ್ರಕರ್ತನ ಕೈ ಹಿಡಿದು “ಮುಜುಗರ ಪಡಬೇಡಿ. ದುಃಖ, ಬೇಸರ ಪಡಬೇಡಿ. ನಿಮ್ಮನ್ನು ನನಗೇ ತಿಳಿಯದೇ ನೋಯಿಸಿದ್ದರೆ ನನ್ನನ್ನು ಕ್ಷಮಿಸಿ. ಆದರೆ ಇದೇ ನಿಮ್ಮ ಕಾಂಟ್ಯಾಕ್ಟ್ ಮತ್ತು ಕನೆಕ್ಷನ್ ಪ್ರಶ್ನೆಗೆ ನನ್ನ ಉತ್ತರ. ನಿಮಗೆ ನಿಮ್ಮ ತಂದೆಯ ಕಾಂಟ್ಯಾಕ್ಟ್ ಇದೆ. ಆದರೆ ಆತನೊಂದಿಗೆ ನಿಮಗೆ ಕನೆಕ್ಷನ್ ಇಲ್ಲ. ನೀವು ಆತನೊಂದಿಗೆ ಕನೆಕ್ಟ್ ಆಗಿಲ್ಲ. ಕನೆಕ್ಷನ್ ಎನ್ನುವುದು ಎರಡು ಹೃದಯಗಳ ನಡುವೆ ಇರುವಂತಹದ್ದು. ಒಟ್ಟಿಗೆ ಕುಳಿತು ಊಟ ಮಾಡುವುದು, ಒಬ್ಬರಿಗೊಬ್ಬರು ಕೇರ್ ಮಾಡುವುದು. ಸ್ಪರ್ಶ, ಕೈ ಕುಲುಕುವುದು, ಕಣ್ಣುಗಳ ಮಿಲನ, ಒಟ್ಟಿಗೇ ಸ್ವಲ್ಪ ಸಮಯ ಕಳೆಯುವುದು.. ನಿಮ್ಮ ಸಹೋದರರು ಸಹೋದರಿಯರು ಕೂಡ ಕಾಂಟ್ಯಾಕ್ಟ್‌ನಲ್ಲಿದ್ದಾರೆಯೇ ಹೊರತು ಪರಸ್ಪರರ ನಡುವೆ ಕನೆಕ್ಷನ್ ಇಲ್ಲ”ಎಂದರು.

ಪತ್ರಕರ್ತ ಹರಿಯುತ್ತಿದ್ದ ಕಣ್ಣೀರನ್ನು ಒರೆಸಿಕೊಂಡು “ನನಗೆ ಇಂತಹ ಸುಂದರ ಮತ್ತು ಮರೆಯಲಾಗದ ಪಾಠ ಕಲಿಸಿದ್ದಕ್ಕೆ ಕೃತಜ್ಞತೆಗಳು” ಎಂದ. ಇದು ಇಂದಿನ ಕಟುವಾಸ್ತವ. ಮನೆಯಲ್ಲಿ ಸಮಾಜದಲ್ಲಿ ಬಹಳ ಕಾಂಟ್ಯಾಕ್ಟ್‌ಗಳು ಇವೆ. ಆದರೆ ಕನೆಕ್ಷನ್ ಇಲ್ಲ. ಎಲ್ಲರೂ ಅವರವರ ಪ್ರಪಂಚದಲ್ಲಿ ಬಿಝಿ… ಬರೀ ಕಾಂಟ್ಯಾಕ್ಟ್ ನಿಭಾಯಿಸೋದಲ್ಲ. ನಾವು ಕನೆಕ್ಟ್ ಆಗಿರೋಣ. ಕೇರ್ ಮಾಡುವುದು, ಸುಖವನ್ನು ಹಂಚಿಕೊಳ್ಳುವುದು ಮತ್ತು ನಮ್ಮ ಪ್ರೀತಿಪಾತ್ರರೊಂದಿಗೆ ಸಮಯ ಕಳೆಯುವುದನ್ನು ಮಾಡುತ್ತಿರೋಣ.

ಅಂದ ಹಾಗೆ ಆ ಸ್ವಾಮೀಜಿ ಯಾರು ಗೊತ್ತೇ ?
ನಮ್ಮ ನಿಮ್ಮೆಲ್ಲರ ಪ್ರೀತಿಯ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರು


  • ಚಿನ್ವತ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW