“ದಯವೇ ಧರ್ಮದ ಗುಡಿ” ಕವನ

ಮನುಜರಲ್ಲಿ ಭೇದಭಾವ ಬಿಡಿ…ದುಷ್ಟರು ಕಂಡರೆ ದೂರ ಸರಿದು ನಡಿ…ಕವಿ ಪ್ರೊ.ಅಶೋಕ ಕುಮಾರ ಎಸ್ ಮಟ್ಟಿ ಅವರ ಲೇಖನಿಯಲ್ಲಿ ಮೂಡಿದ ಕವಿತೆಯನ್ನು ತಪ್ಪದೆ ಮುಂದೆ ಓದಿ…

ದಯವೇ ಧರ್ಮದ ಗುಡಿ
ದುಡಿದು ತಿನ್ನುವ ಪಣವ ತೊಡಿ
ದುಡಿಮೆಯಲ್ಲಿ ನಂಬಿಕೆಯಿಟ್ಟು ನಡಿ.

ಸಿರಿ ಗರದ ಹುಚ್ಚು ಬಿಡಿ
ಹಂಗಿನರಮನೆಯ ಮರವ ಕಡಿ
ದುಷ್ಟ ಸೋಮಾರಿತನಕ್ಕೆ ಗೋಲಿ ಹೊಡಿ.

ಬೆವರು ಸುರಿಸಿ ದುಡಿ
ದುಷ್ಟ ದುರ್ಗುಣಗಳ ಜಾಡು ಬಿಡಿ
ದೃಢ ಭಕ್ತಿಗೆ ದೇಹವೇ ದೇವರ ಗುಡಿ.

ಮನುಜರಲ್ಲಿ ಭೇದಭಾವ ಬಿಡಿ
ಅಂಧಕಾರ ಅಜ್ಞಾನದ ಬೇರು ಕಡಿ
ಸಮ ಸಮಾಜದ ಹೊಸ ಹಾದಿ ಹಿಡಿ.

ಕಹಿ ಎನಿಸುವುದು ಸತ್ಯದ ನುಡಿ
ಮನದಲ್ಲಿ ಹೊತ್ತಿಸುವುದು ಜ್ಞಾನದ ಕಿಡಿ
ಸುಜ್ಞಾನ ಬೆಳಗುವುದು ಅಡಿಯಿಂದ ಮುಡಿ.

ಸಜ್ಜನರ ಪಾದಕ್ಕೆ ಹೂವು ಮುಡಿ
ದುಷ್ಟರು ಕಂಡರೆ ದೂರ ಸರಿದು ನಡಿ
ಕಣ್ಣಿಗೆ ಅನ್ಯಾಯವ ಕಂಡರೆ ಬಿಡದೆ ತಡಿ.


  • ಪ್ರೊ. ಅಶೋಕ ಕುಮಾರ ಎಸ್ ಮಟ್ಟಿ ಮೀನಕೇರಿ – ಪ್ರಾಂಶುಪಾಲರು ಸರಕಾರಿ ಪ್ರಥಮ ದರ್ಜೆ ವಸತಿ ಕಾಲೇಜು ಮುದ್ನಾಳ, ಯಾದಗಿರಿ ಜಿಲ್ಲೆ.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading