‘ಎಸ್ ಎಲ್ ಭೈರಪ್ಪ’ ಕೃತಿ ಪರಿಚಯ

ಎಸ್ ಎಲ್ ಭೈರಪ್ಪನವರು ಕನ್ನಡ ಸಾಹಿತ್ಯ ಲೋಕದಲ್ಲಿ ಅತೀ ಹೆಚ್ಚು ಓದುಗರನ್ನು ಹೊಂದಿರುವ ಮೇರು ಕಾದಂಬರಿಕಾರರು. ಇವರು ಬರೆದ ಕೃತಿಗಳು ಮತ್ತು ಓದುಗರ ತತ್ವಶಾಸ್ತ್ರ, ಸಮಾಜ ಶಾಸ್ತ್ರ ಹಾಗು ಮಾನವೀಯ ಮೌಲ್ಯಗಳ ಗಂಭೀರ ಅಧ್ಯಯನದಿಂದ ಕೂಡಿವೆ. ಈ ಕೃತಿಯ ಕುರಿತು ಓಂಕಾರ ಪಾಟೀಲ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಪುಸ್ತಕ : ಎಸ್ ಎಲ್ ಭೈರಪ್ಪ
ಸಂಪಾದಕರು : ಕೆ. ಸತ್ಯನಾರಾಯಣ.
ಪ್ರಕಾಶಕರು : ಅಮೂಲ್ಯ ಪುಸ್ತಕಾಲಯ ಬೆಂಗಳೂರು.
ಬೆಲೆ :೨೭೫ ರೂಪಾಯಿ

ಭೈರಪ್ಪನವರು ತಮ್ಮ ಕಾದಂಬರಿಗಳಿಂದ ಕೇವಲ ಕರ್ನಾಟಕ ಮಾತ್ರವಲ್ಲದೆ ಭಾರತದ ಇತರೆ ಭಾಷೆಗಳಾದ ಮರಾಠಿ, ಹಿಂದಿ ಮತ್ತು ಇಂಗ್ಲಿಷನಲ್ಲಿ ಇವರಿಗೆ ಲಕ್ಷಾಂತರ ಓದುಗರ ಬಳಗವೇ ಇದೆ. ಇವರ ಅನೇಕ ಕಾದಂಬರಿ ಕೃತಿಗಳು, ಮರಾಠಿಗೆ ಅನುವಾದ ಗೊಂಡಿರುವ ಕಾರಣ ಅಲ್ಲಿ ಅನೇಕ ಮರಾಠಿ ಭಾಷಿಕರು ಇವರ ಅಭಿಮಾನಿಗಳಿದ್ದಾರೆ.

ಅನೇಕ ಪ್ರಕಾರ ಕಥೆ ಕಾದಂಬರಿಗಳನ್ನು ಬರೆದ ಕಾದಂಬರಿಗಳಲ್ಲಿ, ಪರ್ವ, ಗೃಹಭಂಗ, ವಂಶವೃಕ್ಷ, ಆವರಣ, ಸ್ವಾರ್ಥ, ಮತ್ತು ಮಂದ್ರ ಕಾದಂಬರಿಗಳು ಓದುಗರ ಮೆಚ್ಚಿನ ಕಾದಂಬರಿಗಳಾಗಿವೆ.

ಕೆ. ಸತ್ಯನಾರಾಯಣ ಅವರು ಸಂಪಾದಿಸಿದ ಎಸ್ ಎಲ್ ಭೈರಪ್ಪ ಓದು -ಓದುಗರು ಕೃತಿಯಲ್ಲಿ ಒಟ್ಟು ೪೯ ಓದುಗರು ಕೆ. ಸತ್ಯನಾರಾಯಣ ಅವರು ಎಸ್. ಎಲ್ ಭೈರಪ್ಪ ನವರ ಕುರಿತು ಕೇಳಿದ ೧೧ ಪ್ರಶ್ನೆಗಳಿಗೆ ತಮ್ಮದೆಯಾದ ಅಭಿಪ್ರಾಯ ವ್ಯಕ್ತಪಡಿಸಿರುವುದನ್ನು ಸಂಪಾದಿಸಿ ಈ ಪುಸ್ತಕವನ್ನು ಪ್ರಕಟಿಸಿದ್ದಾರೆ.

ಎಚ್ ಎಸ್ ರಾಘವೇಂದ್ರ, ಅಜಕ್ಕಳ ಗಿರೀಶ ಭಟ್, ವೆಂಕಟಾಚಲ ಹೆಗಡೆ, ಸರಜು ಕಾಟ್ಕರ್, ಮೇಟಿ ಮಲ್ಲಿಕಾರ್ಜುನ, ವಿಜಯೇಂದ್ರ ಪಾಟೀಲ, ಬಿ. ಎಸ್. ಜಯಪ್ರಕಾಶ ನಾರಾಯಣ, ದೀಪ ಫಡ್ಕೆ, ಆರ್ ಲಕ್ಶ್ಮೀ ನಾರಾಯಣ, ಕೇಶವ ಶರ್ಮ ಕೆ, ಸುಧಾ ತೀರ್ಥ ಹಳ್ಳಿ, ಶಶಾಂಕ ಪರಾಶರ, ಕೆ. ಸುಂದರ ರಾಜ್, ಆರ್ ದಿಲೀಪ್ ಕುಮಾರ, ಪಿ. ಶೇಷಾದ್ರಿ, ಆನಂದರಾಮ ಉಪಾಧ್ಯ, ಜೆ. ವಿ. ಕಾರ್ಲೊ ಮಹಾಬಲ ಮೂರ್ತಿ ಕೊಡ್ಲೆಕೆರೆ, ನಾ. ದಾಮೋದರ ಶೆಟ್ಟಿ, ಕುo. ವೀರಭದ್ರಪ್ಪ, ಎನ್. ಎಸ್. ಶ್ರೀಧರಮೂರ್ತಿ, ಟಿ. ಎನ್ ವಾಸುದೇವಮೂರ್ತಿ, ಎನ್. ವಿದ್ಯಾಶಂಕರ, ಮೈ. ಶ್ರೀ. ನಟರಾಜ, ವಾಸುದೇವ ಶೆಟ್ಟಿ, ಅರವಿಂದ ಚೊಕ್ಕಾಡಿ, ಟಿ. ಆರ್. ಅನಂತರಾಮು, ಸುಧಾಕರ ದೇವಾಡಿಗ ಬಿ, ವಿಕಾಸ ಹೊಸಮನಿ, ಮಲ್ಲಿಕಾರ್ಜುನ ಹಿರೇಮಠ, ಸುಭಾಷ್ ರಾಜಮಾನೆ, ಜಯರಾಮ್ ಕಾರಂತ, ಪ್ರಕಾಶ ನಾಯಕ್, ಚಿಂತಾಮಣಿ ಕೊಡ್ಲಕೆರೆ, ಪಾರ್ವತಿ ಜಿ. ಐತಾಳ್, ಭಾಸ್ಕರ ಹೆಗಡೆ, ಗುರುಪ್ರಸಾದ ಕಾಗಿನೆಲೆ, ಬಾಲಸುಬ್ರಮಣ್ಯ ಕಂಜರ್ಪಣೆ, ಕೆ. ವಿ. ಗೋಪಾಲ್, ವಿಕ್ರಂ ಹತ್ವಾರ್, ಎಂ. ವೆಂಕಟ ಸ್ವಾಮಿ, ಚಂದ್ರಕಾಂತ ಪೋಕಳೆ, ಉಮಾ ವಿ. ಕುಲಕರ್ಣಿ, ಎಂ. ಆರ್. ದತ್ತಾತ್ರಿ, ಭಾಸ್ಕರನ್ನ್( ಪಾವಣ್ಣನ್ ), ಸಂಪಿಗೆ ತೋoಟದಾರ್ಯ, ಆನಂದ ಝoಜರವಾಡ, ಮಹಾಲಿಂಗೇಶ್ವರ ಎಸ್. ಪಿ, ಬೆಳಗೋಡು ರಮೇಶ ಭಟ್ ಇವರು ಬೈರಪ್ಪನವರು ಯಾವ ರೀತಿಯ ಓದುಗರನ್ನು ಬಯಸುತಿದ್ದರು ಅನ್ನುವ ತಮ್ಮ ವಿಚಾರಗಳನ್ನು “ಎಸ್. ಎಲ್ ಭೈರಪ್ಪ (ಓದು -ಓದುಗರು) ” ಪುಸ್ತಕದ ಮೂಲಕ ವ್ಯಕ್ತಪಡಿಸಿದ್ದಾರೆ.

ಎಸ್ ಎಲ್ ಭೈರಪ್ಪ (ಓದು- ಓದುಗರು ) ಈ ಕಾದಂಬರಿ ಪ್ರಕಾರ ಗ್ರಹಿಕೆಯಲ್ಲಿ ಶೋಧನೆಯಲ್ಲಿ ಬರವಣಿಗೆಯಲ್ಲಿ ಬರಹಗಾರರಿಂದ ಬಯಸುವ ಬದ್ಧತೆ ಸ್ವಾತಂತ್ರ್ಯ ತುಂಬಾ ವಿಶಿಷ್ಟವಾದದ್ದು ಎಂದು ವರ್ಣಿಸಿದ್ದಾರೆ. ಈ ವಿಶಿಷ್ಟತೆ ಬಗ್ಗೆ ಹೊಸ ತಲೆಮಾರಿನ ಕಾದಂಬರಿಕಾರರ ಗಮನ ಸೆಳೆಯುವುದು ಕೂಡ ಪ್ರಶ್ನೆಗಳ ಉದ್ದೇಶದ ಒಂದು ಭಗವಾಗಿದೆ ಎನ್ನಬಹುದು.

ಒಟ್ಟಾರೆಯಾಗಿ ಹೇಳುವದಾದರೆ ಅಮೂಲ್ಯ ಪ್ರಕಾಶನದವರ ಓದು ಓದುಗರ ಕೃತಿಯು ಓದುಗರಿಗೆ ಹಾಗು ಹೊಸ ಬರಹಗಾರರಿಗೆ ಮಾರ್ಗದರ್ಶಿಸುವ ಕೃತಿಯಾಗಿದ್ದು ಎಸ್ ಎಲ್ ಭೈರಪ್ಪನವರ ಬದುಕಿನ ಘಟನೆ ಮತ್ತು ಅವರ ಕೃತಿ ಪರಿಚಯ ಹಾಗು ಅವರ ಓದುಗರ ಬಳಗ ಯಾವ ರೀತಿ ಬೆಳಸಿದರು ಅನ್ನುವದನ್ನು ಓದಗರು ತಮ್ಮ ತಮ್ಮ ಅಭಿಪ್ರಾಯಗಳನ್ನು ರಚಿತವಾಗಿಸಿರುವ ಕೃತಿಯಾಗಿದೆ ಅನ್ನಬಹುದು.


  • ಓಂಕಾರ ಪಾಟೀಲ –  ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್, ಕಾರ್ಯದರ್ಶಿಗಳು, ಬೀದರ.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading