ಕವಿ ಅಪ್ಪಯ್ಯ ಯು ಅವರ ಒಂದು ಸುಂದರ ಕವಿತೆ, ತಪ್ಪದೆ ಮುಂದೆ ಓದಿ…
ಓ ಇಬ್ಬನಿಗಳೇ ನೀವೆಷ್ಟು ಧನ್ಯ
ನಶ್ವರದ ಬಾಳಿನಲು
ಮುತ್ತಂತೆ ಹೊಳೆಯುವಿರಿl
ಅರೆಗಳಿಗೆ ಬಾಳಿದರು
ನೆನಪಿನಲಿ ಉಳಿಯುವಿರಿl
ನೂರುವರುಷದ ಗೋಳು
ಈ ನರಮಾನವರಬಾಳು
ಹೊಳೆಯುವುದೆ ತನುಮನ
ಸೆಳೆಯುವುದೆ ಪರರನ್ನl
ಹುಟ್ಟಿ ಸಾಯುವುದೊಂದೆ
ಸಾಧನೆಗಳುl
ಬಾಳಿದರೆ ನಿಮ್ಮಂತೆ
ಅರೆಗಳಿಗೆ ಹೊಳೆಹೊಳೆಯುತಲಿ
ಸತ್ತಮೇಲೂ ಜನರ
ನೆನಪಲಿರಲಿl
- ಅಪ್ಪಯ್ಯ ಯು – ಕಾಸರಗೋಡು
