ದಕ್ಷಿಣ ಭಾರತದಲ್ಲಿರುವ ಕೇರಳದಲ್ಲಿರುವ ಗುರುವಾಯೂರಪ್ಪನ್ ದೇವಸ್ಥಾನ ಸುಪ್ರಸಿದ್ಧವಾದದ್ದು. ಅದು ಶಕ್ತಿ ಸ್ಥಳವೆಂದು ಈಗಲೂ ದೇಶದ ಭಕ್ತರು ಅಲ್ಲಿಗೆ ನಿರಂತರ ಭೇಟಿ ಕೊಡುತ್ತಾರೆ. ಗುರುವಾಯೂರಪ್ಪನ ಪ್ರಭಾವ ಅಲ್ಲಿಗೆ ಹೋಗಿ ಬಂದ ಎಲ್ಲರನ್ನೂ ಆವರಿಸುತ್ತದೆ. ಒಮ್ಮೆ ಹೋಗಿ ಬಂದ ನಂತರ ಮತ್ತೆ ಹೋಗಬೇಕು ಎಂದು ಅನ್ನಿಸದಿರದು. ಅಲ್ಲಿರುವ ಶ್ರದ್ದೆ, ಭಕ್ತಿ, ಸ್ವಚ್ಛತೆ, ಅಚ್ಚುಕಟ್ಟಾದ ಪೂಜಾ ವ್ಯವಸ್ಥೆ ಮನಸ್ಸನ್ನು ಮುದಗೊಳಿಸುತ್ತವೆ. ಇಲ್ಲಿ ಭಕ್ತರು ಭಾವುಕರಾಗಿ ಬಿಡುತ್ತಾರೆ. ದಕ್ಷಿಣ ಭಾರತದಲ್ಲಿರುವ ಕೇರಳದಲ್ಲಿರುವ ಗುರುವಾಯೂರಪ್ಪನ್ ದೇವಸ್ಥಾನ ಸುಪ್ರಸಿದ್ಧವಾದದ್ದು. ಅದು ಶಕ್ತಿಸ್ಥಳವೆಂದು ಈಗಲೂ ದೇಶದ ಭಕ್ತರು ಅಲ್ಲಿಗೆ ನಿರಂತರ ಭೇಟಿ ಕೊಡುತ್ತಾರೆ. ಗುರುವಾಯೂರಪ್ಪನ ಪ್ರಭಾವ ಅಲ್ಲಿಗೆ ಹೋಗಿ ಬಂದ ಎಲ್ಲರನ್ನೂ ಆವರಿಸುತ್ತದೆ.
ಈಗ ಉತ್ತರ ಭಾರತದ ದೆಹಲಿಯಲ್ಲಿ ಇಂಥದೇ ಒಂದು ದೇವಸ್ಥಾನ ಸ್ಥಾಪಿತವಾಗಿದೆ. ದಕ್ಷಿಣ ಗುರುವಾಯೂರಪ್ಪನ ಪ್ರತಿರೂಪವೇ ಇಲ್ಲಿ ಸಾಕಾರಗೊಂಡಂತಿರುವ ಈ ದೇವಸ್ಥಾನ ಪೂರ್ವ ದೆಹಲಿಯಲ್ಲಿರುವ ಮಯೂರ ವಿಹಾರದಲ್ಲಿ ತಲೆಯೆತ್ತಿದೆ. ದಕ್ಷಿಣ ಭಾರತೀಯರೇ ಹೆಚ್ಚಿನ ಸಂಖ್ಯೆಯಲ್ಲಿರುವ ಈ ಪ್ರದೇಶದ ಹೃಧಯ ಭಾಗದಲ್ಲಿರುವ ಈ ದೇವಸ್ಥಾನ ಇಡೀ ಉತ್ತರ ಭಾರತದಲ್ಲಿ ಇರುವ ಗುರುವಾಯೂರಪ್ಪನ ಏಕೈಕ ದೇವಸ್ಥಾನವಾಗಿದೆ. ಗುರುವಾಯೂರದಲ್ಲಿರುವ ದೇವಸ್ಥಾನದ ಮಾದರಿಯಲ್ಲೇ ಕೇರಳ ಶೈಲಿಯಲ್ಲಿ ಇದನ್ನು ನಿರ್ಮಿಸಲಾಗಿದೆ.
ದೇವಸ್ಥಾನ ಇಡೀ ಉತ್ತರ ಭಾರತದಲ್ಲಿ ಇರುವ ಗುರುವಾಯೂರಪ್ಪನ ಏಕೈಕ ದೇವಸ್ಥಾನವಾಗಿದೆ. ಗುರುವಾಯೂರದಲ್ಲಿರುವ ದೇವಸ್ಥಾನದ ಮಾದರಿಯಲ್ಲೇ ಕೇರಳ ಶೈಲಿಯಲ್ಲಿ ಇದನ್ನು ನಿರ್ಮಿಸಲಾಗಿದೆ. ಇಲ್ಲಿರುವ ಸ್ವಚ್ಛತೆ ಗಮನ ಸೆಳೆಯುತ್ತಿದೆ. ಇಲ್ಲಿರುವ ಹದಿನಾರು ಕಂಬಗಳಲ್ಲಿ ಶತಮಾನಗಳ ಹಿಂದೆ ಕೇರಳದಲ್ಲಿಆಗಿ ಹೋದ ಆದಿ ಶಂಕರಾಚಾರ್ಯ, ಅಮ್ಮಾಳ್ , ರಾಜ ಕುಲಶೇಖರನ್ ಮುಂತಾದ ಧರ್ಮ ಸ್ಥಾಪಕರು, ಅನುಯಾಯಿಗಳ ವಿಗ್ರಹಗಳಿವೆ. ಅದರಲ್ಲಿ ಕನ್ನಡದ ಪುರಂದರದಾಸರ ಪ್ರತಿಮೆಯೂ ಇರುವುದು ಸಂತೋಷದ ವಿಷಯ. ಗುರುವಾಯೂರಿನಲ್ಲಿರುವ ದೇವಸ್ಥಾನದ ಪ್ರತಿರೂಪವೇ ಇದಾಗಿರುವುದರಿಂದ ಇಲ್ಲಿ. ನಡೆಯುವ ಪೂಜಾ ಕಾರ್ಯಕ್ರಮಗಳು ಮೂಲದಲ್ಲಿರುವಂತೆಯೇ ನಡೆಯುತ್ತವೆ.
ನೈರ್ಮಲ್ಯ ದರ್ಶನ೦, ಫಲಾಭಿಷೇಕ೦, ಮಲ್ಹಾರ ನೈವೇದ್ಯ೦, ವಿಶೇಷ ಕಳಸಾಭಿಷೇಕ೦, ನವಕ೦- ಪಂಚಗವ್ಯ೦, ಉಚ್ಚ ಪೂಜಾ ಇವು ಎಲ್ಲವೂ ಗುರುವಾಯೂರಿನಿಂದಲೇ ಬಂದಿರುವ ತಂತ್ರಿಗಳಿಂದಲೇ ನಡೆಯುತ್ತವೆ. ಮದ್ಯಾಹ್ನ ಅನ್ನದಾನ, ಸಂಜೆ ದೀಪಾರಾಧನ೦, ಭಗವತಿ ಸೇವಾ, ಕುಂಕುಮ ಅರ್ಚನಾ ಎಲ್ಲವೂ ತಂತ್ರಿಗಳ ಮಾರ್ಗ ದರ್ಶನದಿಂದಲೇ ನಡೆಯುತ್ತವೆ. ದೇವಸ್ಥಾನದ ಆಡಳಿತವನ್ನು ಮಲಯಾಳಿಗಳೇ ನೋಡಿಕೊಳ್ಳುತ್ತಾರೆ. ಇಲ್ಲಿ ಕೇವಲ ದಕ್ಷಿಣ ಭಾರತೀಯರಷ್ಟೇ ಅಲ್ಲ, ಈಗೀಗ ಉತ್ತರ ಭಾರತೀಯರೂ ಈ ಪೂಜಾಗಳಲ್ಲಿ ಭಾಗವಹಿಸುತ್ತಿರುವುದು ವಿಶೇಷ. ಅವರೂ ಇಲ್ಲಿ ಬಂದು ಹರಕೆ, ದಾನ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ. ದಿನ ದಿನಕ್ಕೆಇಲ್ಲಿಯ ಗುರುವಾಯೂರಪ್ಪನ್ ಉತ್ತರದವರ ಆದಾಧ್ಯ ದೈವವಾಗುತ್ತಿದ್ದಾನೆ.
#ಹಗಉಟ