ಹೊಸ ಓದು – 'ದಂಟಿನ ಕುದುರೆ'

Subrao Kulkarni_Book

ಇದು ಸುಪ್ರಸಿದ್ದ ಕತೆಗಾರ ಸುಭ್ರಾವ ಕುಲಕರ್ಣಿಯವರ ಸಾಹಿತ್ಯ ಮತ್ತು ಬದುಕು ಕುರಿತು ಬಂದಿರುವ ಪುಸ್ತಕ. ಪ್ರಸಿದ್ಧ ಪತ್ರಕರ್ತರಾದ ಕಲ್ಬುರ್ಗಿಯವರಾದ ಪ್ರಭಾಕರ ಶೂಜಿಯವರು ಈ ಪುಸ್ತಕವನ್ನು ಸಂಪಾದಿಸಿದ್ದಾರೆ. ನೂರಾರು ಕತೆಗಳನ್ನು ಬರೆದಿರುವ ಸುಬ್ರಾಯರು ಸವದತ್ತಿ ತಾಲೂಕಿನ ಬಸಿಡೋಣಿ ಗ್ರಾಮದವರು. ಸಧ್ಯ ಕಲಬುರಯಲ್ಲಿ ನೆಲೆಸಿದ್ದಾರೆ.

ಕಲಬುರಗಿಯ ಸಾಂಸ್ಕೃತಿಕ ಪರಿಸರಕ್ಕೆ ಚಿರಪರಿಚಿತರು. ಅಪ್ಪಟ ಉತ್ತರ ಕರ್ನಾಟಕದ ಭಾಷಾ ಸೊಗಡು ಇವರ ವೈಶಿಷ್ಠ್ಯ. ೪೫೫ ಕ್ಕೂ ಹೆಚ್ಚಿನ ಪುಟಗಳಿರುವ ಈ ಪುಸ್ತಕದಲ್ಲಿ ಸುಬ್ರಾಯ ಕುಲಕೆರ್ನಿಯವರ ಬದುಕು ಮತ್ತು ಸಾಹಿತ್ಯ ಕುರಿತು ಅರವತ್ಮೂರು ಜನ ಗಣ್ಯರು ಲೇಖನಗಳನ್ನು ಬರೆದಿದ್ದಾರೆ. ಈ ಲೇಖನಗಳಲ್ಲಿ ಅವರ ಸಾಹಿತ್ಯ ಮತ್ತು ಒಡನಾಟದ ಕುರಿತು ಅನೇಕರು ಆತ್ಮೀಯವಾಗಿ ಬರೆದಿದ್ದಾರೆ. ಶುಭ್ರವ ಅವರು ನಾಟಕಗಳನ್ನೂ ಬರೆದಿದ್ದು ಅದರಲ್ಲಿ ‘ಓಕುಳಿ’ ನಾಟಕ ಪ್ರಸಿದ್ಧವಾದುದ್ದು. ರಂಗದಲ್ಲಿ ಪರಿಣಾಮಕಾರಿಯಾಗಿ ಮೂಡಿ ಬಂದಿದ್ದು ಜನಮನ ಗೆದ್ದಿದೆ.

ಇದರಿಂದ ಲೇಖಕನೊಬ್ಬ ಸಾಹಿತ್ಯದಲ್ಲಿ ಮಾತ್ರವಲ್ಲ. ಕುಟುಂಬ ವತ್ಸಲನೂ ಆಗಿರಬೇಕು ಎಂಬ ಮಾತು ಇಲ್ಲಿ ಎದ್ದು ಕಾಣುತ್ತದೆ. ಅಷ್ಟೇ ಅಲ್ಲ. ಬಾಲ್ಯದ ಗೆಳೆಯರು. ಊರಿನ ಸ್ನೇಹಿತರು ಲೇಖಕರನ್ನು ಕುರಿತು ಬರೆದದ್ದು ಪುಸ್ತಕವನ್ನು ಆಕರ್ಷಣೀಯಗೊಳಿಸಿದೆ.

ಸಹಕಾರಿ ತಾಂತ್ರಿಕ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರಾಗಿ ನಿವೃತ್ತರಾದ ಸುಬ್ರವರು ಪ್ರತಿಮ ಸಾಹಿತ್ಯ ಪ್ರಿಯರು ಎಂದು ಈ ಪುಸ್ತಕ ಓದಿದರೆ ತಿಳಿಯುತ್ತದೆ. ಅಷ್ಟೆಲ್ಲ, ಇವರು ಪ್ರವಾಸ ಪ್ರಿಯರೂ ಹೌದು. ದೇಶ ಮತ್ತು ಅನೇಕ ಹೊರದೇಶಗಳಲ್ಲಿ ಪ್ರವಾಸ ಮಾಡಿ ಬಂದಿದ್ದಾರೆ. ಅಲ್ಲಿಯ ಜನಜೀವನ ಕಂಡಿದ್ದಾರೆ. ಆ ಕುರಿತೂ ಇಲ್ಲಿ ಲೇಖನಗಳಿವೆ. ತನ್ನ ಹಳ್ಳಿ, ಅಲ್ಲಿಯ ಬಾಲ್ಯದ ಅನುಭವಗಳನ್ನು ಕುರಿತು ಸ್ವತಃ ಅವರೇ ಸುಂದರವಾಗಿ ಬರೆದ ಒಂದು ಲೇಖನ ಇಲ್ಲಿದೆ. ಕೊನೆಯಲ್ಲಿ ಅವರ ಜೀವನದ ಅವಿಸ್ಮರಣೀಯ ಕ್ಷಣಗಳನ್ನು ನೆನಪಿಸುವ ಅನೇಕ ಚಿತ್ರಗಳು ಇಲ್ಲಿದೆ.

ಸಹಕಾರಿ ತಾಂತ್ರಿಕ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರಾಗಿ ನಿವೃತ್ತರಾದ ಸುಬ್ರವರು ಪ್ರತಿಮ ಸಾಹಿತ್ಯ ಪ್ರಿಯರು ಎಂದು ಈ ಪುಸ್ತಕ ಓದಿದರೆ ತಿಳಿಯುತ್ತದೆ. ಅಷ್ಟೆಲ್ಲ, ಇವರು ಪ್ರವಾಸ ಪ್ರಿಯರೂ ಹೌದು. ದೇಶ ಮತ್ತು ಅನೇಕ ಹೊರದೇಶಗಳಲ್ಲಿ ಪ್ರವಾಸ ಮಾಡಿ ಬಂದಿದ್ದಾರೆ. ಅಲ್ಲಿಯ ಜನಜೀವನ ಕಂಡಿದ್ದಾರೆ. ಆ ಕುರಿತೂ ಇಲ್ಲಿ ಲೇಖನಗಳಿವೆ. ತನ್ನ ಹಳ್ಳಿ, ಅಲ್ಲಿಯ ಬಾಲ್ಯದ ಅನುಭವಗಳನ್ನು ಕುರಿತು ಸ್ವತಃ ಅವರೇ ಸುಂದರವಾಗಿ ಬರೆದ ಒಂದು ಲೇಖನ ಇಲ್ಲಿದೆ. ಕೊನೆಯಲ್ಲಿ ಅವರ ಜೀವನದ ಅವಿಸ್ಮರಣೀಯ ಕ್ಷಣಗಳನ್ನು ನೆನಪಿಸುವ ಅನೇಕ ಚಿತ್ರಗಳು ಇಲ್ಲಿದೆ.ಮುದ್ರಣ ಅಚ್ಚುಕಟ್ಟಾಗಿದೆ. ನೋಡಿದರೆ ಕಾಗೆ ಎತ್ತಿಕೊಳ್ಳಬೇಕೆಂಬಷ್ಟು ಮುದ್ದಾಗಿದೆ. ಒಬ್ಬ ಹಿರಿಯ ಲೇಖಕನ ಕುರುತು ಇಂಥ ಪುಸ್ತಕಗಳು ಬರಬೇಕು. ಯುವ ಬರಹಗಾರರು ಇಂಥವನ್ನು ಓದಬೇಕು. ಇದನ್ನು ಸೆಂಡಮ್ ನ ಪ್ರಕಾಶನ ಇದನ್ನು ಪ್ರಕಟಿಸಿದೆ. ಅವರಿಗೂ ಅಭಿನಂದನೆಗಳು.

Home
Search
All Articles
Videos
About
%d bloggers like this:
Aakruti Kannada

FREE
VIEW