ನಮ್ಮ ದೇಶದ ನಿಜವಾದ ವೈರಿ ಪಾಕಿಸ್ತಾನ ಇರಬಹುದು, ಆದರೆ ಅದಕ್ಕಿಂತ ಮಿಗಿಲಾಗದ ವೈರಿಗಳು ನಮ್ಮದೇಶದಲ್ಲೇ ಇದ್ದಾರೆ. ದುರಂಧರ್ ಸಿನಿಮಾ ನೋಡಿ ಲೇಖಕಿ ಕವಿತಾ ಹೆಗಡೆ ಅಭಯಂ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ನಿನ್ನೆ ದುರಂಧರ್ ಪಾಕಿಸ್ತಾನಕ್ಕೆ ಹೋಗೋಣ ಬನ್ನಿ, ಬರೀ ಮೂರೂ ಮುಕ್ಕಾಲು ಗಂಟೆಯೊಳಗೆ ವಾಪಸ್ಸು ಬರೋಣ ಅಂದ. ‘ಓ ಗುಡ್ ಡೀಲ್’ ಅಂತ ರಾತ್ರಿ ಒಂಬತ್ತಕ್ಕೆ ಮನೆ ಬಿಟ್ಟರೆ ಎರಡೂವರೆಗೆ ಕರೆದುಕೊಂಡು ಭಾರತದಲ್ಲಿ ಬಿಟ್ಟು ಹೋದ. ಆಗಿನಿಂದ ಹೊಟ್ಟೇಲಿ, ಎದೇಲಿ, ಮನಸಲ್ಲಿ ಸಂಕಟ ಸಂಕಟ ಸಂಕಟ.
ಪಾಕಿಸ್ತಾನದ ಬಣ್ಣವಿಲ್ಲದ ಬಡತನ ತುಂಬಿದ ಬಂಜರು ಪ್ರದೇಶಗಳು, “ಗ್ರಿಮ್” ಅನಿಸೋ ಲ್ಯಾರಿ ಪ್ರದೇಶಗಳು, ಅಂಥಾ ಜಾಗದಲ್ಲೂ ಎದ್ದು ಮುಖಕ್ಕೆ ಹೊಡೆಯೋ ದೋ- ನಂಬರಿ ದಂಧೆಯ ಕರಾಳತೆ, ಮಾಫಿಯಾದವರೇ ದೇಶದ ರಾಜಕೀಯವನ್ನು ನಿಯಂತ್ರಿಸೋ ಶಕ್ತಿಗಳಾಗೋದು, ರಾಜಕೀಯದವರ ಕುತಂತ್ರಗಳು, ಇವೆಲ್ಲವನ್ನೂ ಬಳಸಿಕೊಂಡು ಭಯೋತ್ಪಾದಕ ಚಟುವಟಿಕೆಗಳಿಂದ ಭಾರತದ ಮೇಲೆ ಆಕ್ರಮಣ ಮಾಡೋದನ್ನು ಒಂದೊಂದಾಗಿ ತೋರಿಸುತ್ತ ದುರಂಧರ ಮನಸ್ಸಿಗೂ ಮಂಕು ಬಡಿಸಿಬಿಟ್ಟ. ಅಲ್ಲಲ್ಲಿ ಆಗಾಗ ಕಾಣೋ ಹಸಿರು ಕೊಂಚ ಉಸಿರು ಕೊಟ್ಟವು ಅಷ್ಟೇ.

ನಮ್ಮ ದೇಶದ ವಿರುದ್ಧ ಭಯೋತ್ಪಾದನೆ ಮಾಡೋರನ್ನು ಬುಡಸಮೇತ ಎಕ್ಸ್ಪೋಸ್ ಮಾಡೋಕೆ ಹೊರಟ ರಣಬೀರ ಸಿಂಗ್ ಕೋಪ ನಿಗ್ರಹಿಸಿಕೊಂಡು ಕಣ್ಣಲ್ಲೇ ಸಂಪೂರ್ಣ ಅಭಿನಯ ಮಾಡಿರೋದು, ಅವನ ದೃಢಕಾಯ, ಆಹಾ! ಹಂಝಾ ಅಲಿ, ಅವನಿಗೆ ನೂರು ಸಲ ಶಾಭಾಷ್ ಹೇಳಲೇಬೇಕು. ಅಯ್ಯೋ, ಶೋ ಸ್ಟೀಲರ್ ಮಾತ್ರ ಆ ರೆಹಮಾನ್ ಡಕಾಯತ್ ಪಾತ್ರ ಮಾಡಿದ ಅಕ್ಷಯ್ ಖನ್ನಾ. ಮಗನ ಸಾವಿನ ಒಂದು ಸೀನ್ ಸಾಕು, ಅವನ ತಾಕತ್ತು ತೋರೋಕೆ. ಏನು ಅಭಿನಯ ಚಾತುರ್ಯ! ಅರ್ಜುನ್ ರಾಮ್ಪಾಲ್, ಸಂಜಯ್ ದತ್ ಥರ ಸೀನಿಯರ್ ಆಕ್ಟರ್ಸ್ ಸೇರಿಕೊಂಡು ನಿಜ್ವಾಗ್ಲೂ ಥೀಯೇಟರ್ ಚಿಂದಿ ಉಡಾಯಿಸೋದು ಅಂದರೆ ಏನು ಅಂತ ತೋರಿಸಿಬಿಟ್ರು. ಎಲ್ಲ ಉಗ್ರರೇ ಸೇರಿ ಪಾಕಿಸ್ತಾನವನ್ನ, ಅದರ ಕಾರನಾಮೆಗಳನ್ನ ಪೂರ್ತಿ ಹೊರಗೆಳೆದು ನಗ್ನಮಾಡಿಬಿಟ್ರು.
ಆ ಪಾಕ್ ಹುಡುಗಿ ಯಾಲೀನಾ ಮತ್ತು ನಮ್ಮ spy ರಣವೀರನ ಮುದ್ದಾದ ಪ್ರೀತಿ ಸೀನ್ ಮಾತ್ರ ಸ್ವಲ್ಪ ಸುಧಾರಿಸಿಕೊಳ್ಳೋಕೆ ಬಿಡ್ತಾ ಇತ್ತು. ಸನ್ನಿವೇಶಕ್ಕೆ ತಕ್ಕ ಬಪ್ಪಿ ಲಹರಿಯ ಸೂಪರ್ ಹಿಟ್ ಹಾಡುಗಳು ಮಾತ್ರ ಸೂಪರ್ರ್ಬ್. ಬಾಲಿವುಡ್ ನಟರ ಅಭಿನಯ ವೈಭವ ನೋಡೋದೇ ಅದ್ಭುತ ಅನುಭವ. ಏನೇ ಇರ್ಲಿ, ಆದಿತ್ಯ ಧರ್ ಅನ್ನೋ ನಿರ್ದೇಶಕ ಗೆದ್ದುಬಿಟ್ಟ.
ಆಂಧಿ ಬನಕೇ ಆಯಾ!
ಆದರೆ ಹಿಂಸೆ ಮಾತ್ರ ಎಷ್ಟು ಅತಿ, ಎಷ್ಟು ಡಿಸ್ಟರ್ಬ್ ಮಾಡುತ್ತೆ ಅಂದರೆ, ಸಿಡಿಯೋ ದೇಹಗಳು, ಹೋಳಾಗುವ ಬುರುಡೆಗಳು, ಗುಂಡಿಗೆ ಅದುರಿಸುವ ಗುಂಡಿನ ಸದ್ದು, ಮಿತಿ ಮೀರಿದ ರಕ್ತಪಾತ, ಉಫ್…ಸತ್ತೆ ಎಂದು ನಾವೇ ಕೂಗಬೇಕು. ದೇವ್ರೇ…ನಾ ವೊಲ್ಲೆ ಎಂತ ಎದ್ದು ಓಡಿ ಹೋಗಬೇಕು. ಆದರೆ ಏಳೋಕೆ ಚೈತನ್ಯ ಇಲ್ಲದ ಹಾಗೆ ಮಾಡೋ ಬ್ಯಾಕ್ ಟು ಬ್ಯಾಕ್ ಎದೆ ಝಲ್ ಎನಿಸೋ ದೃಶ್ಯಗಳು! ತುಂಬಾ ಉದ್ದದ ಸಿನಿಮಾ, ಟೈಮ್ ಲೈನ್ ಸರಿಯಾಗಿ ಫಾಲೋ ಮಾಡಿಲ್ಲ ಅನ್ನೋ ದೂರುಗಳ ನಡುವೆ ಇತ್ತೀಚೆಗೆ ಬಂದ most disturbing must watch movie ಅಂತ ಅನ್ನಿಸಿತು.
Believe me, ತಿನ್ನೋಣ ಅಂತ ತಗೊಂಡ ಪಾಪ್ ಕಾರ್ನ್, ನ್ಯಾಚೋಸ್ ಒಂದೇ ಒಂದು ಕೂಡ ಸೇರಲಿಲ್ಲ, for the first time!
ನಮ್ಮ ದೇಶದ ನಿಜವಾದ ವೈರಿ ಪಾಕಿಸ್ತಾನ ಇರಬಹುದು, ಆದರೆ ಅದಕ್ಕಿಂತ ಮಿಗಿಲಾಗದ ವೈರಿಗಳು ನಮ್ಮದೇಶದಲ್ಲೇ ಇದ್ದಾರೆ, ಇಲ್ಲೇ ಇದ್ದುಕೊಂಡು ಇನ್ನೂ ಪಾಕಿಸ್ತಾನವನ್ನು ಪಾಪ ಅನ್ನೋ ಪಾಪಿಗಳು, ದೇಶ ಮಾರೋಕೆ ಹೊರಟ ಟೂಲ್ ಕಿಟ್ ಗಿರಾಕಿಗಳು, ದೇಶ ಪ್ರೇಮ ಬೆಳೆಸೋರನ್ನು ನಿಂದಿಸೋ ಮಾತೃಭೂಮಿ ಭಂಜಕರು, ತಾಯಿ ಭಾರತಿಗೆ ವಂದೇ ಎನ್ನಲು ನಾಲಿಗೆ ಇಲ್ಲದ ಖಳರು ಅನ್ನೋದು ಮಾತ್ರ ಸತ್ಯ. ಇಂಥವರ ಮುಖವಾಡ ಬಯಲು ಮಾಡೋ ಇಂಥ ಚಿತ್ರಗಳು ಮಾತ್ರ ಬರಲೇಬೇಕು, ಜನ ನೋಡಲೇಬೇಕು.
I am just waiting for the second part.
- ಕವಿತಾ ಹೆಗಡೆ ಅಭಯಂ
