ದೋಸೆ ಇತಿಹಾಸ : ಕೆ.ಅರುಣ್‌ ಪ್ರಸಾದ್‌

ದೋಸೆಯ ತವರುಮನೆ ದಕ್ಷಿಣಭಾರತದ ಉಡುಪಿ. ನೀರು ದೋಸೆ ಮೂಲ ಕರಾವಳಿಯ ತುಳು ಪ್ರದೇಶ.  ದೋಸೆ ಒಂದನೆ ಶತಮಾನದಿಂದ ಬಳಕೆಯಲ್ಲ. ಹನ್ನೆರಡನೆ ಶತಮಾನದ ಸಂಸ್ಕೃತ ವಿಶ್ವಕೋಶ ಮನಸೋಲ್ಲಾಸದಲ್ಲಿ ದೋಸೆ ಪಾಕ ವಿಧಾನ ಇದೆ. ಉದ್ಯಮಿ ಕೆ.ಅರುಣ್‌ ಪ್ರಸಾದ್‌ ಅವರ ಈ ಲೇಖನವನ್ನು ತಪ್ಪದೆ ಮುಂದೆ ಓದಿ…

ಸ್ವಾತಂತ್ರ್ಯನಂತರ ದೆಹಲಿ ಕನಾಟ್ ಪ್ಲೇಸಿನ ಮದ್ರಾಸ್ ಹೋಟೇಲಿಂದ ದೆಹಲಿಯಲ್ಲಿ ದೋಸೆ ಪ್ರಸಿದ್ದಿ ಆಯಿತು. ಉಡುಪಿ ರೆಸ್ಟೋರೆಂಟ್ 1930ರಿಂದ ಮುಂಬೈಯಲ್ಲಿ ದೋಸೆ ಪರಿಚಯಿಸಿತು. ನಮ್ಮ ಮಲ್ಲಿಕಾ ವೆಜ್  ಗ್ರಾಹಕರಿಗೆ ನೀರುದೋಸೆ ನಿತ್ಯ ನೀಡುತ್ತಿದೆ.

ದೋಸೆಯಲ್ಲಿ 112 ಕ್ಯಾಲೋರಿ ಶಕ್ತಿ ಇದೆ. 84% ಕಾರ್ಬೋಹೈಡ್ರೇಟ್ ಮತ್ತು 16% ಪ್ರೋಟೀನ್ ಇದೆ. ಇತ್ತೀಚಿಗೆ ಅಮೇರಿಕಾ ಅಧ್ಯಕ್ಷಿಯ ಚುನಾವಣಾ ಪ್ರಚಾರದಲ್ಲಿ ಉಪಾಧ್ಯಕ್ಷೆ ಆಗಿರುವ ಕಮಲಾ ಹ್ಯಾರೀಸ್ ನಟಿ ಮಿಂಡಿ ಕಾಲಿಂಗ್ ಜೊತೆ ಮಸಾಲೆ ದೋಸೆ ಮಾಡುವ ಮೂಲಕ ವಿಶ್ವದಾದ್ಯಂತ ಗಮನ ಸೆಳೆದಿದ್ದರು. ಭಾರತ ಮೂಲದ ಅಮೇರಿಕನ್ ಮತದಾರರ ಗಮನ ಸೆಳೆಯಲು.

ನಮ್ಮ ಮಲ್ಲಿಕಾ ವೆಜ್ ನಲ್ಲಿ ಎಲ್ಲಾ ಸಂಪ್ರದಾಯಿಕ ದೋಸೆಗಳು ಲಭ್ಯವಿದೆ. ಈಗ ಅನೇಕ ಗ್ರಾಹಕರ ಬೇಡಿಕೆ ಆಗಿದ್ದ  ನೀರು ದೋಸೆ ಈಗ ಲಭ್ಯವಿದೆ.

ಮೂರು ನೀರು ದೋಸೆಯ ಒಂದು ಪ್ಲೇಟಿನಲ್ಲಿ ಹಸಿ ಮೆಣಸಿನಕಾಯಿಯ ತೆಂಗಿನ ಕಾಯಿ ಚಟ್ನಿ ಮತ್ತು ಕೆಂಪು ಒಣ ಮೆಣಸಿನಕಾಯಿ ಮತ್ತು ತೆಂಗಿನ ಕಾಯಿಯ ನೀರು ಚಟ್ನಿ ಆದ ರೇಲ್ ಚಟ್ನಿ ಜೊತೆ ಗ್ರಾಹಕರಿಗೆ ನೀಡುತ್ತಿದೆ ಬೆಲೆ ಕೇವಲ 50 ರೂಪಾಯಿ ಪ್ಲೇಟಿಗೆ.

ನೀರು ದೋಸೆಯ ಮೂಲ ಕರಾವಳಿಯ ತುಳು ಭಾಷಾ ಪ್ರದೇಶ ಅಂದರೆ ಉಡುಪಿ ಮೂಲವೇ ಆಗಿದೆ. ದಕ್ಷಿಣ ಭಾರತದಲ್ಲಿ ಉಡುಪಿ ದೋಸೆಯ ತವರು ಮನೆ ಎ೦ದು ಇತಿಹಾಸಕಾರ ಪಿ. ತಂಕಪ್ಪನ್ ನಾಯರ್ ನಮೂದಿಸಿದ್ದಾರೆ. ಒಂದನೆ ಶತಮಾನದಲ್ಲಿ ಪ್ರಾಚೀನ ತಮಿಳು ದೇಶದಲ್ಲಿ ದೋಸೆ ಬಳಕೆಯಲ್ಲಿತ್ತು ಎಂದು ಆಹಾರ ಇತಿಹಾಸಕಾರ ಟಿ.ಕೆ.ಆಚಾರ್ಯರು ಉಲ್ಲೇಖಿಸಿದ್ದಾರೆ.

8ನೇ ಶತಮಾನದಲ್ಲಿ ಇಂದಿನ ತಮಿಳುನಾಡಿನ ಸಾಹಿತ್ಯದಲ್ಲಿ ದೋಸೆಯ ಲಿಖಿತ ಉಲ್ಲೇಖ ಇದೆ ಅಂತೆ. ಕರ್ನಾಟಕದಿಂದ ಆಳಿದ ಮೂರನೇ ಸೋಮೇಶ್ವರರವರು ಸಂಗ್ರಹಿಸಿದ 12 ನೇ ಶತಮಾನದ ಸಂಸ್ಕೃತ ವಿಶ್ವಕೋಶ  ಮನಸೋಲ್ಲಾಸ ಗ್ರಂಥದಲ್ಲಿ ದೋಸೆಯ ಪಾಕ ವಿಧಾನವಿದೆ.

ಸ್ಥಳೀಯ ತಮಿಳು ಸಂಸ್ಕೃತಿ ಭಾಗವಾಗಿ ದೋಸೆ ಶ್ರೀಲಂಕಾ ತಲುಪಿದೆ. ಈಗ ವಿಶ್ವದಾದ್ಯಂತ ಭಾರತೀಯ ದೋಸೆ ಜನಮನ್ನಣೆ ಪಡೆದಿದೆ. ಶಿವಮೊಗ್ಗ ಜೋಗ್ ಪಾಲ್ಸ್  ಸಿಗಂದೂರು ಮಾಗ೯ದಲ್ಲಿ ಪ್ರಯಾಣಿಸುವಾಗ ಆನಂದಪುರಂ ಯಡೇಹಳ್ಳಿ ವೃತ್ತದಲ್ಲಿರುವ  ಮಲ್ಲಿಕಾ ವೆಜ್ ಗೆ ಭೇಟಿ ನೀಡಿ ಲೊಕೇಶನ್ ಕಾಮೆಂಟ್ ನಲ್ಲಿದೆ.


  • ಕೆ. ಅರುಣ್‌ ಪ್ರಸಾದ್‌ – ಹೋಟೆಲ್ ವ್ಯಾಪಾರಸ್ಥರು, ಲೇಖಕರು

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading