25 ವರ್ಷಗಳ ವೃತ್ತಿ ಜೀವನದಲ್ಲಿ ಯಶಸ್ಸನೇ ಕಂಡಿದ್ದ ಕೇರಳದ ಖ್ಯಾತ ವೈದ್ಯ ಡಾ.ಜಾರ್ಜ್ ಪಿ ಅಬ್ರಹಾಂ ಇದ್ದಕ್ಕಿದ್ದಂತೆ ನೇಣಿಗೆ ಶರಣಾಗಿದ್ದು ಯಾಕೆ? ಪತ್ರಕರ್ತ ಸುಧಾಕರ್ ಶಿವರಾಳಯ್ಯ ಅವರ ಈ ಪುಟ್ಟ ಲೇಖನವನ್ನು ತಪ್ಪದೆ ಮುಂದೆ ಓದಿ….
ನನ್ನ ಕೈ ನಡುಗುತ್ತಿದೆ…ಮೊದಲಿನ ಹಾಗೇ ಶಸ್ತ್ರಚಿಕಿತ್ಸೆಗಳನ್ನು ಮಾಡಲು ಆಗ್ತಿಲ್ಲ..ಹೀಗಂತಾ ನೊಂದುಕೊಂಡು ಡೆತ್ನೋಟ್ ಬರೆದು ಆತ್ಮಹತ್ಯೆಗೆ ಶರಣಾಗಿದ್ದು ಸಾಮಾನ್ಯ ವೈದ್ಯನಲ್ಲ..ಕಠಿಣಾತಿಕಠಿಣ ಶಸ್ತ್ರಚಿಕಿತ್ಸೆಗಳಲ್ಲಿ ಒಂದಾದ ಕಿಡ್ನಿ ಕಸಿಗಳನ್ನು ಮಾಡುವಲ್ಲಿ ದಶಕಗಳಿಂದಲೂ ಪಳಗಿದ್ದ ಧುರೀಣ ವೈದ್ಯ…ಹೆಸರು ಜಾರ್ಜ್ ಪಿ ಅಬ್ರಹಾಮ್.. ಕೇರಳದಲ್ಲಿ ತುಂಬಾನೇ ಫೇಮಸ್ ಎನಿಸಿಕೊಂಡಿದ್ದ ನೆಫ್ರೋಲಜಿ ಹಾಗೂ ಯೂರಾಲಜಿ ತಜ್ಞ.

ಡಾ.ಜಾರ್ಜ್ ಪಿ ಅಬ್ರಹಾಂರವರು ಅವರ 25 ವರ್ಷಗಳ ವೃತ್ತಿ ಜೀವನದಲ್ಲಿ ಮಾಡಿದ ಕಿಡ್ನಿ ಕಸಿಗಳ ಲೆಕ್ಕವೆಷ್ಟು ಗೊತ್ತಾ? ಬರೋಬ್ಬರಿ 2500ಕ್ಕೂ ಹೆಚ್ಚು…ಅಷ್ಟೇ ಅಲ್ಲ, 15,000ಕ್ಕೂ ಅಧಿಕ ಎಂಡೋಯೂರೋಲಾಜಿಕಲ್ ಪ್ರೊಸೀಜರ್ಗಳನ್ನ ಲೀಲಾಜಾಲವಾಗಿ ನಡೆಸಿದ್ದರು..ಲ್ಯಾಪ್ರೋಸ್ಕೋಪಿಕ್ ಕಿಡ್ನಿ ಟ್ರಾನ್ಸ್ಪ್ಲಾಂಟ್ ಮಾಡಿದ ಜಗತ್ತಿನ 3ನೇ ವೈದ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಅಬ್ರಹಾಂ 6 ತಿಂಗಳ ಹಿಂದೆ ಬೆನ್ನು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು..
ಆ ಆಪರೇಷನ್ನ ಬಳಿಕ ಕೈಗಳು ನಡುಗೋಕೆ ಶುರುಮಾಡಿವೆ..ಈ ಕಾರಣದಿಂದ ತಮ್ಮ ವೈದ್ಯಕೀಯ ವೃತ್ತಿಯನ್ನು ಅದೇ ಪ್ರಾವೀಣ್ಯತೆಯಿಂದ ಮುಂದುವರಿಸಲು ಸಾಧ್ಯವಾಗುತ್ತಿರಲಿಲ್ಲ..ಮೊದಲಿನಂತೆ ರೋಗಿಗಳ ಶಸ್ತ್ರಚಿಕಿತ್ಸೆ ಮಾಡಲು ದೇಹ ಸರಿಯಾಗಿ ಸ್ಪಂದಿಸದ ಕಾರಣ ಕುಗ್ಗಿ ಹೋಗಿದ್ದಾರೆ…ತೋಟದ ಮನೆಯಲ್ಲಿ ತಮ್ಮ ಸಾವಿಗೆ ಕಾರಣ ಬರೆದಿಟ್ಟು ಸೂಸೈಡ್ ಮಾಡಿಕೊಂಡಿದ್ದಾರೆ..
ಇವರ ಸ್ಟೋರಿ ಓದಿದ ಮೇಲೆ ಅನಿಸಿದ್ದು…ಕಾಯಕವೇ ಕೈಲಾಸ..ವೈದ್ಯೋ ನಾರಾಯಣೋ ಹರಿ…MY RESPECT SIR
- ಸುಧಾಕರ್ ಶಿವರಾಳಯ್ಯ – ಪತ್ರಕರ್ತರು
