– ಶಾಲಿನಿ ಪ್ರದೀಪ್ ಹೂಲಿ (ಲೇಖನ)
‘ಸಂಕಟ ಬಂದಾಗ ವೆಂಕಟರಮಣ’ ಮಾತಿನಂತೆ ನಾವು ಕೂಡಾ ಹಲ್ಲಿಗೆ ಸಂಕಟ ಬಂದಾಗ ದಂತವೈದ್ಯರನ್ನು ನೆನಸಿಕೊಳ್ಳುತ್ತೇವೆ. ಅಲ್ಲಿಯವರೆಗೂ ಬಾಯಿಗೆ ಸಿಕ್ಕಿದ್ದನ್ನು ತಿಂದು ತೇಗುತ್ತೇವೆ. ಹೇಗೆಂದರೆ ಹಾಗೆ ಅಗಿಯುತ್ತೇವೆ. ಹಲ್ಲಿನ ಬಗ್ಗೆ ನಿರ್ಲಕ್ಷ್ಯವಹಿಸುತ್ತೇವೆ. ಆದರೆ ಹಲ್ಲಿನ ಬಗ್ಗೆ ನಿರ್ಲಕ್ಷ್ಯ ಒಳ್ಳೇದಲ್ಲ. ಹಲ್ಲು ಕೂಡಾ ನಮ್ಮ ದೇಹದ ಅವಿಭಾಜ್ಯ ಅಂಗ. ಅದನ್ನು ಖಾಳಜಿ ಪೂರ್ವಕವಾಗಿ ಕಾಪಾಡುವುದು ನಮ್ಮ ಕರ್ತವ್ಯವು ಹೌದು.
ಹಲ್ಲಿಗೆ ಸಂಬಂಧಿಸಿದಂತೆ ದಂತ ವೈದ್ಯರಾದ ಡಾ.ಸುರೇಶ ಅವರಿಂದ ಸಾಕಷ್ಟು ವಿಷಯಗಳನ್ನು ತಿಳಿದುಕೊಳ್ಳುವ ಅವಕಾಶ ನನಗೆ ಸಿಕ್ಕಿತ್ತು. ಡಾ.ಸುರೇಶ ಅವರ ಕಿರುಪರಿಚಯ ನಿಮಗೆ ಮಾಡುತ್ತೇನೆ. ಹುಟ್ಟಿದ್ದು ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ. ಬಿಡಿಎಸ್ ಪದವಿಯನ್ನು ಮಣಿಪಾಲನಲ್ಲಿ ಮತ್ತು ಎಂಡಿಎಸ್ ಸ್ನಾತಕೋತ್ತರ ಪದವಿಯನ್ನು ದಾವಣಗೆರೆ ಬಾಪೂಜಿ ದಂತ ಕಾಲೇಜಿನಲ್ ಇವರು ಪಡೆದು ಕೊಂಡಿದ್ದಾರೆ. ಇವರ ತಂದೆ ಡಾ.ಎಚ್.ಶ್ರೀನಿವಾಸ ಮತ್ತು ಅಣ್ಣ ಡಾ.ಗಿರೀಶ. ವೈದ್ಯರ ಕುಟುಂಬದ ಹಿನ್ನೆಲೆಯುಳ್ಳ ಇವರು ವೃತ್ತಿಯನ್ನಾಗಿ ಆಯ್ದುಕೊಂಡಿದ್ದು ದಂತ ವೈದ್ಯರಾಗಿ. ಪ್ರಸ್ತುತ ಬೆಂಗಳೂರಿನ ಜೆಪಿ ನಗರದಲ್ಲಿ ಸ್ಮೈಲ್ ಸ್ಮಿಥ್ ಕ್ಲಿನಿಕ್ ನಲ್ಲಿ ಇಂಪ್ಲಾಂಟ್ ಸ್ಪೆಷಲಿಸ್ಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಡಾ. ಸುರೇಶ ಮತ್ತು ಕುಟುಂಬದವರೊಂದಿಗೆ
ಡಾ.ಸುರೇಶ ಅವರು ನೂರಾರು ಜನರಿಗೆ ಯಶಸ್ವಿಯಾಗಿ ಕೃತಕ ಹಲ್ಲುಗಳನ್ನು ಜೋಡಿಸಿದ್ದಾರೆ.
ಇದನ್ನು ಇಂಗ್ಲೀಷನಲ್ಲಿ ಇಂಪ್ಲಾಂಟ್ ಎನ್ನಲಾಗುತ್ತದೆ. ಮನುಷ್ಯನ ನೈಜ್ಯ ಹಲ್ಲುಗಳಿಗೆ ಕುತ್ತಾದಾಗಕೃತಕ ಸ್ಕ್ರೂಗಳನ್ನುದವಡೆಗಳಿಗೆ ಅಳವಡಿಸಿ ಅದರ ಮೇಲೆ ಕೃತಕ ಹಲ್ಲುಗಳನ್ನುಜೋಡಿಸಲಾಗುತ್ತದೆ. ಇದನ್ನು ಕೂರಿಸುವುದು ಅಷ್ಟು ಸುಲಭವಲ್ಲ.ಇದಕ್ಕೆ ನುರಿತ ವೈದ್ಯರು ಬೇಕು. ಆ ಕೆಲಸವನ್ನು ಡಾ.ಸುರೇಶ ಅವರು ಮಾಡುವುದರಲ್ಲಿ ಎತ್ತಿದ ಕೈ. ಇವರ ಸೇವೆಗೆ ನ್ಯಾಷನಲ್ ಮಟ್ಟದಲ್ಲಿ ಹಲವಾರು ಪ್ರಶಸ್ತಿಗಳು ಬಂದಿವೆ.
ಡಾ. ಸುರೇಶ ಅವರಿಂದ ಎರಡು ಪ್ರಮುಖ ವಿಷಯಗಳು ತಿಳಿಯಿತು. ಮೊದಲನೆಯದಾಗಿ ಮನುಷ್ಯನ ಅರೋಗ್ಯದಏರುಪೇರಿಗೆ ದಂತದ ಸಮಸ್ಯೆಯೂ ಒಂದು ಕಾರಣವಾದರೆ ಇನ್ನೊಂದು ಒಬ್ಬಡಾಕ್ಟರ್ ಗೆ ಒಬ್ಬ ರೋಗಿಯ ಆರೋಗ್ಯ ಎಷ್ಟು ಮುಖ್ಯವಾಗಿರುತ್ತದೆ ಎನ್ನುವುದನ್ನು ಇವರಿಂದ ತಿಳಿದುಕೊಳ್ಳಬೇಕು. ನೋವಿನಿಂದ ನರಳುವ ಎಷ್ಟೋ ರೋಗಿಗಳು ಇವರ ಕ್ಲಿನಿಕ್ನಿಂ ದ ಹೊರಗೆ ಹೋಗುವಾಗ ನಗುವನ್ನು ಮೂಡಿಸದೆ ಬಿಡಲಾರರು. ಇವರು ರೋಗಿಗಳ ಆರೋಗ್ಯಕ್ಕೆ ಮೊದಲ ಪ್ರಾಮುಖ್ಯತೆ ನೀಡುತ್ತಾರೆ.
ಡಾ.ಸುರೇಶ ಅವರು ಹೇಳುವ ಪ್ರಕಾರ ಮುಂದಿನ ಹಲ್ಲುಗಳು ನಗುವಿನ ಸೌಂದರ್ಯ ಹೆಚ್ಚಿಸಿದರೆ, ಹಿಂದಿನ ಹಲ್ಲುಗಳು ಆಹಾರ ಜಗಿಯಲು ಸಹಾಯಕವಾಗುತ್ತದೆ. ಹಿಂದಿನ ಹಲ್ಲುಗಳಿಗೆ ಸರಿಯಾದ ಕಾಳಜಿವಹಿಸದಿದ್ದಾಗ ಅವುಗಳಿಗೆ ಹುಳುಹಿಡಿಯಲು ಆರಂಭಿಸುತ್ತವೆ. ಇದನ್ನು ಪ್ರಾಥಮಿಕ ಹಂತದಲ್ಲಿ ನಿರ್ಲಕ್ಷಿಸಿದರೆ ಮುಂದೆ ಆಗುವ ನೋವುಗಳ ಬಗ್ಗೆ ಅವರು ಜಾಗೃತಿ ಮೂಡಿಸುತ್ತಾರೆ ಮತ್ತು ಕೆಲವು ಖಾಳಜಿ ಕ್ರಮಗಳ ಬಗ್ಗೆ ಇಲ್ಲಿ ತಿಳಿಸಿದ್ದಾರೆ. ಸರಳ ಸಜ್ಜನಿಕೆಯ ಸೇವಾಭಾವದ ಈ ವೈದ್ಯರನ್ನು ಆಕೃತಿ ಮ್ಯಾಗಝಿನ್ ಇತ್ತೀಚೆಗೆ ಮಾತನಾಡಿಸಿತು. ಅದರ ನೋಟ ಇಲ್ಲಿದೆ…
೧. ಹಲ್ಲುಗಳು ಹೇಗೆ ಹುಳುವಿಗೆ ತುತ್ತಾಗುತ್ತವೆ ಮತ್ತು ಅದರ ಚಿಕಿತ್ಸೆ?
೨. ಜೋರಾಗಿ ಆಕಳಿಸಿದಾಗ ಅಥವಾ ದೊಡ್ಡದಾಗಿ ಬಾಯಿಯನ್ನು ತೆರೆದಾಗ ಅನಂತರ ಬಾಯಿಯನ್ನು ಸಹಜ ಸ್ಥಿತಿಯಲ್ಲಿ ಮುಚ್ಚಲು ಸಾಧ್ಯವಾಗುವುದಿಲ್ಲ.ಇದಕ್ಕೆ ಇಂಗ್ಲಿಷ್ ನಲ್ಲಿ ‘ಲಾಕ್ ಜಾವ್’ ಎನ್ನುತ್ತಾರೆ. ಪಂಜಾಬ್ ನಲ್ಲಿ ಮಹಿಳೆಯೊಬ್ಬಳು ‘ಲಾಕ್ ಜಾವ್’ಗೆ ತುತ್ತಾಗಿ ವೈದ್ಯರಿಂದ ಸರಿಯಾದ ಚಿಕಿತ್ಸೆ ಸಿಗದೇ ಸಾವನ್ನಪ್ಪಿದಳು. ಆ ಪರಿಸ್ಥಿತಿ ಮತ್ತ್ಯಾರಿಗೂ ಬರಬಾರದು ಎನ್ನುವ ಉದ್ದೇಶದಿಂದ ‘ಲಾಕ್ ಜಾವ್’ ಎಂದರೇನು ಮತ್ತು ಇದಕ್ಕೆ ಚಿಕಿತ್ಸೆ ಏನು? ಎನ್ನುವುದರ ಬಗ್ಗೆತಿಳಿಸಿ.
೩. ಮೂಲ ಹಲ್ಲುಗಳು ಕಳೆದುಕೊಂಡವರಿಗೆ ಕೃತಕ ಹಲ್ಲುಗಳ ಜೋಡಿಸಿ(ಇಂಪ್ಲಾಂಟ್) ಅವರ ನಗುವಿನ ಸೌಂದರ್ಯವನ್ನು ಹೆಚ್ಚಿಸಿದ್ದಿರಿ. ಈ ಇಂಪ್ಲಾಂಟ್ ಬಗ್ಗೆ ಸ್ವಲ್ಪ ಹೇಳಿ…
ವಿಳಾಸ :
ಡಾ.ಸುರೇಶ ಎಸ್ (ಎಂ.ಡಿ.ಎಸ್)
ಸ್ಮೈಲ್ ಸ್ಮಿಥ್ ಡೆಂಟಲ್ ಕೇರ್
ಫೋನ್ ನ೦ : 8197216555/ 7337620855
http://www.smilessmithdental.com/