‘ಎದೆಯಲಿ ಹುಟ್ಟಿದ ನೂರು ಬಯಕೆ’ ಕವನ

ಎದೆಯಲಿ ಹುಟ್ಟಿದ ನೂರು ಬಯಕೆಗಳು…ಸೋತು ಹೋದೆ “ನಲ್ಲ” ಅವಳ ಕಣ್ಣೋಟಕೆ…ಚೇತನ್ ಗವಿಗೌಡ ಅವರ ಲೇಖನಿಯಲ್ಲಿ ಅರಳಿದ ಒಂದು ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…

ಮಾಗಿಯ ಚಳಿಗಾಳಿಗೆ
ನಡುಗಿ
ಬಿಗಿದ ತೋಳುಗಳು
ಒಂದನ್ನೊಂದು ಅಪ್ಪಿಕೊಂಡವು
ಬಂಧಿಖಾನೆಯೊಳಗೆ
ಬಂಧನವಾದಂತೆ

ಎದೆಯಲಿ ಹುಟ್ಟಿದ
ನೂರು ಬಯಕೆಗಳು
ಒಮ್ಮೆಲೆ ಎದುರಾದವು
ಮೂಡಣದಲ್ಲೊಂದು ಪಡುವಣದಲ್ಲೊಂದು
ಮೇರು ಶಿಖರಗಳಂತಿರುವ
ಬಿಗಿದ ಎದೆಯ ಚೆಲುವ ಕಂಡು

ಸೋತು ಹೋದೆ “ನಲ್ಲ”
ಅವಳ ಕಣ್ಣೋಟಕೆ
ಮೈ ಮಾಟಕೆ
ಹಳಿ ತಪ್ಪಿದ ಎದೆಬಡಿತಕೆ

ಏತಕೆ?
ಈ ಒಡವೆ ಆಡಂಬರ!

ಉದ್ದನೆಯ ಕೇಶರಾಶಿ
ಕೊಲ್ಲುವ ಕಣ್ಣಂಚು
ಸಂಪಿಕೆಯ ನಾಸಿಕ
ಮಧುರಸದ ತುಟಿ
ನಾಚುವ ಕೆನ್ನೆ
ಬಳುಕುವ ಸೊಂಟ
ಇತ್ಯಾದಿ.. ಇತ್ಯಾದಿ..
ಸಾಕಲ್ಲವೇ!?

ಬಳುಕುವ ನಡುಗಳಿಗೆ
ನಡುಗುವ ಕೈ ತಾಕಿತು
ವಿರಹ ಉಕ್ಕಿ ಎದೆಯನ್ನುಬಿಸಿತು
ಆಕೆಗೂ
ಅದೇ ಬೇಕಿತ್ತು.
ಲಜ್ಜೆಯ ಬಿಟ್ಟು ಗೆಜ್ಜೆಯ ತೆಗೆದಳು
ಮಣಿಸರ ಕಿವಿಯೋಲೆಯನು
ಜೊತೆಗೆ

ಹುಣ್ಣಿಮೆಯ ಬೆಳದಿಂಗಳಲಿ
ಚಂದ್ರನು ನಾಚುತಿದ್ದ
ಚಂದ್ರಿಕೆ ಶಿಲಾಬಾಲಿಕೆಯಂತೆ
ನಲ್ಲನ ಕೆರಳಿಸುತಿದ್ದಳು
ಉಸಿರಿಗೆ ಉಸಿರು ಸೋಕಿ
ಹಬ್ಬಿತು ಬೆವರ ಘಮಲು
ಶಯ್ಯಗೃಹದ ತುಂಬಾ..

ಮಿಡ್ನೈಟ್ ಕವಿತೆ
ಬೇಲೂರು ಶಿಲಾಬಾಲಿಕೆ
ಅನುಸರಿಸುವರು


  • ಚೇತನ್ ಗವಿಗೌಡ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW