ಸಾಮಾನ್ಯ ಜನರಿಗೂ ಸಂವಿಧಾನ ಅರ್ಥವಾದರೆ ಎಷ್ಟು ಚಂದ



ಇಂದು ಯಾವುದೇ ರಾಜಕೀಯ ಪಕ್ಷವೂ ದೇಶದ ಕನಿಷ್ಟ ಸಮಸ್ಯೆಯನ್ನು ನಿರ್ಮೂಲನ ಮಾಡುವ ಉದ್ದೇಶ ಇಟ್ಟುಕೊಂಡಿಲ್ಲ. ಚುನಾವಣೆಯಲ್ಲಿ ಜಯಿಸುವುದಕ್ಕಾಗಿ ಎಲ್ಲಾ ಸಮಸ್ಯೆಗಳನ್ನು ಹಾಗೆ ಇಡುತ್ತಾರೆ. ಪ್ರತಿಯೊಬ್ಬ ಪ್ರಜೆಗೂ ಸಂವಿಧಾನ ನೀತಿ ಸಂಹಿತೆ ಅರ್ಥವಾದರೆ, ಉತ್ತಮ ನಾಯಕನನ್ನು ಆಯ್ಕೆ ಮಾಡಲು ಸಾಧ್ಯ.ಮುಂದೆ ಓದಿ…

ಚುನಾವಣೆ ಬಂದಾಗ ಇದೇ ಸಮಸ್ಯೆಗಳನ್ನು ಮತ್ತೊಮ್ಮೆ ಬೇರೆ ಬಣ್ಣ ಹಚ್ಚಿ ತೋರಿಸಿ, ಜಯಿಸಿ /ಸೋತು ಮಾಯವಾಗುತ್ತಾರೆ. ವಿರೋಧ ಪಕ್ಷವು ತಪ್ಪುಗಳನ್ನು ಎತ್ತಿ ಹಿಡಿಯಬೇಕು, ವಿಮರ್ಶಿಸಬೇಕು. ಮಾಧ್ಯಮವೂ ಎಂದೆಂದೂ ಸರ್ಕಾರ ನಡೆಸುವುದರ ವಿಮರ್ಶಕರಾಗಬೇಕು ಪೊಗುಳು ಭಂಟರಾಗಬಾರದು. ಒಳ್ಳೆ ಮಾಧ್ಯಮ ಜನರಲ್ಲಿ ಪ್ರಬುದ್ಧತೆ ಬೆಳೆಸುತ್ತದೆ.

ಫೋಟೋ ಕೃಪೆ : youth ki awaaz

ಇನ್ನು ಆಳುವ ಪಕ್ಷ, ಸರಕಾರದ ನಡೆಗಳ ವಿಮರ್ಶಕರನ್ನು ದೇಶದ್ರೋಹಿ ಎನ್ನುವುದು ಸೂಕ್ತವಲ್ಲ. ಮನುಷ್ಯನಿಗೆ ಎರಡು ಕಣ್ಣು ಇದ್ದಂತೆ, ಆಡಳಿತ ಹಾಗೂ ವಿರೋಧ ಪಕ್ಷ – ದೇಶಕ್ಕೆ. ಗುರಿ ಇಡಲು ಮುಚ್ಚುವ ಕಣ್ಣು ಬೇಡವೆಂದು ಕುಕ್ಕಿ ಕಿತ್ತು ಹಾಕಿದಂತೆ , ವಿರೋಧ ಪಕ್ಷವನ್ನು ಕಡೆಗಣಿಸಿದರೆ ದೇಶದ ಸ್ಥಿತಿ. ಮತದಾರರು ಪ್ರಶ್ನೆ ಮಾಡುವ ಪರಿಪಾಟ ಬೆಳೆಸಬೇಕು. ನಮ್ಮ ದೇಶದ ಮುನ್ನಡೆಗೆ ವಿಧಾನವಾದ ಸಂವಿಧಾನ ಓದಿದರೆ , ಮತ ಹಾಕುವ ನಮ್ಮ ಬೆಲೆ ನಮಗೆ ಗೊತ್ತಾಗುತ್ತೆ.

MLA/MLC/MP/ಜಿಲ್ಲಾಧಿಕಾರಿ, ಸರ್ಕಾರಿ ನೌಕರರು… ಎಲ್ಲರೂ ತೆರಿಗೆ ಕಟ್ಟುವ ಸಾರ್ವಜನಿಕರ ಸೇವಕರು. ಅವರು ಜನರನ್ನು ಕಾಲಾಳುಗಳಂತೆ ಕಾಣುವುದು ಪ್ರಜೆಗಳಲ್ಲಿ ಸಂವಿಧಾನದ ಅನಕ್ಷರತೆ ತೋರುತ್ತದೆ. ಅವರನ್ನು ಪ್ರಜೆಗಳು ” MLA/MLC/MP ಎನ್ನುವ ಬದಲು # ಜನ_ಪ್ರತಿನಿಧಿಗಳೇ ಎಂದೂ …. ಜಿಲ್ಲಾಧಿಕಾರಿ, government employee ಎನ್ನುವ ಬದಲು…”#ಸರಕಾರೀ_ಸೇವಕರೇ” ಎಂದೂ ಕರೆಯಬೇಕು- ಅದನ್ನು ರೂಢಿಮಾಡಬೇಕು. ಹಾಗೂ ಅವರುಗಳು MLA/MLC/MP/ಜಿಲ್ಲಾಧಿಕಾರಿ, ಸರ್ಕಾರಿ ನೌಕರರು” ಸಂವಿಧಾನ ರಕ್ಷಕರಾಗಿ ನಾವು ನಿಮಗೇನು ಸೇವೆ ಮಾಡಲಿ…..” ಎಂದು ಗೌರವದಿಂದ ಕೇಳುವಂತವರಾಗಬೇಕು. ಅದಕ್ಕೆ ೧-೧೦ ತರಗತಿಯವರೆಗೆ ಯಾರೂ ಸಂವಿಧಾನ ಸಂಪೂರ್ಣ ಓದದಂತೆ ನಮ್ಮ ರಾಜಕೀಯದವರು ವಿದ್ಯಾಭ್ಯಾಸವನ್ನು ರಂಗು ರಂಗಿಸಿದ್ದಾರೆ.
ಯಾವುದೇ ಭಾರತೀಯನೂ ಸ೦ಪೂರ್ಣವಾಗಿ ಸಂವಿಧಾನ ಓದಿರುವುದು ಅತ್ಯ೦ತ ವಿರಳ. ಒಂದು ಹೊಟೆಲ್ ನ ಒಳಗೆ ಹೋದರೆ… ಏನೇನಿದೆ ಎಂಬ ಮಾಹಿತಿ ಫಲಕ ಇದ್ದಂತೆಯೇ… ಬಸ್ -ರೈಲ್ವೇ ನಿಲ್ದಾಣದ ಒಳಗೆ ಹೋದರೆ, ಯಾವ ಯಾವ ಊರಿಗೆ -ಯಾವ ಸಮಯದಲ್ಲಿ ಯಾತ್ರಾ ಸೌಲಭ್ಯ ವಿದೆ….ಎಂಬ ಮಾಹಿತಿ ಫಲಕ ಇದ್ದಂತೆಯೇ…..

ಫೋಟೋ ಕೃಪೆ : Hindustan times

ಅದೇ ರೀತಿ ಈ ದೇಶದೊಳಗೆ ಜನರಿಗಿರುವ ನ್ಯಾಯ ನೀತಿ ಎಂಬ ಸವಿರುಚಿಯ ಸ೦ವಿಧಾನದ ಸದಭಿರುಚಿಯ ವರ ಇದೆ ಎಂಬ ಗೋಚರತೆ ತರಬೇಕು. ಅದರ/ ಸಂವಿಧಾನದ ಸಂಪೂರ್ಣ ವಿವರ ನಾಳೆಯ ನಾಡಿನ ಮಕ್ಕಳಲ್ಲಿ ಕರತಲಮಲಕ ಮಾಡಲು ೩ನೇ ತರಗತಿಯಿ೦ದ ೧೦ನೇ ತರಗತಿಯವರೆಗೆ ಅವರವರ ಮಾತೃಭಾಷೆಯಲ್ಲಿ ವಿದ್ಯಾಭ್ಯಾಸದ ಭಾಗವಾದರೆ,ಅದು ಮೆದುಳಿನೊಳಗೆ ಒಂದು ಮಾಹಿತಿ ಫಲಕ/ಕೇಂದ್ರ ಆಗಬಹುದು. ಇದರಿಂದ ಒಂದು ವೇಳೆ ಸಾಮಾನ್ಯ ಜನರ ಸಮಸ್ಯೆಗೆ ಉಸಿರಾಡುವ ಸುಧಾರಣೆ ಸಿಗಬಹುದೆಂಬ ಆಶಯ.

ಇನ್ನು ಗಾಳಿ , ನೀರು, ಆಹಾರ ಪ್ರಕೃತಿಯಲ್ಲಿ ಪ್ರತೀಯೊಂದು ಅಣು, ಪರಮಾಣು, ವಾಯುವಿಗೆ ಅದರದೇ ಆದ ಪ್ರಮಾಣದ ಮಿತಿಯೊಳಗಿನ ಅನುಪಾತವಿದೆ. ಅದು ವಿಲೋಮವಾದಾಗ ,ಕಲುಷಿತತೆಗೆ ಕಾರಣವಾಗುತ್ತದೆ – ಕಾರಣವಾಗಿದೆ. ಹೇಗೆ ನೀರು ಕಲುಷಿತವಾದರೆ ಜಲಚರಗಳು ಸಾಯುವುದೋ ಹಾಗೇ ಮಾನವನಿಗೆ ಗಾಳಿ, ನೀರು, ಆಹಾರ ಕಲುಷಿತವಾದರೆ ದೇಹ ಅಸೌಖ್ಯ ಆಗುತ್ತದೆ. ಈ ಕಲುಷಿತತೆಗೆ ಪ್ರಕೃತಿಯ ಕೋಟ್ಯಾನುಕೋಟಿ ಸಕಲ ಚರಾಚರ ಜೀವಿಗಳಲ್ಲಿ ಮಾನವನೇ ಕಾರಣ. ಪ್ರತಿಯೊಂದು ಜೀವವಿರುವ ಜೀವಿಯೊಳಗೆ ಜೈವಿಕ ಆಮ್ಲಜನಕ ಬೇಡಿಕೆ( Biological Oxygen Demand =BOD) ಗೆ ಪೂರಕವಾಗಿ, ನಮ್ಮ ದೇಹವು ಗಾಳಿಯಿಂದ ಆಮ್ಲಜನಕ ಬೇರ್ಪಡಿಸಿ ದೇಹದ ವಿವಿಧ ಭಾಗಗಳಿಗೆ ಪೂರೈಸಬೇಕು, ಅವಶ್ಯಕತೆಗೆ ಶೇಖರಿಸಿ ಸಂಗ್ರಹಿಸಿ ಇಡಬೇಕು. ನಮ್ಮ ದಿನ ನಿತ್ಯದ ದೇಹದೊಳಗಿನ ಕ್ರೀಯೆ, ಬದಲಾವಣೆಗಳು, ಬೆಳವಣಿಗೆಗಳು …. ಮುಂತಾದವುಗಳಿಗೆ ಆಮ್ಲಜನಕ ಅತ್ಯವಶ್ಯಕ.



ದೈನಂದಿನ ಸಾಮಾನ್ಯ ನೈಸರ್ಗಿಕ ಜೈವಿಕ ರಾಸಾಯನ ಕ್ರೀಯೆ/ ನೈಸರ್ಗಿಕ ಆಹಾರ ತಿನ್ನುವಾಗ… ಜೀರ್ಣಕ್ರೀಯೆಗೆ ಬೇಕಾದ ಆಮ್ಲಜನಕ ದೇಹ ಸ್ವಯಂಚಾಲಿತವಾಗಿ (automatically) ಒದಗಿಸುತ್ತದೆ. ಅದೇ ನಾವು ರಾಸಾಯನಿಕಗಳು ಬೆರೆತ, ಬೇಕರಿ, ಪೊಟ್ಟಣಗಳ ಆಹಾರ, ಮಿತ ಪೌಷ್ಟಿಕ (junk food)ಆಹಾರ , ಯಾವುದೇ ಮಾತ್ರೆ, ಔಷಧಿ ಸೇವಿಸಿದಾಗ, ನಮ್ಮ ದೇಹಕ್ಕೆ ಇದು ಅನೈಸರ್ಗಿಕ ಅಂತಗೃಹಣ (intake)ಆಗಿರುತ್ತದೆ. ಅಂತಹ ಅತಿ ಹೊರೆ (over load ) ಗೆ ಹೆಚ್ಚಿನ ಪ್ರಮಾಣದ ಆಮ್ಲಜನಕದ ಅತ್ಯವಶ್ಯಕವಾಗುತ್ತದೆ. ಅದನ್ನು ರಾಸಾಯನಿಕ ಆಮ್ಲಜನಕ ಬೇಡಿಕೆ( Chemical Oxygen Demand= COD) ಅನ್ನುತ್ತಾರೆ.

ಅಂತಹಾ ಸಂದರ್ಭದಲ್ಲಿ ಉಸಿರಾಟದೊಂದಿಗೆ ಆಮ್ಲಜನಕ(0) ಅಡಕವಾದ ಹೆಚ್ಚಿನ ನೀರು(H2O) ನಾವು ಕುಡಿಯಬೇಕು. ಈ ನೀರೇ ಕಲುಷಿತವಾದರೆ… ವಾತಾವರಣದಲ್ಲಿ ಆಮ್ಲಜನಕದ ಅಂಶದ ಅನುಪಾತ ಕಮ್ಮಿಯಾದರೆ? ಪ್ರಕೃತಿ ಒಂದು ಆಟದ ವಸ್ತುವಲ್ಲ ಅದೊಂದು ಜೀವನ ವೇದಿಕೆ. ನ್ಯಾಯವು ಒಂದು ಜಗಿದು ಉಗಿಯುವ ಎಂಜಿಲಲ್ಲ, ಅದು ಮಾನವೀಯತೆಯ ಮೌಲ್ಯಗಳ ಅಡಿಪಾಯ. ಇದನ್ನು ಅರಿತ ಪ್ರಜೆಗಳು ಅಂತೆಯೇ ಅರಿತವನನ್ನು ನಾಯಕನಾಗಿ ಚುನಾಯಿಸಿದರೆ. ಮೂಲಭೂತ ಬೇಡಿಕೆ ( ಶಿಕ್ಷಣ,ನೀರು, ಆಹಾರ, ನ್ಯಾಯ….) ಸುಗಮವಾಗಬಹುದು.

ಎಂಬ ಮೂಢ ಖಾಸಗೀ

ನಂಬಿಕೆಯೊಂದಿಗೆ…

ನಿಮ್ಮವ ನಲ್ಲ
ರೂಪು

  • ಪ್ರೊ. ರೂಪೇಶ್ (ರಾಸಾಯನ ಶಾಸ್ತ್ರ ವಿಭಾಗ, ಉಪನ್ಯಾಸಕರು, ಬೆಂಗಳೂರು)

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW