ನೀನೇ ಅಲ್ಲವೇ ಅಂದ ಚಂದದವಳು…ಯಾರಿವಳು?.ಕವಿ ಲಕ್ಷ್ಮಣ ಕೌಂಟೆ ಅವರ ಲೇಖನಿಯಲ್ಲಿ ಮೂಡಿ ಬಂದ ಕವನದ ಸುಂದರ ಸಾಲುಗಳು, ಮುಂದೆ ಓದಿ…
ಮಾಡುವ ಕೆಲಸವೇ ಅದೇ ಅಲ್ಲವೇ
ಹಾಕ ಬೇಕಾದ ಪದಾರ್ಥಗಳೆಲ್ಲ
ಅಗತ್ಯಕ್ಕೆ ತಕ್ಕಂತೆ ಹಾಕಿ
ಉರಿಯದ ಒಲೆಯಿದ್ದರು ಉರಿಸಿ
ಸೇರಿಸಿದ್ದೆಲ್ಲವ ಬೇಯಿಸಿ
ಪಾಕ ಮಾಡುವವಳು ನೀನೇ..
ಎಲ್ಲಿದೆ ಹೇಳು
ನೀನಿಲ್ಲದ ಬದುಕಿನಲ್ಲಿ ಸಾರ..?
ರಸನೆಯ ರಸಾನುಭವಕ್ಕೂ
ಸರಸದ ರಸ ಘಳಿಗೆಗೂ
ನೀನೇ ಅಲ್ಲವೇ ಅಂದ ಚಂದದವಳು
ಮನಕ್ಕೆ ಹಿಡಿಸಿದವಳು..
ನೀನೇ ಮೂಲ ನೀನೇ ಆದಿ
ನಾನು ಎರಡನೇ ಸ್ತರದವನು
ಮಹಾಮರದ ತುದಿ..
- ಡಾ.ಲಕ್ಷ್ಮಣ ಕೌಂಟೆ (ಕವಿ, ಲೇಖಕರು, ಉಪನ್ಯಾಸಕರು) ಕಲಬುರಗಿ.
