ಅಗಸೆ ಬೀಜದ ಉಂಡೆ – ವೀಣಾ ಶಂಕರ್

ಅಗಸೆ ಬೀಜದ ಉಂಡೆ ಮಾಡೋದು ಇಷ್ಟು ಸುಲಭ ಅಂತ ನಿಮಗ್ಯಾರಿಗಾದ್ರೂ ಗೊತ್ತಿತ್ತಾ?…ವೀಣಾ ಶಂಕರ್ ಅವರು ತುಂಬಾ ಸಿಂಪಲ್ ಆಗಿ ಪಟ್ ಪಟ್ ಅಂತ ಮಾಡಿದ್ದಾರೆ, ನೀವು ಈ ರೆಸಿಪಿ ನೋಡಿ ಪಟ್ ಪಟ್ ಅಂತ ಮಾಡಿ ತಿಂದು ಬಿಡಿ…

ಬೇಕಾಗುವ ಸಾಮಗ್ರಿ :

ಆಗಸೆ ಬೀಜ – ಉಂಟೆಗೆ ಬೇಕಾದಷ್ಟು
ಬಾದಾಮಿ – ಸ್ವಲ್ಪ
ಬೆಲ್ಲ – ಸ್ವಲ್ಪ

ಮಾಡುವ ವಿಧಾನ :

ಮೊದಲಿಗೆ ಮನೆಯಲ್ಲಿನ ‌ಮಕ್ಕಳು  ‘ಅಮ್ಮ…. ಅವತ್ತು, ಆಗಸೆ ಬೀಜದ ಉಂಡೆ ಮಾಡಿದ್ಯಲ್ಲಾ ಅದನ್ನ ಮಾಡಿ ಕೊಡಮ್ಮ’… ಅಂತ ಕೇಳ್ಬೇಕು. ಆಗ ಅಮ್ಮಂದಿರು ಐದು ನಿಮಿಷದಲ್ಲಿ ಮ್ಯಾಗಿ ಮಾಡಿದಂತೆ ದೊಡ್ಡದಾಗಿ ಪೋಸ್ ಕೊಡ್ತಾ …ಇರು ಪುಟ್ಟಾ…ಐದೇ ನಿಮಿಷದಲ್ಲಿ ಮಾಡಿಕೊಡ್ತೀನಿ ಅಂತ ಬರನೇ ಅಡುಗೆ ಮನೆಗೆ ಹೋಗಿ ಸೆರಗನ್ನು ಸೊಂಟಕ್ಕೆ ಸಿಕ್ಕಿಸಿಕೊಂಡು ಅಡಿಗೆಯಲ್ಲಿ ಅಗಸೆ ಬೀಜದ ಉಂಡೆ ಮಾಡೋಕೆ ಶುರು ಮಾಡ್ಕೋಬೇಕು.

ಮೊದಲಿಗೆ ಅಗಸೆ ಬೀಜವನ್ನು ಬಾಂಡ್ಲೆಗೆ ಹಾಕಿ ಹುರಿಯುತಾ ಇರಬೇಕಾದರೆ  ಚಿನಕುರಳಿ ತರ ಪಟ ಪಟ…ಪಟ ಪಟ… ಅಂತ ಶಬ್ದ ಮಾಡುತ್ತೆ. ಅಂದ್ರೆ ನಾನು ಮಾತಾಡ್ತಿನಲ್ಲಾ ಅದಕ್ಕಿಂತ ಹೆಚ್ಚು . ಆಗ  ಅಲ್ಲಿಗೆ ಅರ್ಥ ಮಾಡ್ಕೋಬೇಕು ಹುರಿದಿದ್ದು ಸಾಕು ಅಂತ. ಅಗಸೆ ಭಾಷೆ ನೀವು ಕಲ್ತಿರಬೇಕು ಅಷ್ಟೇ.

ಹುರಿದ ಅಗಸೆ ಬೀಜವನ್ನು ತಣ್ಣಗೆ ಆಗಲು ಬಿಡಬೇಕು. ಇನ್ನೊಂದು ಕಡೆ ಬಾಣಲೆಗೆ ಸ್ವಲ್ಪ ಬಾದಾಮಿ ಹಾಕಿ ಹುರಿದುಕೊಳ್ಳಿ. ಬಾದಾಮಿ ತುಸು ಕೊಬ್ಬಲ್ವಾ, ಸ್ವಲ್ಪ ಮುಖ ಊದಿಸಿಕೊಳ್ಳುತ್ತೆ ಆಗ ನಾವು ಅರ್ಥ ಮಾಡ್ಕೋಬೇಕು ಬಾದಾಮಿ ಸರಿಯಾಗಿ ಹುರಿದಿದೆ ಅಂತ.

ಎಲ್ಲದರ ಕೋಪ ತಣ್ಣಗೆ ಆದ್ಮೇಲೆ ಎಲ್ಲವನ್ನು ಮಿಕ್ಸಿಯಲ್ಲಿ ಹಾಕಿ ನುಣ್ಣಗೆ ಪುಡಿ ಕೊಳ್ಳಬೇಕು. ಸಿಹಿ ಎಷ್ಟು ಬೇಕು ಅಂತ ನಿಮ್ಮ ನಾಲಿಗೆಗೆ ಕೇಳಿ ಅಷ್ಟು ಬೆಲ್ಲ ಹಾಕಿ,  ಮತ್ತೆ ಜರ್ ಅನ್ನಿಸಿದರೆ ಆಯ್ತು ನೋಡಿ. ಮಕ್ಕಳು ಆಸೆ ಪಟ್ಟ ಅಗಸೆ ಬೀಜದ ಉಂಡೆ, ನಮ್ಮಗಳಿಗೆ ಪಂಚಮಿ ಉಂಡೆ ರೆಡಿ. ಇಷ್ಟೇ ಸಿಂಪಲ್ ರೆಸಿಪಿ.


  • ವೀಣಾ ಶಂಕರ್

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW