ರಷ್ಯಾದ ಕಾದಂಬರಿಕಾರ ಫ್ಯೋಡರ್ ಡೊಸ್ಟೋಯವಸ್ಕಿ

ಇಮ್ತಿಯಾಜ್ ಖಾನ್ ಅವರು ರಷ್ಯಾ ದೇಶದ ಮಹಾ ಕಾದಂಬರಿಕಾರ ಫ್ಯೋಡರ್ ಡೊಸ್ಟೋಯವಸ್ಕಿ ಅವರ ಕುರಿತು ಬರೆದ ಲೇಖನವನ್ನು ತಪ್ಪದೆ ಮುಂದೆ ಓದಿ…

ರಷ್ಯಾ ದೇಶದ ಮಹಾ ಕಾದಂಬರಿಕಾರ ಫ್ಯೋಡರ್ ಡೊಸ್ಟೋಯವಸ್ಕಿಯವರು ನವೆಂಬರ್ 1821 ರಂದು ರಷ್ಯಾದ ಮೋಸ್ಕೊದಲ್ಲಿ ಜನಿಸಿದರು. ಅವರು ಕಾದಂಬರಿ, ಸಣ್ಣಕಥೆ ಮತ್ತು ಪತ್ರಿಕೋದ್ಯಮ ಕ್ಷೇತ್ರದಲ್ಲಿ ತಮ್ಮನ್ನು ಗುರುತಿಸಿಕೊಂಡವರು.

ಹಲವಾರು ಸಾಹಿತ್ಯ ವಿಮರ್ಶಕರು ಅವರನ್ನು ಪ್ರಪಂಚದ ಶ್ರೇಷ್ಠ ಕಾದಂಬರಿಕಾರರಲ್ಲಿ ಒಬ್ಬರೆಂದು ಪರಿಗಣಿಸುತ್ತಾರೆ. ಅವರ ಅನೇಕ ಕೃತಿಗಳನ್ನು ಹೆಚ್ಚು ಪ್ರಭಾವಶಾಲಿ ಮೇರುಕೃತಿಗಳೆಂದು ಪರಿಗಣಿಸಲಾಗಿದೆ. ಅವರು ಲಿಯೋ ಟಾಲಸ್ಟಾಯ್, ನೀಶೇ, ಕಾಫ್ಕಾ, ಕುಮು ಮುಂತಾದ ದಾರ್ಶನಿಕರ ಸಿದ್ಧಾಂತಗಳಿಂದ ಪ್ರಭಾವಿತರಾಗಿದ್ದರು. ಫ್ಯೋಡರ್ ರವರು 9ನೇ ಫೆಬ್ರವರಿ 1881ರಲ್ಲಿ ರಷ್ಯಾದ ಸೇಂಟ್ ಪೀಟರ್ ಬರ್ಗ್ ನಲ್ಲಿ ತಮ್ಮ 59ನೇ ವಯಸ್ಸಿನಲ್ಲಿ ತೀರಿಕೊಂಡರು.

ನಾನು ಆನ್ಲೈನಲ್ಲಿ ಓದುವಾಗ ಆಕಸ್ಮಿಕ ಕಣ್ಣಿಗೆ ಬಿದ್ದ ಅವರ ಕಾದಂಬರಿಯ ಕೆಲವು ಪುಟಗಳು ತುಂಬಾ ಖುಷಿ ಕೊಟ್ಟವು. ಖಂಡಿತವಾಗಿಯೂ ಓದಲು ಯೋಗ್ಯವಾಗಿವೆ ಎನಿಸಿತು. ನಾನು ಓದಿ, ಓದಿಗರಿಗೆ ಮುಟ್ಟಿಸುವ ಮಹದಾಸೆಯಿಂದ ಈ ಕೆಲವು ಸಾಲುಗಳನ್ನು ಕನ್ನಡಿಸಿ ಇಡುತ್ತಿದ್ದೇನೆ.

ರಷ್ಯಾದ ಕಾದಂಬರಿಕಾರ ಫ್ಯೋಡರ್ ಡೊಸ್ಟೋಯವಸ್ಕಿ ಹೇಳುತ್ತಾರೆ :

‘ನಿಮ್ಮ ಸಾವಿನ ನಂತರ ಜನರು ನಿಮ್ಮನ್ನು ಹೆಚ್ಚು ನೆನಪಿಸಿಕೊಳ್ಳುವುದಿಲ್ಲ. ಕೆಲವು ದಿನಗಳ ನಂತರ ನೀವು ಎಂದಿಗೂ ಹುಟ್ಟಿಲ್ಲ ಎಂಬಂತೆ ಮರೆತುಬಿಡುತ್ತಾರೆ. ನಿಮ್ಮ ಉಲ್ಲೇಖವು ಸಾಂದರ್ಭಿಕವಾಗಿಯೋ ಆಕಸ್ಮಿಕವಾಗಿಯೋ ಬರುತ್ತದೆ. ಆದರೆ ಹೊಸ ತಲೆಮಾರುಗಳ ಆಗಮನದೊಂದಿಗೆ, ನೀವು ಸಂಪೂರ್ಣವಾಗಿ ಅಳಿದುಹೋಗುತ್ತೀರಿ.

ಯಾವತ್ತೂ ನೀವು ಯಾರೆಂದು ಜನರು ನೆನಪಿಸಿಕೊಳ್ಳುವುದಿಲ್ಲ ಅಥವಾ ನೀವು ಯಾವಾಗಲೂ ಅನುಸರಿಸಿದ ತತ್ವಗಳನ್ನು ಅವರು ನೆನಪಿಸಿಕೊಳ್ಳುವುದಿಲ್ಲ. ನೀವು ಧೈರ್ಯಶಾಲಿ, ಸದ್ಗುಣಿ, ಭ್ರಷ್ಟ ಏನಾಗಿದ್ದರೂ ಸರಿಯೇ.

ನಿಮ್ಮ ಜೀವನವು ನಿಮಗೆ ಮಾತ್ರ ಸರಿಕಂಡಂತೆ ಬದುಕಿದರೂ ನೀವು ಬಳಲುತ್ತೀರಿ. ನಿಮಗೆ ಮತ್ತು ನಿಮ್ಮವರಿಗೆ ನಿಜವಾದ ಸಂತೋಷ ಮತ್ತು ತೃಪ್ತಿ ನೀಡುವಂತೆ ನೀವು ನಿಮ್ಮ ಬದುಕನ್ನು ಕಟ್ಟಿಕೊಳ್ಳಿ. ಏಕೆಂದರೆ ನಿಮ್ಮ ಬದುಕು ನಿಮ್ಮದಾಗಿದೆ ಮತ್ತು ನಿಮ್ಮನ್ನು ನಂಬಿದವರದ್ದೂ ಆಗಿದೆ.

ನಾನು ಹೇಳುವುದಿಷ್ಟೇ…

ಇಂದಿನಿಂದ ನೂರು ವರ್ಷಗಳ ನಂತರ, ಉದಾಹರಣೆಗೆ 2023 ರಲ್ಲಿ, ನಾವೆಲ್ಲರೂ ನಮ್ಮ ಪ್ರೀತಿಪಾತ್ರರು ಮತ್ತು ಸ್ನೇಹಿತರೊಂದಿಗೆ ಮಣ್ಣಾಗಿರುತ್ತೇವೆ. ಅಪರಿಚಿತರು ನಮ್ಮ ಮನೆಗಳಲ್ಲಿ ವಾಸಿಸುತ್ತಾರೆ ಮತ್ತು ಇತರರು ನಮ್ಮ ಆಸ್ತಿಗಳನ್ನು ನಿರ್ವಹಿಸುತ್ತಾರೆ. ಹಾಗಾದರೆ ಬದುಕಿನ ಸಾರ್ಥಕತೆ ಏನು?

ಬ್ರಹ್ಮಾಂಡದಲ್ಲಿ ನಮ್ಮ ಜೀವಿತಾವಧಿ ನೂರು ವರ್ಷವಾದರೂ ಸಾವಿನ ಸಂದರ್ಭದಲ್ಲಿ ಅದು ಕೇವಲ ಒಂದು ಕ್ಷಣವೆನಿಸುತ್ತದೆ. ಆ ಕ್ಷಣದಲ್ಲಿಯೇ ನಾವು ಬದುಕಿ ಸಾಯುತ್ತೇವೆ. ನಮ್ಮ ನಂತರ ಹಲವು ತಲೆಮಾರುಗಳು ಬರುತ್ತವೆ. ಅವರೂ ಕ್ಷಣಕಾಲ ಬದುಕಿ ಪ್ರಪಂಚವನ್ನು ತೊರೆಯುತ್ತಾರೆ. ಅವರ ಅರ್ಧದಷ್ಟು ಕನಸುಗಳು ನನಸಾಗುವ ಮೊದಲು ಅವರು ಮಣ್ಣಾಗಿರುತ್ತಾರೆ. ಆದ್ದರಿಂದ, ನಾವು ನಮ್ಮ ನಿಜವಾದ ಸ್ಥಿತಿ ಮತ್ತು ವಿಶ್ವದಲ್ಲಿ ನಮ್ಮ ಅಸ್ತಿತ್ವದ ನಿಜವಾದ ಅವಧಿಯನ್ನು ಅರ್ಥಮಾಡಿಕೊಳ್ಳಬೇಕು, ಅದು ನಾವು ಯೋಚಿಸುವುದಕ್ಕಿಂತ ಚಿಕ್ಕದಾಗಿದೆ!

ಸಾವಿನ ಕತ್ತಲೆ ಮತ್ತು ಮೌನದಲ್ಲಿ ಜಗತ್ತು ಎಷ್ಟು ಅರ್ಥಹೀನವಾಗಿತ್ತು ಮತ್ತು ನಮ್ಮ ಕನಸುಗಳು ಎಷ್ಟು ಮೂರ್ಖವಾಗಿದ್ದವು ಎಂಬುದನ್ನು ನಾವು ಅರಿತುಕೊಳ್ಳುತ್ತೇವೆ; ಪಶ್ಚತ್ತಾಪ ಪಡುತ್ತೇವೆ. ನಾವು ನಮ್ಮ ಇಡೀ ಜೀವನವನ್ನು ಅರ್ಥಪೂರ್ಣ ಕೆಲಸ ಮತ್ತು ಒಳ್ಳೆಯ ಕಾರ್ಯಗಳಲ್ಲಿ ಕಳೆದಿದ್ದೇವೆ ಎಂಬ ನೆಮ್ಮದಿಯೊಂದಿದ್ದರೆ ನಿರಾತಂಕದಿಂದ ಕಣ್ಣು ಮುಚ್ಚಬಹುದು.
ನೆನಪಿರಲಿ ನಮ್ಮನ್ನು ನೋಡುವ ಶಕ್ತಿಯೊಂದಿದೆ.

Source – The Brothers Karamazov, a novel by Foyoder Dostoyevsky.


  • ಇಮ್ತಿಯಾಜ್ ಖಾನ್

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading