ಪದಗಳ ಸುಂದರ ಜೋಡಣೆಯಲ್ಲ, ಭಾವನೆಗಳ ಬೆಸುಗೆ…ಕವಿ ನಾಗರಾಜ್ ಜಿ.ಎನ್.ಬಾಡ ಅವರ ಲೇಖನಿಯಲ್ಲಿ ಮೂಡಿದ ಕವಿತೆಯನ್ನು ತಪ್ಪದೆ ಮುಂದೆ ಓದಿ …
ಅರಳಿದಂತೆ ವನಸುಮ
ತಣ್ಣನೆ ಹುಟ್ಟಬೇಕು ಕವಿತೆ
ಸುತ್ತಲೂ ಘಮ ಘಮಿಸಬೇಕು
ಮನದ ಹಾಳೆಯಲ್ಲಿ ಕುಳಿತೆ
ಮನಕೆ ಮುದವ ನೀಡಬೇಕು
ವಾಸ್ತವಕ್ಕೆ ಕನ್ನಡಿ ಹಿಡಿಯಬೇಕು
ಜನರ ಎಚ್ಚರಿಸಿ ತೋರಿಸಬೇಕು
ತಪ್ಪುಗಳ ತಿದ್ದಿ ಸರಿಪಡಿಸಬೇಕು
ಕತ್ತಲನ್ನು ದೂರ ಸರಿಸಬೇಕು
ಸುತ್ತ ಮುತ್ತಲೂ ಬೆಳಗಬೇಕು
ಕೊಳಕುಗಳ ತೊಳೆಯಬೇಕು
ಜನರಲ್ಲಿ ಜಾಗ್ರತಿ ಮೂಡಿಸಬೇಕು
ಪದಗಳ ಸುಂದರ ಜೋಡಣೆಯಲ್ಲ
ಭಾವನೆಗಳ ಬೆಸುಗೆಯಾಗಬೇಕು
ಖುಷಿ ನಲಿವನಷ್ಟೇ ನೀಡುವುದಲ್ಲ
ಸಮಾಜದ ಹುಳುಕುಗಳ ತಿದ್ದಬೇಕು
ಸಮಾಜಕ್ಕಾಗಿ ದನಿಯ ಎತ್ತಬೇಕು
ಮೌನವಾಗಿ ಸಹಿಸುವುದ ಬಿಡಬೇಕು
ಸಾಮಾಜಿಕ ಪಿಡುಗುಗಳ ಬಿಚ್ಚಿಡಬೇಕು
ಬದುಕಿನ ಬವಣೆಗಳಿಗೆ ಮುನ್ನುಡಿಯಾಗಬೇಕು
- ನಾಗರಾಜ್ ಜಿ.ಎನ್. ಬಾಡ, ಕುಮಟ, ಉತ್ತರ ಕನ್ನಡ
