‘ಉಡುಗೊರೆ ನೀಡಲೇನು..?’ ಕವನ- ಚಿದು ಯುವ ಸಂಚಲನ 



ನಾನೇನು ನೀಡಬಲ್ಲೆ ಉಡುಗೊರೆ ನೀಡಲೇನು…ಚಿದು ಯುವ ಸಂಚಲನ ಅವರ ಸುಂದರ ಕವನ ಓದುಗರಿಗಾಗಿ, ಮುಂದೆ ಓದಿ…

ಉಡುಗೊರೆ ನೀಡಲೇನು..?
ಜಾಲಾರಿ ಮರದಿಂದ ಜಾರಿದ್ದನ್ನು.

#ಉಡುಗೊರೆ ನೀಡಲೇನು..?
ಮಾಕಳಿ ಬೆಟ್ಟಕ್ಕೆ ಸುಗಂಧವನ್ನು ಪಸರಿಸಿದನ್ನು.

ಉಡುಗೊರೆ ನೀಡಲೇನು..?
ಬೆಟ್ಟಕ್ಕೆ ಅಂದವನ್ನೇ ಹೆಚ್ಚಿಸಿದ್ದನ್ನು.

ಉಡುಗೊರೆ ನೀಡಲೇನು..?
ಮರದಲ್ಲಿ ತೇಲುವ ಗುಂಪು ಗುಂಪಾದ ಈ ಅಂದದ ಸೆಲೆಯನ್ನು.

ಉಡುಗೊರೆ ನೀಡಲೇನು..?
ಅಳಿವಿನಂಚಿನಲ್ಲಿರುವ ಈ #ಬೆಟ್ಟದ ರೂಪಸಿಯನ್ನು.

ಉಡುಗೊರೆ ನೀಡಲೇನು..?
ನನ್ನ ಕಣ್ಣುಗಳಿಗೆ ಸೊಬಗನ್ನು ತುಂಬಿದ ಈ ಆಕರ್ಷಕವನ್ನು.

ಇದಕ್ಕಿಂತ ಹೆಚ್ಚಾಗಿ ನಾನೇನು ನೀಡಬಲ್ಲೆ ಈ ಧರಾ ಧಾರೆ ಪ್ರೇಮಿಯಾಗಿ…
ಉಡುಗೊರೆ ನೀಡಲೇನು..?


  • ಚಿದು ಯುವ ಸಂಚಲನ  (ಪರಿಸರವಾದಿ, ಲೇಖಕರು) ದೊಡ್ಡಬಳ್ಳಾಪುರ.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading