‘ಗೋಳು’ ಕವನ – ನಾಗರಾಜ ಜಿ. ಎನ್. ಬಾಡ

ದಿನವೂ ಕಿರಿಕಿರಿ ಪಿರಿಪಿರಿಯ ಬಾಳು, ಕಿತ್ತೊಗೆಯಬೇಕಿದೆ ನಮ್ಮೊಳಗಿನ ಈ ಗೀಳು…ಇದು ಯಾರ ಗೋಳು ಕವಿ ನಾಗರಾಜ ಜಿ. ಎನ್. ಬಾಡ ಅವರ ಲೇಖನಿಯಲ್ಲಿ ಮೂಡಿದ ಕವಿತೆಯನ್ನು ತಪ್ಪದೆ ಮುಂದೆ ಓದಿ…

ಹೇಳಿದರೆ ಅವರ ಮನಸ್ಸಿಗೆ ಬೇಜಾರಾಗುತ್ತೆ
ಹೇಳದಿದ್ರೆ ಇವರ ಮನಸ್ಸಿಗೆ ನೋವಾಗುತ್ತೆ
ಹೀಗೆ ನಮ್ಮೊಳಗೇ ಏನೇನೋ ಯೋಚಿಸ್ತಾ
ಹೇಳಬೇಕಾದು ಹೇಳದೆ ಸುಮ್ಮನಾಗ್ತೇವೆ
ಕೇಳಲಾಗದೇ ಮನಸ್ಸಿನೊಳಗೇ ನೊಂದುಕೊಳ್ತೇವೆ

ಅವರಿವರನ್ನ ಖುಷಿಪಡಿಸೋಕೆ ಹೋಗ್ತೇವೆ
ನಮಗೆ ನಾವೇ ಕಷ್ಟಗಳನ್ನ ತಂದುಕೊಳ್ತೇವೆ
ಮನಸ್ಸಿನೊಳಗೇ ನೋವನ್ನ ಬಚ್ಚಿಟ್ಟುಕೊಳ್ತೇವೆ
ಹೊರಗಡೆ ಏನೂ ನಡೆದಿಲ್ಲದಂತೆ ಇರ್ತೇವೆ

ಯಾರೂ ನಮ್ಮನ್ನು ಅರ್ಥ ಮಾಡಿಕೊಳ್ಳಲ್ಲ
ಅವರ ಕೆಲಸವ ಮಾಡಿಸಿಕೊಳ್ಳೋದ ಬಿಡಲ್ಲ
ನಮ್ಮ ಕೆಲಸಕ್ಕೆ ಯಾರೂ ಹತ್ತಿರ ಬರೋದಿಲ್ಲ
ನಮ್ಮ ಪರದಾಟ ಎಂದೂ ಮುಗಿಯೋದಿಲ್ಲ

ನಮ್ಮ ಹಣೆಬರಹವೇ ಇಷ್ಟು ಅಂದುಕೊಳ್ತೇವೆ
ಒಳಗೊಳಗೇ ನಲುಗಿ ನೊಂದುಹೊಗ್ತೇವೆ
ಬದುಕಿನಲ್ಲಿ ಸದಾ ಭವಣೆ ಪಡ್ತಾ ಇರುತ್ತೇವೆ
ಬೇಡದ ಉಸಾಬರಿಗೆ ಬಲಿಪಶು ಆಗುತ್ತೇವೆ

ದಿನವೂ ಕಿರಿಕಿರಿ ಪಿರಿಪಿರಿಯ ಬಾಳು
ಮನಸ್ಸಿನ ನೆಮ್ಮದಿಯು ಜಾಳು ಜಾಳು
ಕಿತ್ತೊಗೆಯಬೇಕಿದೆ ನಮ್ಮೊಳಗಿನ ಈ ಗೀಳು
ಇದು ನಮ್ಮ ದಿನನಿತ್ಯದ ಬದುಕಿನ ಗೋಳು


  • ನಾಗರಾಜ ಜಿ. ಎನ್. ಬಾಡ, ಕುಮಟ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading