‘ಮಾತು ಮಾತಲಿ ತುಂಬಿದ ನಗುವಿಗೆ… ನಲಿವು ಒಂದು ಗೆಲುವು ಒಳಿತಿನ ಓದೂ ಜೊತೆ ಬರುವ ಮಾತಿನಂತೆ’…ಕವಿ ನಾಗರಾಜ ಬಿ.ನಾಯ್ಕ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…
ಮುಖದಿ ಮೂಡಿದ
ಭಾವಗಳೆಲ್ಲಾ ಸಾಲಾದರೆ
ಹಕ್ಕಿಯ ಹಾಡಂತೆ
ಗೂಡು ಸೇರಿದ ಭಾವ
ಜೀವವಾಗಿ ಉಳಿದಂತೆ
ಆಡದೇ ಮೌನವಾದ
ಗೊತ್ತಾಗದ ಸಾಲಿಗೂ
ಪರಿಚಿತವಾಗಿ ಉಳಿವಾಸೆ
ಒಳಿತಿನ ಪರಿಚಯಕೆ
ಗೆಲುವಾಗಿ ಬರುವಂತೆ
ಮಾತು ಮಾತಲಿ
ತುಂಬಿದ ನಗುವಿಗೆ
ನಲಿವು ಒಂದು ಗೆಲುವು
ಒಳಿತಿನ ಓದೂ
ಜೊತೆ ಬರುವ ಮಾತಿನಂತೆ
ಅರಿತರೂ ಬೆರೆತರೂ
ಮಾತು ಮಾತಲಿ
ನಗುವಿನ ಹೂ
ಮತ್ತೆ ಅರಳುವುದಂತೆ
ಒಲವು ಹಚ್ಚಿದ ಗರಿಗಳಂತೆ
ಮಣ್ಣ ಕಣಕಣವೂ
ಆರಾಧನೆಯ ಭಾವ
ಚಿತ್ರ ಸೋಜಿಗ ಸಂತಸ
ನೆಲಕ್ಕಂಟಿದ ಬದುಕು
ಮತ್ತೆ ಗೆಲುವಂತೆ……
- ನಾಗರಾಜ ಬಿ.ನಾಯ್ಕ – ಹುಬ್ಬಣಗೇರಿ, ಕುಮಟಾ
