ಸ್ತ್ರೀ ಒಂದು ಶಕ್ತಿ. ಒಬ್ಬ ಸದ್ಗೃಹಿಣಿ ಒಂದು ಮನೆಯನ್ನು ನಂದನವನವನ್ನಾಗಿಸಬಲ್ಲಳು. ತಿಳುವಳಿಕೆಯುಳ್ಳ ಹೆಣ್ಣು ತನ್ನ ಮನದ ಸಿಹಿ ಕಹಿಯ ತುಡಿತಗಳನ್ನು ನುಂಗಿ ಕಷ್ಟಗಳನ್ನು ಮೆಟ್ಟಿ ದಿಟ್ಟವಾಗಿ ನಿಲ್ಲಬಲ್ಲಳು. ಅವಳ ಅಂತಃಶಕ್ತಿಯು ಅಷ್ಟು ಗಟ್ಟಿಯಾದುದು. ಈ ನಿಟ್ಟಿನಲ್ಲಿ ಮಾಲತಿ ರಾಮಕೃಷ್ಣ ಭಟ್ ಅವರು ಪರಿಚಯಿಸುವ ಕಾದಂಬರಿ ಗೌರಿ. ತಪ್ಪದೆ ಮುಂದೆ ಓದಿ…
ಕೃತಿ : ಗೌರಿ
ಲೇಖಕರು: ಅ.ನ.ಕೃ
ಪ್ರಕಾಶನ : ಹೇಮಂತ ಸಾಹಿತ್ಯ ಪ್ರಕಾಶನ ಬೆಂಗಳೂರು.
ಮುದ್ರಣದ ವರ್ಷ: ೧೯೫೮- ೨೦೧೯.(೩ ಮುದ್ರಣ)
ಪುಟಗಳು: ೧೯೬
ಬೆಲೆ: ರೂ. ೧೪೦
ಜನಪ್ರಿಯ ಕಾದಂಬರಿಕಾರರಾದ ಅ.ನ.ಕೃ ಅವರು ರಚಿಸಿದ ಒಟ್ಟೂ ಕಾದಂಬರಿಗಳ ಸಂಖ್ಯೆ ೧೧೧. ಅರವತ್ತರ ದಶಕದ ಅಂದಿನ ಕಾಲದ ಜನಜೀವನದ ವೈವಿಧ್ಯಮಯ ವ್ಯಕ್ತಿಗಳ ಪಾತ್ರಗಳಲ್ಲಿ ಅವರು ವಿಚಾರಧಾರೆಗಳನ್ನು ತುಂಬಿ ಬರೆದಿದ್ದಾರೆ. ಇಂದಿಗೂ ಅವು ಪ್ರಸ್ತುತವೆನ್ನಬಹುದು. ಹೆಣ್ಣಿನ ಸ್ಥಾನ ಮಾನ ಅಂದಿಗಿಂತ ಇಂದು ಕೊಂಚ ಸುಧಾರಣೆ ಕಂಡಿದೆ ಎನ್ನ ಬಹುದಾದರೂ ಗ್ರಾಮೀಣ ಭಾಗದ ಕೆಲವೆಡೆ ಇನ್ನೂ ಹಾಗೇ ಇದೆ.
ಈ ಕಥೆಯ ನಾಯಕಿ ಗೌರಿ ಕುಗ್ರಾಮ ಮಾದಾಪುರದ ಕುಟುಂಬವೊಂದರಲ್ಲಿ ಹುಟ್ಟಿ ಬೆಳೆದವಳು. ಬಹಳ ವರ್ಷ ಸಂತಾನ ಭಾಗ್ಯವಿಲ್ಲದ ಅವಳ ತಂದೆ ಸುಬ್ಬಾ ಶಾಸ್ತ್ರಿಗಳು ಹಾಗೂ ತಾಯಿ ನಂಜಮ್ಮ ಹರಕೆ ಹೊತ್ತು ಪಡೆದ ಮಗಳ ವಳು. ಅವಳು ಶಾಲಾ ಶಿಕ್ಷಣದ ಜೊತೆ ತಂದೆಯಿಂದ ಕಲಿತ ಸ್ತೋತ್ರ ಮಂತ್ರ ಇತ್ಯಾದಿಗಳಿಂದ ಒಳ್ಳೆಯ ಸಂಸ್ಕಾರ ಹೊಂದಿದ್ದಳು.

ನಂಜಮ್ಮನಿಗೆ ಮಗಳನ್ನು ತನ್ನ ತಮ್ಮ ‘ಲಾ’ ಓದುತ್ತಿರುವ ಚಿದಾನಂದನಿಗೆ ಕೊಡುವ ಆಸೆ ಇದ್ದರೂ, ವಯಸ್ಸು ಜಾಸ್ತಿ ಅಲ್ಲದೇ ತನ್ನ ತಾಯಿಯೇ ಬೀಗಿತ್ತಿಯಾಗುವುದು ಬೇಡ ಎಂದು ಆ ವಿಚಾರವನ್ನು ತಳ್ಳಿ ಹಾಕಿದ್ದರು. ನಂಜಮ್ಮನ ತಾಯಿ ಕಾಮಾಕ್ಷಮ್ಮನಿಗೂ ತನ್ನ ಮಗನಿಗೆ ವರದಕ್ಷಿಣೆ ತೆಗೆದು ಕೊಂಡು ಶ್ರೀಮಂತ ಕನ್ಯೆಯನ್ನು ಸೊಸೆಯಾಗಿ ಮಾಡಿ ಕೊಳ್ಳುವಾಸೆಯಿತ್ತು.
ಹೆಣ್ಣು ಮಕ್ಕಳಿಗೆ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವಿರದ ಆ ಕಾಲದಲ್ಲಿ ಗೌರಿ ಹೆತ್ತವರ ಆಣತಿಗೆ ತಲೆ ಬಾಗಿ ಗಂಗಾಧರ ಎಂಬಾತನನ್ನು ವಿವಾಹವಾಗುತ್ತಾಳೆ.
ಆದರೆ ಅತ್ತೆ ಮನೆಯಲ್ಲಿ ಅವಳಿಗೆ ಎಲ್ಲರೂ ಸಾಕಷ್ಟು ಕಷ್ಟ ಕೊಡುತ್ತಾರೆ. ಹೂವಿನಂತ ಹುಡುಗಿ ನಲುಗಿ ಹೋಗುವ ಪರಿಸ್ಥಿತಿಯಲ್ಲೂ ಅವಳು ಸಹನೆ ಕಳೆದು ಕೊಳ್ಳದೇ ಎಲ್ಲವನ್ನೂ ಸಹಿಸಿ ಕೊಳ್ಳುತ್ತಾಳೆ.
ಅತ್ತ ಚಿದಾನಂದನಿಗೆ ಸಿಕ್ಕ ಹೆಂಡತಿಯೂ ಸರಿ ಇರದೇ ಅವನ ಸಂಸಾರದಲ್ಲೂ ಸುಖವಿರುವುದಿಲ್ಲ. ಒಟ್ಟಿನಲ್ಲಿ ಚಿದಾನಂದ ಮತ್ತು ಗೌರಿ ಇಬ್ಬರಿಗೂ ಅನ್ಯಾಯವಾಯಿತು.
ಚಿದಾನಂದ ಮತ್ತು ಗೌರಿಗೆ ಸಂಬಂಧ ಕಲ್ಪಿಸಿದ ಅಚ್ಚಂ ಭಟ್ಟ ಎಂಬ ವ್ಯಕ್ತಿಯ ದೂಷಣೆಯಿಂದ ಅವಳ ಅತ್ತೆ ಮಾವ ಗೌರಿಯ ನಡತೆಯ ಬಗ್ಗೆ ಸಂಶಯ ಪಡುತ್ತಾರೆ. ಗರ್ಭಿಣಿಯಾದ ಹೆಂಡತಿಯನ್ನು ತವರಿಗೆ ಅಟ್ಟಿದರೂ ಪುಕ್ಕಲ ಸ್ವಭಾವದ ಅವಳ ಗಂಡ ನೆರವಿಗೆ ಬರುವುದಿಲ್ಲ.

ಮುಂದೆ ಅವಳು ಈ ವಿಪತ್ತಿನಿಂದ ಪಾರಾಗಿದ್ದು ಹೇಗೆ?. ಊರಿನಲ್ಲಿ ದೇವಸ್ಥಾನದ ಉದ್ಭವ ಮೂರ್ತಿಯ ಸ್ಥಾಪನೆ ಮತ್ತು ರಾಜಕೀಯ ಕುರಿತಾದ ಇಲ್ಲಿ ಬರುವ ಅನೇಕ ಪಾತ್ರಗಳನ್ನು ಓದಿಯೇ ಅರಿಯ ಬೇಕು.
ತನ್ನೆಲ್ಲಾ ನೋವುಗಳನ್ನು ನುಂಗಿ ಮೇಲೆ ನಗುತ್ತಾ ಬಾಳುವ ಅದೆಷ್ಟೋ ಹೆಣ್ಣು ಮಕ್ಕಳು ನಮ್ಮಲ್ಲಿದ್ದಾರೆ. ಅವರೆಲ್ಲರಿಗೂ ಈ ಮೂಲಕ ನನ್ನದೊಂದು ನಮನ.
ಮಾಲತಿ ರಾಮಕೃಷ್ಣ ಭಟ್ ಅವರು ಸಾಕಷ್ಟು ಪುಸ್ತಕಗಳನ್ನು ಓದಿ ಓದುಗರಿಗೆ ಪರಿಚಯವನ್ನು ಮಾಡಿಕೊಟ್ಟಿದ್ದಾರೆ. ಅವರು ಮಾಡಿದ ಪುಸ್ತಕಗಳ ಪರಿಚಯ :
- “ಹಸುರು ಹೊನ್ನು” ಕೃತಿ ಪರಿಚಯ
- ‘ಪ್ರೀತಿ ಮಮತೆಗಳ ನಡುವೆ’ ಕೃತಿ ಪರಿಚಯ
- ‘ಮೀನಾಕ್ಷಿಯ ಸೌಗಂಧ’ ಕೃತಿ ಪರಿಚಯ
- ‘ಬೇಲಿಯ ಹೂಗಳು’ ಪುಸ್ತಕ ಅಪರಿಚಯ
- ‘ಸಿಂಧೂರ ರೇಖೆಯ ಮಿಂಚು’ ಕೃತಿ ಪರಿಚಯ
- ‘ಇನ್ನೊಂದು ಸಂಪುಟ’ ಕೃತಿ ಪರಿಚಯ
- ‘ಬರೀ ಬೆಳಗಲ್ಲೊ ಅಣ್ಣಾ’ ಕೃತಿ
- ‘ಪಾಂಚಾಲಿಯಾಗಲಾರೆ’ ಕೃತಿ ಪರಿಚಯ
- ‘ಕನ್ನಡಿಗರ ಕರ್ಮ ಕಥೆ’ ಕೃತಿ ಪರಿಚಯ
- ‘ಅಗಮ್ಯ’ ಕೃತಿ ಪರಿಚಯ
- ‘ಯಾವ ನಾಳೆಯೂ ನಮ್ಮದಲ್ಲ’ ಕೃತಿ ಪರಿಚಯ
- ‘ದೀಪದ ಮಲ್ಲಿಯರು’ ಕೃತಿ ಪರಿಚಯ
- ‘ಕಾಡು ತಿಳಿಸಿದ ಸತ್ಯಗಳು’ ಕೃತಿ ಪರಿಚಯ
- ‘ಕೃಷಿ ಬದುಕಿನ ಹೆಜ್ಜೆ ಸಾಲು’ ಕೃತಿ ಪರಿಚಯ
- ‘ಒಲ್ಲೆಯೆನದಿರು ನಮ್ಮದಲ್ಲದ ನಾಳೆಗಳ’ ಕೃತಿ ಪರಿಚಯ
- ‘ಗಾದೆ ಮಾತಿನ ಗುಟ್ಟು’ ಕೃತಿ ಪರಿಚಯ
- ‘ಕಿಚ್ಚಿಲ್ಲದ ಬೇಗೆ’ ಕೃತಿ ಪರಿಚಯ
- ‘ಅಗಸ್ತ್ಯ’ ಕೃತಿ ಪರಿಚಯ
- ‘ಸಾಂದರ್ಭಿಕ’ ಕೃತಿ ಪರಿಚಯ
- ರೇಖಾ ಕಾಖಂಡಕಿ ಅವರು ಕೃತಿ ಪರಿಚಯ
- ಮಾಲತಿ ರಾಮಕೃಷ್ಣ ಭಟ್
