ಗೃಹಿಣಿಯರೆಂದು ಹೀಗಳೆಯದಿರಿ

ಹೆಣ್ಣಿಲ್ಲದ ಮನೆ ದೇವರಿಲ್ಲದ ಗುಡಿಯಂತೆ ಹೆಣ್ಣು ಬೆಳಿಗ್ಗೆಯಿಂದ ರಾತ್ರಿಯವರೆಗೂ ವರ್ಷದ 365 ದಿನಗಳೂ ದುಡಿದರೂ ಅವಳಿಗೆ ಅವಳ ಕೆಲಸಕ್ಕೆ ಮಾತ್ರ ಬೆಲೆಯೇ ಇಲ್ಲ. ಲೇಖಕಿ ಗೀತಾಂಜಲಿ ಎನ್. ಎಮ್ ಅವರ ಲೇಖನಿಯಲ್ಲಿ ಹೆಣ್ಣಿನ ಕುರಿತು ಬರೆದ ಈ ಲೇಖನವನ್ನು ತಪ್ಪದೆ ಮುಂದೆ ಓದಿ…

ನಮ್ಮ ಭಾರತದ ಸಂಸ್ಕೃತಿಯಲಿ “ಹೆಣ್ಣು ಮನೆಯ ಕಣ್ಣು” ಎಂಬ ಮಾತಿದೆ ಅಂದರೆ ಒಬ್ಬ ಮನುಷ್ಯನ ಜೀವಕ್ಕೆ ಕಣ್ಣು ಎಷ್ಟು ಪ್ರಾಮುಖ್ಯವೂ ಅಷ್ಟು ಪ್ರಾಮುಖ್ಯ ಹೆಣ್ಣು ಒಂದು ಮನೆಗೆ ಹಾಗೂ ಒಂದು ಸಂಸಾರಕ್ಕೆ, ಅಂದಮೇಲೆ ಅವಳ ಅವಳ ತ್ಯಾಗ ಪರಿಶ್ರಮ ಮತ್ತು ಅವಳು ಮಾಡುವ ಕೆಲಸಕ್ಕೆ ಬೆಲೆ ಕಟ್ಟಲಾದೀತೇ? ಖಂಡಿತವಾಗಿಯೂ ಇಲ್ಲ. ನಿಜವಾಗಿಯೂ ಹೆಣ್ಣಿಲ್ಲದ ಮನೆ ದೇವರಿಲ್ಲದ ಗುಡಿಯಂತೆ ಆದರೆ ವಿಪರ್ಯಾಸವೆಂದರೆ ಹೆಣ್ಣು ಬೆಳಿಗ್ಗೆಯಿಂದ ರಾತ್ರಿಯವರೆಗೂ ವರ್ಷದ 365 ದಿನಗಳೂ ದುಡಿದರೂ ಅವಳಿಗೆ ಅವಳ ಕೆಲಸಕ್ಕೆ ಮಾತ್ರ ಬೆಲೆಯೇ ಇಲ್ಲ. ಅವಳ ಆ ಅತ್ಯಮೂಲ್ಯ ಕೆಲಸದ ಬಗ್ಗೆ ಎಷ್ಟರ ಮಟ್ಟಿಗೆ ತಾತ್ಸಾರವೆಂದರೆ ಅವಳಿಗೇನು ಮನೆ ಕೆಲಸ ಬಿಟ್ಟರೆ ಮತ್ತೇನಿದೆ. ಹೊರಗೆಹೋಗಿ ದುಡಿಯಬೇಕಾ ತಂದು ಹಾಕಿದ್ದನ್ನು ಮಾಡೋದಿಕ್ಕೆ ಕಷ್ಟವಾ ಎಂದಾಗ ಆಗುವ ನೋವು ಸಂಕಟ ಆ ಜೀವಕ್ಕಷ್ಟೇ ಗೊತ್ತಿರುತ್ತದೆ.

  • ದೇಹವೊಂದು ಪಾತ್ರಗಳು ಹಲವು ಎಂಬಂತೆ, ಬೆಳಿಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೂ ಅಡುಗೆ ತಿಂಡಿ ಊಟ ಮಕ್ಕಳು ವಯಸ್ಸಾದ ಮನೆಯ ಹಿರಿಯರು ಹಾಗೂ ಸ್ವಚ್ಚತೆಯ ಜೊತೆಗೆ ಮನೆಗೆ ಬಂದು ಹೋಗುವವರ ಉಪಚಾರ, ಮಕ್ಕಳ ಓದು ಬರಹ, ಹೀಗೆ ಒಂದೇ ಎರಡೇ ದಿನವಿಡೀ ದುಡಿದು ಎಷ್ಟೇ ನೋವಾದರು ತೋರಿಸಿಕೊಳ್ಳದೆ ನಗು ಮುಖವಾಡ ಹಾಕಿಕೊಂಡು ತಾಳ್ಮೆ ಸಮಾಧಾನದಿಂದ ಪ್ರತಿ ಪರಿಸ್ಥಿತಿಯನ್ನು ನಿಭಾಯಿಸುವುದು ಹೊರಗೆ ಎಂಟು ಗಂಟೆಗಳ ಕಾಲ ಕೆಲಸ ಮಾಡಿ ಮುಗಿಸಿದಷ್ಟು ಸುಲಭ ಸಾದ್ಯವಲ್ಲ. ಒಬ್ಬ ಗೃಹಿಣಿ ಮಾಡುವ ಮನೆಗೆಲಸ ಎಷ್ಟೇ ಸಾರ್ಥಕತೆ ಪಡೆದಿದ್ದರೂ ಎಷ್ಟೇ ಹೆಚ್ಚು ಅರ್ಥಪೂರ್ಣ ಕೊಡುಗೆಯನ್ನು ಕುಟುಂಬಕ್ಕೆ ನೀಡುತ್ತಿದ್ದರೂ ಅದರಲ್ಲಿ ಏನೋ ಕೀಳರಿಮೆ ಅಥವಾ ಕೊರತೆ ಕಂಡ ಹಾಗೆ ನಮ್ಮ ಸಮಾಜ ಗೃಹಿಣಿಯರನ್ನು ನಡೆಸಿಕೊಳ್ಳುತ್ತದೆ.ಒಬ್ಬ ಗೃಹಿಣಿಯ ಶ್ರಮ ಸೇವೆ ತ್ಯಾಗಗಳಿಗೆ ಬೆಲೆ ಕಟ್ಟಲಾಗದು, ಗಂಡು ಹೊರಗೆ ದುಡಿದರೆ ಹೆಣ್ಣು ಮನೆಯ ಒಳಗೆ ದುಡಿಯುತ್ತಾಳೆ ಇದು ಬಹು ಹಿಂದಿನಿಂದಲೂ ನೆಡೆದು ಬಂದಿರುವ ಸಂಸಾರದ ರೀತಿ ನೀತಿ ಹಾಗಾಗಿ ಅದಕ್ಕೆ ಬೆಲೆ ಕಟ್ಟಬಾರದು ಎಂದು ಹೇಳುವ ಒಂದು ವರ್ಗದ ಜನರಿಗೆ ಹೇಳುವುದೇನೆಂದರೆ, ಮನೆಗಾಗಿ ದುಡಿಯುವ ಅವಳ ಅವಶ್ಯಕತೆಗಳನ್ನು ಪೂರೈಸಲು ಹತ್ತು ಹಲವು ಪ್ರಶ್ನೆಗಳೇಕೆ? ಮನೆಯ ಎಲ್ಲರ ಅವಶ್ಯಕತೆಗಳು ಮುಗಿದ ಮೇಲೆ ಅವಳ ಸರದಿ ಕೊನೆಯಲ್ಲಿ ಏಕೆ ಎಲ್ಲದ್ದಕ್ಕೂ ಹೊಂದಿ ಕೊಂಡ ಅವಳಿಗೇಕೆ ಅಲ್ಪ ಸ್ವಲ್ಪ? ಗಂಡು ತಾನು ದುಡಿದಿದ್ದನ್ನು ಸಂಜೆ ಹೆಂಡದ ಅಂಗಡಿಗೆ ಸೇರಿ ತನ್ನ ಎಲ್ಲಾ ಅವಶ್ಯಕತೆ ಗಳಿಗೆ ಲೆಕ್ಕಹಾಕದೆ ಖರ್ಚು ಮಾಡುವ ಅವನು ಮನೆಯ ಹೆಣ್ಣು ತನ್ನ ಅಗತ್ಯದ ಅವಶ್ಯಕತೆಗೆ ಕೇಳಿದಾಗ ಎಲ್ಲಿಲದ ಲೆಕ್ಕಾಚಾರ ಶುರುವಾಗುದೇಕೆ, ಗಂಡು ಹೆಣ್ಣು ಇಬ್ಬರೂ ದುಡಿತ್ತಿಯುವುದರಿಂದಲೆ ಸಂಸಾರದ ಬಂಡಿ ಸಮರ್ಥವಾಗಿ ನಡೆಯಲು ಸಾಧ್ಯ, ಹಾಗಿದ್ದರೂ ಗಂಡು ದುಡಿಯುವುದಕ್ಕೆ ಮಾತ್ರ ಲೆಕ್ಕ ಮತ್ತು ಬೆಲೆ, ಆದರೆ ಅವಳ ಯಾವ ಕೆಲಸಕ್ಕೂ ಬೆಲೆಯಿಲ್ಲ. ಅವಳ ತ್ಯಾಗಕ್ಕೂ ಬೆಲೆಯಿಲ್ಲ ಇದೆಂಥಾ ಹೀನ ಸ್ಥಿತಿಯಲ್ಲವೇ?.
  •  ತಾನು ದಿನವಿಡಿ ದುಡಿದರರೂ ಆರ್ಥಿಕ ವಾಗಿ ಸ್ವಾವಲಂಬನೆಯಾಗುವುದು ಯಾವಾಗ ? ದಿನವಿಡೀ ಮನೆಗೆಲಸ ಮಾಡುವ ಅವಳನ್ನು ಉದ್ಯೋಗರಹಿತರು ಎಂಬ ವರ್ಗದಡಿ ಗುರುತಿಸು ವುದು ಎಷ್ಟು ಸರಿ? ಮನೆಕೆಲಸ ಜವಾಬ್ದಾರಿಗಳನ್ನು ನಿಭಾಯಿಸುವ ಮೂಲಕ ಪತಿಯ ಕೆಲಸ ಸರಾಗವಾಗಿ ಸಾಗಲು ಸಹಕಾರ ನೀಡುವ ಗೃಹಿಣಿಯರನ್ನು ಅನುತ್ಪಾದಕ ವರ್ಗಕ್ಕೆ ಏಕೆ ಸೇರಿಸಬೇಕು? ಹೊರಗಿನ ಪ್ರತಿಯೊಂದು ಕೆಲಸ ಸೇವೆಗೂ ಇಂತಿಷ್ಟು ಎಂದು ಬೆಲೆ ನಿಗದಿಯಾಗಿರುವಾಗ ಮನೆ ಒಳಗಿನ ಕೆಲಸಕ್ಕೆ ಮಾತ್ರ ಯಾವುದೇ ಮೌಲ್ಯವಿಲ್ಲ. ಕೆಲಸಕ್ಕೆ ವೇತನವೇ ದೊರಕದಿರುವುದ ರಿಂದ ಅದು ದುಡಿಮೆ ಎಂದು ಪರಿಗಣಿಸ ಲ್ಪಡುವುದಿಲ್ಲ.ಹಾಗಾಗಿ ಕೆಲಸ ಮಾಡಿಯೂ ಬೆಲೆಯಿಲ್ಲದಂತಾಗಿದೆ, ಇಷ್ಟಲ್ಲದೆ ಗೃಹಿಣಿಯರು ಅನುಭವಿಸುವ ಇನ್ನೊಂದು ವಿಷಯವೆಂದರೆ ಒಂದು ಹೆಣ್ಣನ್ನು ನೀವು ವರ್ಕಿಂಗ್ ವುಮನ್ ಆ ಎಂದು ಕೇಳಿದಾಗ ಅವಳು ಇಲ್ಲ ನಾನು ಗೃಹಿಣಿ ಇಲ್ಲವೇ ಹೌಸ್ ವೈಫ್ ಅಂಥ ಹೇಳಿದರೆ ಅಲ್ಲಿಗೆ ಅವಳ ಮೌಲ್ಯ ಕಡಿಮೆ ಎಂಬಂತೆ ನೋಡುತ್ತಾರೆ, ಅಲ್ಲದೆ ಅವಳೊಂದಿಗೆ ಹೆಚ್ಚು ಮಾತನಾಡಲು ಸಹ ಹಿಂಜರಿಯುತ್ತಾರೆ ಕಾರಣ ಮನೆಯಲ್ಲಿರುವ ಇವಳು ಅಸಮರ್ಥೆ ಇವಳಿಗೇನು ಮಹಾ ತಿಳಿದಿದೆ. ಲೋಕ ಜ್ಞಾನ ಇಲ್ಲದವಳು ಹಾಗೂ ಮನೆಗೆಲಸ ಮಾಡುತ್ತ ಮಕ್ಕಳನ್ನು ಸಂಭಾಳಿಸುತ್ತ, ಅಡುಗೆ ಇತರ ಕೆಲಸ ನೋಡಿಕೊಳ್ಳುತ್ತ ಉಳಿದ ಸಮಯವನ್ನು ಟಿವಿ ಧಾರಾವಾಹಿ ನೋಡುತ್ತ ಕಾಲಹರಣ ಮಾಡುವ ಇವಳಿಗೆ ಏನು ತಾನೇ ಲೋಕ ಜ್ಞಾನ ಇರುತ್ತದೆ. ಇವರ ಜೊತೆ ಮಾತನಾಡಲು ಇವರಿಗೇನು ಗೊತ್ತಿರುತ್ತದೆ ಎನ್ನುವಂತಹ ತಾತ್ಸಾರ ಹಾಗೂ ಕೆಟ್ಟ ಮೂಢನಂಬಿಕೆಯ ಮನೋಭಾವ. ಹಲವರಿಗೆ ಇರುತ್ತದೆ.
  •  ನಿಜವಾಗಿಯೂ ಹೇಳಬೇಕೆಂದರೆ ಜಗತ್ತಿನ ಅತ್ಯಂತ ಕಠಿಣ ಕೆಲಸವೇ ಗೃಹಿಣಿಯರದ್ದು, ಮನೆ ಕೆಲಸ ವನ್ನು ಮಾಡುತ್ತ ತಾಯಿಯ ಸ್ಥಾನವನ್ನು ನಿಭಾಯಿಸುವುದು ಖಂಡಿತ ಅಷ್ಟು ಸುಲಭ ಸಾದ್ಯವಲ್ಲ, ದಿನವಿಡೀ ಮನೆ ಮಂದಿಗಾಗಿ ತನ್ನ ಹಸಿವು ನಿದ್ರೆ ಲೆಕ್ಕಿಸದೆ ದುಡಿಯುವ ಅವಳ ಕೈ ಮಾತ್ರ ಸದಾ ಖಾಲಿ. ಪ್ರತಿಯೊಂದಕ್ಕೂ ಕೈಚಾಚುವ ಸನ್ನಿವೇಷ,ಇದೆಂಥ ವಿಪರ್ಯಾಸವಲ್ಲವೇ ಖ್ಯಾತ ಲೇಖಕಿ ಲೇಖಕಿ ಒಲಿವಿಯಾ ಗುಡ್‌ಹೋಪ್‌ರವರ ಪ್ರಕಾರ ಗೃಹಿಣಿಯ ಕೆಲಸಕ್ಕೆ ಎನಾದರೂ ವೇತನ ನೀಡಿದರೆ ಅದು ಅತ್ಯಂತ ಹೆಚ್ಚಿನ ಸಂಬಳ ಪಡೆಯುವ ಉದ್ಯೋಗ ಎಂದು ಶಿಫಾರಸ್ಸು ಮಾಡಬಹುದು ಎಂದು ಹೇಳುತ್ತಾರೆ, ಇತ್ತೀಚೆಗೆ ಬ್ರಿಟನ್ನಿನಲ್ಲಿ ಗೃಹಿಣಿಯೊಬ್ಬಳು ವಿಚ್ಛೇದನ ಪ್ರಕರಣ ದಲ್ಲಿ ತನಗೆ ಹೆಚ್ಚಿನ ಪರಿಹಾರ ಧನ ಕೊಡಬೇಕೆಂದು ವಾದಿಸಿದ್ದಳು. ಕಾರಣ ಕುಟುಂಬವನ್ನು ನೋಡಿಕೊಳ್ಳುವ ಸಲುವಾಗಿ ಅವಳು ತನಗೆ ಸಿಗುತ್ತಿದ್ದ ಹೆಚ್ಚಿನ ಸಂಬಳದ ಉದ್ಯೋಗವನ್ನು ಬಿಟ್ಟಿದ್ದಳು.ಇಂತಹ ತ್ಯಾಗಕ್ಕೆ ಬೆಲೆ ಇಲ್ಲವೇ ಎಂದು ಆ ಮಹಿಳೆ ವಾದಿಸಿ ಗೆದ್ದಿದ್ದಳು.
  •  ನಾ ನೋಡಿದ ಹಾಗೇ ನೀವೇನು ಹೊರಗೆ ದುಡಿಯುತ್ತಿರ ನಿಮ್ಮ ಖರ್ಚುವೆಚ್ಚಗಳನ್ನು ನೀವೇ ನಿಭಾಯಿಸಿ ಕೊಳ್ಳುತ್ತೀರಾ. ಆದರೆ ನಾವು ನೋಡಿ ವರ್ಷದ 365 ದಿನಗಳೂ ಬಿಡುವಿಲ್ಲದೆ ಬೆಳಿಗ್ಗೆಯಿಂದ ರಾತ್ರಿಯ ವರೆಗೂ ಪುಕ್ಕಟ್ಟೆ ದುಡಿದರೂ ನಮ್ಮ ಅವಶ್ಯಕತೆಗಳಿಗೆ ಮನೆಯ ಗಂಡಸರ ಮೇಲೆ ಅವಲಂಬಿತರಾಗಿದ್ದೇವೆ ಎಂದು ಹೇಳುವಾಗ ಅವರ ಮಾತಿನ ಹಿಂದಿನ ನೋವು ನಿಜಕ್ಕೂ ಬೇಸರ ತರಿಸುತ್ತದೆ, ಇಲ್ಲಿ ನಾನು ಪ್ರಸ್ತಾಪಿಸುತ್ತಿರುವುದು ಮನೆಕೆಲಸ ಮಾಡಿಕೊಂಡು ಇರುವ ಗೃಹಿಣಿಯರು ಸಂಬಳ ಬೇಕು ಎಂದಲ್ಲ ಅವಳ ಬಗ್ಗೆ ತಾತ್ಸಾರ ಬೇಡ, ಲೋಕಜ್ಞಾನ ಇಲ್ಲದವಳು ಎಂಬ ಹಣೆ ಪಟ್ಟಿ ಬೇಡ, ಜೊತೆಗೆ ಅವಳೆಲ್ಲಾ ಅವಶ್ಯಕತೆಗಳಿಗೆ ಪ್ರತಿಯೊಂದು ಸಣ್ಣ ಪುಟ್ಟ ಬೇಕುಗಳಿಗೂ ಮನೆಯಲ್ಲಿನ ಗಂಡಸರ ಬಳಿ ಕೈ ಚಾಚುವಂತಾಗಬಾರದು.
  •  ಮನೆಯ ಖರ್ಚು ವೆಚ್ಚಗಳ ಜೊತೆಗೆ ಅವಳಿಗೂ ಒಂದಿಷ್ಟು ಮಿಸಲಿಟ್ಟರೆ ಅವಳ ಕೆಲಸಕ್ಕೆ ಸಂದ ಗೌರವದ ಜೊತೆಗೆ ಅವಳಿಗೂ ಸ್ವಾಭಿಮಾನಕ್ಕೆ ಒಂದು ಬಲ ಬಂದಂತಾ ಗುತ್ತದೆ. ಗೃಹಿಣಿಯರು ಜೀವನಪೂರ್ತಿ ತನ್ನ ಮನೆ ಸಂಸಾರಕ್ಕಾಗಿ ಜೀವ ಸವೆಸುವ ಜೀತದಾಳಿನಂತೆ ಯಾಕಾಗಬೇಕು? ಮನೆಕೆಲಸಗಳಿಗೆ ಸಹಾಯಕರನ್ನು ನೇಮಿಸಿಕೊಂಡರೆ ಅವರಿಗೆ ಇಂತಿಷ್ಟು ಎಂದು ಹಣ ಕೊಡುವುದಿಲ್ಲವೇ? ಅದೇ ಕೆಲಸ ಮನೆಯ ಗೃಹಿಣಿ ಮಾಡಿದರೆ ಯಾಕಿಲ್ಲ? ಎಂಬ ಪ್ರಶ್ನೆ ಸಹಜ. ಹಾಗೆ ನೋಡಿದರೆ ದೇಶದ ಆರ್ಥಿಕತೆಗೆ ಗೃಹಿಣಿ ಯರ ಕೊಡುಗೆ ಹೆಚ್ಚೆಂದೇ ಹೇಳಬಹುದು ಅದು ಹೇಗೆಂದರೆ ಒಂದು ಕುಟುಂಬ ಸಮರ್ಥವಾಗಿ ನೆಡೆಯಲು ಆ ಮನೆಯ ಗೃಹಿಣಿಯ ಸಹಕಾರವೇ ಮುಖ್ಯ, ಹೀಗೆ ಪ್ರತಿ ಕುಟುಂಬಗಳು ಸಮರ್ಥಗಿದ್ದರೆ ದೇಶಕ್ಕೇ ಒಂದು ಬಲ, ಹಾಗಾಗಿ ಮನೆ ಕೆಲಸಕ್ಕೂ ಪ್ರಾದನ್ಯತೆ ನೀಡಿ ಅವಳ ಶ್ರಮಕ್ಕೂ ತಕ್ಕಪ್ರತಿಫಲ ಕೊಟ್ಟರೆ ಆಗ ಅವಳೂ ಸಮಾಜದ ಆರ್ಥಿಕ ಉತ್ಪಾದ ನೆಯ ಭಾಗವಾಗುತ್ತಾಳೆ.ಅದು ಬಿಟ್ಟು ಮನೆ ಗಂಡ ಮಕ್ಕಳ ಏಳಿಗೆಗಾಗಿ ತಮ್ಮ ಇಡೀ ಜೀವನ ಮುಡಿಪಾಗಿಟ್ಟು ಯಾವುದೇ ಪ್ರತಿಫಲವಿಲ್ಲದೆ, ಮನ್ನಣೆ ಗೌರವವೂ ಇಲ್ಲದೆ ಬದುಕುವಂತಾಗಬಾರದು.!

  •  ಗೀತಾಂಜಲಿ ಎನ್. ಎಮ್ – ಕೊಡಗು.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW