ಜೀವವಿಮೆ, ಆರೋಗ್ಯ ವಿಮೆಗಿಲ್ಲ ಹೆಚ್ಚಿನ ತೆರಿಗೆಯ ಹೊಡೆತ… ಕವಿ ನಾಗರಾಜ ಜಿ. ಎನ್. ಬಾಡ ಅವರ ಲೇಖನಿಯಲ್ಲಿ ಮೂಡಿದ ಕವಿತೆಯನ್ನು ತಪ್ಪದೆ ಮುಂದೆ ಓದಿ…
ಜಿ. ಎಸ್. ಟಿ.ಯಲ್ಲಾಯ್ತು
ಭಾರೀ ಕಡಿತ
ಸರ್ಕಾರದ ಖಜಾನೆಯಲ್ಲಾಗುವುದು
ಹೆಚ್ಚಿನ ಏರಿಳಿತ
ತೆರಿಗೆಯ ಭಾರವು ಬರಲಿದೆ
ಹತೋಟಿಗೆ
ಕಡಿಮೆಯಾಗಲಿದೆ ತೆರಿಗೆಯ
ಹೊಡೆತದ ಸಾಮಾನ್ಯರಿಗೆ
ಜೀವವಿಮೆ ಆರೋಗ್ಯ ವಿಮೆಗಿಲ್ಲ
ಹೆಚ್ಚಿನ ತೆರಿಗೆಯ ಹೊಡೆತ
ಮಧ್ಯಮ ವರ್ಗದವರಲ್ಲಿ ಹೆಚ್ಚಾಯ್ತು
ಕಾರು ತೆಗೆದುಕೊಳ್ಳುವ ತುಡಿತ
ತೆರಿಗೆ ವ್ಯವಸ್ಥೆಯಲ್ಲಾಯ್ತು
ಅಮೋಘ ಬದಲಾವಣೆ
ಕೊಂಡುಕೊಳ್ಳಲು ಹೆಚ್ಚಾಗುವುದು
ಹಣದ ಚಲಾವಣೆ
ಇಳಿಯಲಿದೆ ಜನಸಾಮಾನ್ಯರ
ಜೇಬಿನ ಹೊರೆ
ಕೊಂಡುಕೊಳ್ಳುವ ಗ್ರಾಹಕನೆ
ಆಗಬೇಕು ಎಂದಿಗೂ ಇಲ್ಲಿ ದೊರೆ
ಆರ್ಥಿಕ ಬೆಳವಣಿಗೆಗೆ
ಸಿಗಲಿ ಹೆಚ್ಚಿನ ವೇಗ
ಬದಲಾಗಲಿ ಕಂಪನಿಗಳ
ವ್ಯಾಪಾರಿಗಳ ಹಳೆಯ ರಾಗ
ಗ್ರಾಹಕರಿಗೆ ವರ್ಗಾಯಿಸಲಿ
ತೆರಿಗೆ ಕಡಿತದ ಲಾಭ
ಶುಭ ಸಮಾಚಾರವು
ತುಂಬಿಸಲಿ ಎಲ್ಲರ ಜೇಬ
ಸಿಗಲಿ ಎಲ್ಲರಿಗೂ
ತೆರಿಗೆಯ ಇಳಿತದ ಫಲ
ಜನಸಾಮಾನ್ಯರಿಗೆ ತುಂಬಲಿ
ಹೆಚ್ಚಿನ ಆರ್ಥಿಕ ಬಲ
- ನಾಗರಾಜ ಜಿ. ಎನ್. ಬಾಡ – ಕುಮಟ, ಉತ್ತರ ಕನ್ನಡ.
