ಮಕ್ಳು ಓದಿ ದೊಡ್ಡ ಆಫೀಸರ್ ಆಗಬೇಕು ಎನ್ನುವ ಹಂಬಲಕ್ಕೆ ಪಾಲಕರು ದೊಡ್ಡ ಕನಸ್ಸನ್ನು ಇಟ್ಟುಕೊಂಡು ಶಾಲೆಗೆ ಕಳುಹಿಸುತ್ತಾರೆ. ಆದರೆ ಶಾಲೆಗೆ ಹೋದ ಮಗು ಮನೆಗೆ ಬರದಿದ್ದಾಗ ಆಗುವ ಆತಂಕ ಹೇಳತೀರದು. ಈ ಕತೆ ಕಾಲ್ಪನಿಕವಾದರೂ ಫೋಟೋದಲ್ಲಿರುವ ಚಿತ್ರಗಳು ನೈಜ. ಯುವ ಕತೆಗಾರ ಪ್ರವೀಣ ಮ ಹೊಸಮನಿ ಅವರ ಲೇಖನಿಯಲ್ಲಿ ಮೂಡಿದ ಕತೆಯನ್ನು ತಪ್ಪದೆ ಮುಂದೆ ಓದಿ…
ಎಷ್ಟೋ ಬಡ ಕುಟುಂಬದ ಮಕ್ಕಳು ತಮ್ಮ ಶೈಕ್ಷಣಿಕ ಜೀವನದ ಕಾಲಿಕಾ ಹಂತವನ್ನು ಖಾಸಗಿ ಶಾಲೆಯಲ್ಲಿ ತಮ್ಮ ವಿದ್ಯಾಭ್ಯಾಸ ಪೂರೈಸಿದರೆ ಚೆನ್ನಾಗಿರುತ್ತೆ ಎನ್ನೋ ಮನೋ ಬುದ್ಧಿ ಎಲ್ಲ ಮಕ್ಕಳಲ್ಲೂ ಸಹಜವೆ ಹೌದು! ಆದರೆ ಪರಿಸ್ಥಿತಿಯ ಒಳನೋಟಕ್ಕೆ ಕಂಡ ಕನಸಿಗೆ ದಾರಿಯೇ ಇಲ್ಲವೆಂದು ಅರಿತು ಮಕ್ಕಳು ಸರಕಾರಿ ಶಾಲೆಯ ಮೊರೆಯನ್ನೇ ಕೊನೆಗೆ ಜಪಿಸುವರು. ಸರಕಾರಿ ಶಾಲೆಗಳು ಯಾವ ಖಾಸಗಿ ವಿದ್ಯಾಲಯಕ್ಕೂ ಕಮ್ಮಿಲ್ಲದಂತೆ ಇಂದು ದೇಶಾದಾದ್ಯಂತ ಸೆಡ್ಡೊಡೆದು ನಿಂತಿವೆ. ಸಕಲ ಸೌಕರ್ಯವೂ ಕೂಡಾ ನಮ್ಮ ಸರ್ಕಾರಿ ಶಾಲೆಗಳು ಇಂದು ಮಕ್ಕಳಿಗೆ ಪೂರೈಸುತ್ತಿವೆ.
ಮನೆಯಿಂದ ಬರೋ ಮಕ್ಕಳು ಮನೇಲಿ ‘ಅಮ್ಮಾ-ಅಪ್ಪಾ, ನಾ ಶಾಲೆಗೆ ಹೋಗಬರ್ತೀನಿ’ ಎಂದು ಅಪ್ಪ- ಅಮ್ಮನ ಮುಂದೆ ನಗುವ ಮೊಗದೊಂದಿಗೆ ಸಂತೋಷದೊಂದಿಗೆ ದಿನೇ ದಿನೇ ಪಾಠ ಶಾಲೆಗೆ ಬರತಾನೇ ಇರ್ತಾರೆ. ಇದು ದಿನ ನಿತ್ಯದ ಕಾಲಿಕಾ ಮಾರ್ಗ ನಮ್ಮ ವಿದ್ಯಾರ್ಥಿ ಜೀವನದ್ದು.

ಹೀಗೆ ದಿನ ನಿತ್ಯ ಮನೀಲಿ ಹೇಳಿ ಬರುವ ಮಗು ತಂದೆ-ತಾಯಿಗಳ ನಂಬಿಕೆಗೆ, ಪುನಃ ಬರುವಳು/ಬರುವನು. ಅದೇ ಮಗು ಆ ಇಡೀ ದಿನಾ ಸಂಜೆಯಾದ್ರೂ ಕೂಡಾ ಮನೆಗೆ ತಲುಪಿಲ್ಲ ಅಂದ್ರೆ ಆ ಕರುಳ ಬಳ್ಳಿಗಳಿಗೆ ಎಲ್ಲಿಲ್ಲದ ಸಂಕಟವೆ ಅಹುದು!. ಆ ಪಾಲಕರಲ್ಲಿ ಏನೋ ಕಳವಳ, ದಾರಿ ಕಾದು, ಕಾದು ಕೊನೆಗೆ ಗೆಳೆಯ-ಗೆಳತಿಯರಲ್ಲಿ ವಿಚಾರಿಸಿದರು. ಅವರಿಂದಲೂ ಕೂಡಾ ಯಾವುದೇ ಸರಿಯಾದ ಪ್ರತಿಕ್ರಿಯೆ ದೊರೆಯಲೇ ಇಲ್ಲ. ಇದನ್ನರಿತ ಮನೆಯವರು ಮತ್ತಷ್ಟು ಗಾಭರಿಗೊಳಗಾದರು.
ಮಾರನೆ ದಿನ ಶಾಲೆಗೆ ಭೇಟಿ ನೀಡಿದರು. ಶಾಲೆಯ ಬಾಗಿಲುಗಳು ಇನ್ನೂ ಮುಚ್ಚಿದ ಸ್ಥಿತಿಯಲ್ಲಿಯೇ ಇದ್ದುದ್ದನ್ನು ಅರಿತು ಅಲ್ಲಿಯೇ ಯಾರಾದರೂ ಬರುವವರೆಗೆ ಸಮಯ ಕಳೆದರೆಂತಾತಿತೆಂದು ಕುಳಿತರು. ಶಾಲೆಯ ಸಮಯಕ್ಕೆ ಮೊದಲು ಬಂದವನೇ ಶಾಲಾ ಕಾವಲುಗ. ಆ ಪಾಲಕರ ಮಾತಿನ ಕಳವಳದ ರೋಧನೆ ಆತನಿಗೆ ಹೇಳಿದಾಗ ಆತನೂ ತಬ್ಬಿಬ್ಬಾದ. ತಕ್ಷಣ ತಿಳಿದ ಆತ ಎಲ್ಲಾ ತರಗತಿಗಳ ಬಾಗಿಲುಗಳ ಬೀಗವನ್ನು ತೆಗೆದು ನೋಡುತ್ತಾ ಹೋದ. ಆದರೆ ಆ ಒಂದು ಕ್ಷಣ ಆ ಕಾವಲುಗಾರ ಮೂಕ ಸ್ತಬ್ಧನಾದ. ಕಾರಣ ಆ ಮಗು/ವಿದ್ಯಾರ್ಥಿಯು ತರಗತಿಯ ಕೋಣೆಯ ಬೆಂಚಿನ ಮೇಲೆಯೇ ಮಲಗಿತ್ತು. ಈತ ಹೋಗಿ ಎಚ್ಚರಿಸಿದರೂ ಸಹ ಏಳಲೇ ಇಲ್ಲ. ಗಾಬರಿಯಾದ ತಂದೆ-ತಾಯಿಗಳು ಓಡೋಡಿ ಮಗುವಿನ ಬಳಿ ಬಂದು ನೋಡಿದಾಗ ಆ ಮಗು ತನ್ನ ಜೀವನದ ದಿಕ್ಕನ್ನೇ ಅರಿಯದೆ ವಿಧಿಯ ದಿಕ್ಕಿಗೆ ಮುಖ ಮಾಡಿತ್ತು.

ಮಗುವಿನ ಬೆಂಚಿನ ಪಕ್ಕದಲ್ಲಿ ‘ವಿಷಸರ್ಪ’ ಬುತ್ತಿ ಗಂಟಿನಂತೆ ಕೂತಿದನ್ನು ಕಂಡು ದೂರ ಸರಿದು ಮತ್ತಷ್ಟು ರೋಧನೆಗೊಳಗಾದರು. ಈ ವಿಷ ಜಂತೇ ನನ್ನ ಕಂದಮ್ಮನನ್ನು ಕಚ್ಚಿದ್ದು ಎಂದರಿತು ಅವರ ಕಣ್ಣೀರಿನ ಕಂಬನಿ ಮುಗಿಲ ಮುಟ್ಟಿತು..
ಈ ಕಾಲ್ಪನಿಕ ಕಥೆಯ ನಿಟ್ಟಿನಲ್ಲೇ, ನಮ್ಮೂರಿನ ಪ್ರೌಢಶಾಲೆಯೊಂದರ ವರ್ಗ ಕೋಣೆಯಲ್ಲಿ ವಿಷಸರ್ಪ(ನಾಗರಹಾವು) ಹೆಡೆಯತ್ತಿ ಬುಸುಗುಟ್ಟುವುದನ್ನು ಕಣ್ಣಾರೆ ಕಂಡ ನಮ್ಮ ಸ್ನೇಹ ಬಳಗ ಅದರಿಂದ ವಿದ್ಯಾರ್ಥಿಗಳಿಗೆ ಯಾವುದೇ ಹಾನಿಯಾಗದೆ ಮತ್ತು ಆ ವಿಷ ಜೀವಿಗೆ ಯಾವುದೇ ಕೆಡಕನ್ನುಂಟುಮಾಡದೆ ನಮ್ಮ ಶಾಲೆಯ ಹಳೆಯ ಗೆಳೆಯರ ಬಳಗ ಅದನ್ನ ಹಾಗೂ ಅದರಿಂದ ಮಕ್ಕಳನ್ನೂ ಸಹ ಸುರಕ್ಷಿತವಾಗಿ ಕಾಪಾಡಿ ಮಕ್ಕಳಿಗೆ ಧೈರ್ಯದ ಮನೋ ಬುದ್ಧಿಯನ್ನು ತಿಳಿ ಹೇಳಿದರು.

ಪ್ರತಿಯೊಂದು ಶಾಲೆಯಲ್ಲಿ, ಅದು ಸರ್ಕಾರಿ ಶಾಲೆಯೇ ಆಗಿರಲಿ ಇಲ್ಲ ಖಾಸಗಿಯೇ ಆಗಿರಲಿ, ನಿಮ್ಮ ಶಾಲೆಯ ಜವಾಬ್ದಾರಿ ಹೇಗೆ ನಿಮ್ಮ ಸ್ವಂತದಾಗಿರೊತ್ತೋ ಹಾಗೆಯೇ ನಿಮ್ಮನ್ನ ನಂಬಿ ಬಂದ ಆ ಮಕ್ಕಳ ಜವಾಬ್ದಾರಿಯೂ ನಿಮ್ಮದಾಗಿರಲಿ.
- ಪ್ರವೀಣ ಮ ಹೊಸಮನಿ – ನಾಗಠಾಣ, ವಿಜಯಪುರ.
