ಭಾರಭೃತ್ ಎನಿಸಿದ ಶ್ರೀ ಶ್ರೀರಾಮನ ಸೇವಕ ಹನುಮಂತ. ಆಸ್ಮರಣೆಯ ನಿಮಿತ್ತ ಆ ಒಂದು ದಿನ ಎಲ್ಲರೂ ಭಕ್ತಿ ಶ್ರದ್ಧೆಯನ್ನು ಸಂಭ್ರಮದಿಂದ ಸಮರ್ಪಿಸುವ ಶುಭದಿನ. ಎಲ್ಲರಿಗೂ ಹನುಮ ಜಯಂತಿಯ ಶುಭಾಶಯಗಳು… ಕವಿ ಸಂಧ್ಯಾ ಟಿ ಅವರ ಲೇಖನಿಯಲ್ಲಿ ಅರಳಿದ ಹನುಮಾನ ಜಪವನ್ನು ತಪ್ಪದೆ ಮುಂದೆ ಓದಿ…
“ಬುದ್ಧಿಬ೯ಲಂ ಯಶೋಧೈರ್ಯಂ ನಿರ್ಭಯತ್ವಮರೋಗತಾಂ/
ಅಜಾಢ್ಯಂ ವಾಕ್ಪಟುತ್ವಂ ಚಿ ಹನುಮತ್ ಸ್ಮರಣಾತ್ ಭವೇತ್//”
ಚೈತ್ರ ಶುದ್ಧ ಪೂರ್ಣಿಮಾ ದಿನದಂದು ಸೂರ್ಯೋದಯ ಸಮಯದಲ್ಲಿ ಹನುಮಜಯಂತಿಯನ್ನು ಬಹು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಆ ದಿನ ನಾವು ಶುದ್ಧ ಮನಸ್ಸಿನಿಂದ ರಾಮನ ಅದ್ಭುತವಾದ ಮಹಿಮೆ ಅನುಗ್ರಹಕ್ಕಾಗಿ ಭಕ್ತಿಯಿಂದ ಬೇಡಿದರೆ ಎಲ್ಲ ದು:ಖಗಳು ಕಳೆದು ಭವ ಸಾಗರ ಸರಳವಾಗಿ ನಿರ್ವಿಘ್ನವಾಗಿ ನಡೆಯುತ್ತದೆ ಎನ್ನುವ ನಂಬಿಕೆ.
ಹನುಮಂತನು ಮುಖ್ಯಪ್ರಾಣನೆನಿಸಿ ತನಗೆ ಯಾವ ಲಾಭವಿಲ್ಲದೆ ತನ್ನನ್ನು ಭಜಿಸಿದವರಿಗೂ ನಿಂದಿಸಿದವರಿಗೂ ಒಳಗಿದ್ದು ನಿರಂತರ ಶ್ವಾಸ ಜಪಗಳನ್ನು ಮಾಡುವನು. ಒಂದು ದಿನದಲ್ಲಿ ಇಪ್ಪತ್ತೊಂದು ಸಾವಿರದ ಆರುನೂರು ಶ್ವಾಸ ಜಪಗಳಾಗುವವು.ಅಂದಮೇಲೆ ಪವಮಾನನಿಗೆ ನಾವು ಹೇಗೆ ಕೃತಜ್ಞತೆ ಸಲ್ಲಿಸಬೇಕು. ಆಸ್ಮರಣೆಯ ನಿಮಿತ್ತ ಆ ಒಂದು ದಿನ ಎಲ್ಲರೂ ಭಕ್ತಿ ಶ್ರದ್ಧೆಯನ್ನು ಸಂಭ್ರಮದಿಂದ ಸಮರ್ಪಿಸುವ ಶುಭದಿನ.

ಪರಮಾತ್ಮನು ತ್ರಿಗುಣ ಮಾಯೆಯಿಂದ ಅತೀತನು.ಅಂತಹ ಪರಮಾತ್ಮನ ಅನುಗ್ರಹ ಸಾಕ್ಷಿಯಾಗಿ ಆಂಜನೇಯನಿಗೆ ಉಪದ್ರಷ್ಟಾ ಮತ್ತು ನಿಜ ಸಮ್ಮತಿ ಕೊಡುವವ ಎಂದು ಅನುಮಂತಾ ಎಂದು ಶ್ರೀ ಕೃಷ್ಣನು ಗೀತೆಯಲ್ಲಿ ಹೇಳಿದ್ದಾನೆ.ಅದನ್ನೆ ಜ್ಞಾನಿಗಳು ಅಷ್ಟ ದಿಕ್ಕಿನಲ್ಲಿ ಹರಿಯಲೆಂದು ಹನುಮಂತ ಎಂದು ಉಚ್ಚರಿಸಿದರು.ಸೂರ್ಯ, ಇಂದ್ರಾದಿ ದೇವತೆಗಳು ಅದಿತಿಯ ಮಕ್ಕಳು.ಅಂಜನೇಯನು ಹುಟ್ಟಿದ ಕೆಲವೆ ಸಮಯದಲ್ಲಿ ಸೂರ್ಯನನ್ನು ಹಿಡಿಯಲು ಹೋದನು.ಆಗ ಇಂದ್ರನು ವಜ್ರಯುಧದಿಂದ ಹೊಡೆದನು.ಆಗ ವಾಯು ತಟಸ್ಥನಾದನು ಎಲ್ಲ ದೇವತೆಗಳು ಬ್ರಹ್ಮ ನಲ್ಲಿ ಬಂದು ಕೇಳಿದಾಗ ವಾಯುದೇವರು ಮಗು ವನ್ನು ತೋರಿಸಲು ವಿಧಾತನಾದ ಬ್ರಹ್ಮನು ಪರಮಾತ್ಮನಂತೆ ಇವನು ವಿಶ್ವವ್ಯಾಪಿ ಎಂದು ತಿಳಿಸಿದರು.ಈ ಪ್ರಸಂಗಗಳೆಲ್ಲವು ತತ್ವಪ್ರಕಾರ ಆತ್ಮ ಪರಮಾತ್ಮನ ಸಂಹಿತೆಯ ರಹಸ್ಯವನ್ನು ತಿಳಿಸುತ್ತವೆ.ರಾವಣನು ನೀನು ಯಾರೆಂದು ಪ್ರಶ್ನಿಸಲು ನಾನು ಶ್ರೀ ರಾಮನ ಸೇವಕನೆಂದು ಹೇಳಿರುವನು.ಹೀಗೆ ಶ್ರೀರಾಮನಿಗೆ ಚ್ಯುತಿ ಬಾರದಂತೆ ನಡೆದ ಪ್ರೀತಿಯ ಸೇವಕ ಹನುಮಂತ.
ಸೂರ್ಯನಲ್ಲಿಯೇ ಸಕಲ ವೇದ ಶಾಸ್ತ್ರಗಳನ್ನು, ಅಣಿಮಾ, ಮಹಿಮಾ ಮೊದಲಾದ ಎಲ್ಲ ವಿದ್ಯೆಗಳ ರಹಸ್ಯಪಾರಂಗತನಾದನು.ಇವನು ಸಪ್ತಚಿರಂಜೀವಿಗಳಲ್ಲಿ ಒಬ್ಬನು.ಸೂಕ್ಷ್ಮನುಹೌದು ಸ್ಥೂಲನು ಹೌದು.ದೈತ್ಯರಿಗೆ ಭಯಂಕರ ಸಜ್ಜನರ ಕರುಣಾಕರ. ದಾಸ್ಯ ಭಕ್ತರಲ್ಲಿ ರಾಜಕುಮಾರ, ವಿಶ್ವ ವೀರರಲ್ಲಿ ಶ್ರೇಷ್ಠ. ಶ್ರೀ ಸೀತಾರಾಮ ನಾಮದ ಜೀವಂತ ಸಾಕಾರ.ಶ್ರೀರಾಮನು ಅವನ ಭಕ್ತಿಗೆ ಮೆಚ್ಚಿ ನಾನು ನಿನಗೆ ಯಾವಾಗಲೂ ಋಣಿಯಾಗಿರುತ್ತೇನೆ. ಇದೋ ನನ್ನನ್ನೆ ನಿನಗೆ ಕೊಡುತ್ತೇನೆ ಎಂದು ಸರ್ವೋತ್ತಮನು ಆಲಿಂಗನ ಸುಖ ಕೊಟ್ಟನು ಎಂತಹ ಪುಣ್ಯ ಪುರುಷ ಹನುಮಂತನು.ಹರಿ ಸರ್ವೋತ್ತಮ ವಾಯು ಜೀವೋತ್ತಮ.
ಕಲುಷಿತ ಇಲ್ಲದ ಕನ್ನಡಿಯಂತಹ ಶುದ್ಧ ಮನಸ್ಸುಳ್ಳ ಹನುಮಂತ ದೇವರು.ಎಲ್ಲಾ ವಾಮ ಮಾರ್ಗಗಳಿಗೂ ರಾಮ ಬಾಣ,ಶಿವ ಧನಸ್ಸು,ವಾಯು ದೇವರ ಗುರಿಯಾದ ನಮ್ಮ ಮುಖ್ಯಪ್ರಾಣ.
ಓಂ ನಮೋ ಭಗವತೇ
ಓಂ ನಮೋ ಭಗವತೇ ಪಂಚವದನಾಯ ಮಹಾ ಬಲ
ಪ್ರಚಂಡಾಯ ಮಹಾ ಭೀಮ ಪರಾಕ್ರಮಾಯ ಸಕಲ
ಬ್ರಹ್ಮಾಂಡ ನಾಯ ಕಾಯ/
ಸಕಲ ಭೂತ ಪ್ರೇತ ಪಿಶಾಚ
ಶಾಕಿನೀ ಡಾಕಿನೀ ಯಕ್ಷಿಣೀ ಪೂತನಾ ಮಹಾಮಾರಿ ಸಕಲ
ವಿಘ್ನ ನಿವಾರಣಾಯ//ಸಕಲ ಶತ್ರು ಸಂಹಾರಣಾಯ//ಸ್ವಾಹಾ//
ಓಂ ಅಂಜನೇಯಾಯ ವಿದ್ಮಹೇ ಮಹಾಬಲಾಯ ಧೀಮಹಿ/
ತನ್ನೋ ಹನುಮಾನ್ ಪ್ರಚೋದಯಾತ್//
ಎಲ್ಲರಿಗೂ ಸದ್ಭುದ್ಧಿ,ಸುಧೈರ್ಯ. ಭಕ್ತಿ ಜ್ಞಾನ ಕೊಟ್ಟು ರಕ್ಷಿಸು.ಹನುಮಂತ ದೇವರ ಅನುಗ್ರಹ ಅಪೇಕ್ಷಿಸುವ ನಮ್ಮೆಲ್ಲರ ಅನಂತಾನಂತ ನಮಸ್ಕಾರಗಳು.
ಜಯ ಜಯ ಸೀತಾರಾಮ ದೂತ
ಜಯ ಜಯ ಅಂಜನಾ ಸುತ
ಜಯ ಜಯ ವಾಯು ಸಂಭೂತ
ಜಯ ಜಯ ಶಿವ ತೈಜಸ ನೀತಿವಂತ
ಜಯ ಜಯ ಕೃತಿ ರಚನೆ ಮತಿವಂತ
ಜಯ ಜಯ ಗುಣ ನೀಡು ಹನುಮಂತ
ದುಷ್ಟ ದಾನವರ ಶಿಕ್ಷಿಸಿ ಶಿಷ್ಟ ಜನ ರಕ್ಷಿಸಿ
ಶಿಷ್ಟೇಶನಾದ ಸಿರಿರಮಣನ ತೋರಿಸಿ
ಕಷ್ಟ ಪರಿಹರಿಸು ಸಜ್ಜನರ ಉದ್ಧರಿಸಿ
- ಸಂಧ್ಯಾ ಟಿ – ಕವಿ, ಬೆಂಗಳೂರು.
