ಹರಿವಿನಗುಂಟ (ಭಾಗ-೨) – ರೇಷ್ಮಾ ಗುಳೇದಗುಡ್ಡಾಕರ್

ಬಾಲ್ಯದಿಂದಲೂ ಹಣ, ಆಸ್ತಿ ಎಂದು ಬದುಕಿದ್ದ ಶರತ್ ನಿಗೆ ಭಾವನೆ, ಆದರ್ಶ, ಸ್ನೇಹ, ಒಲವಿಗೆ ಜಾಗವೇ ಇರಲಿಲ್ಲ. ಆದರೆ ರೋಹಿಣಿ ಸಮಾಜದ ನಡುವೆ ಸಮಾಜಕ್ಕಾಗಿ ಬದುಕಿದವಳು, ಅವಳ ದಾಪಂತ್ಯದ ಗೀತೆಯಲ್ಲಿ ಮೂಡಿದ ಬಿರುಕು ಮುಚ್ಚಿ ಹೋಗುತ್ತದೆಯಾ? ಅಥವಾ ಇನ್ನಷ್ಟು ದೊಡ್ಡ ಬಿರುಕು ಮೂಡುತ್ತದೆಯಾ?, ಕತೆಗಾರ್ತಿ ರೇಷ್ಮಾ ಗುಳೇದಗುಡ್ಡಾಕರ್ ಅವರ ಹರಿವಿನಗುಂಟ ಕತೆಯ ಸಂಚಿಕೆಗಳನ್ನು ತಪ್ಪದೆ ಓದಿ…

ಮುಂದಿನ ಭಾಗ –

ವಿವಾಹದ ನಂತರ ಶರತ್ ಬಳಿ ಸಾಮಾಜಿಕ ಸೇವೆ ಮುಂದುವರೆಸುವ ಉದ್ದೇಶವನ್ನು ಹಂಚಿಕೊಂಡಾಗ ಕರೆಳಿ ಕೆಂಡವಾಗಿದ್ದ ಶರತ್ ನ ಮತ್ತೊಂದು ಮುಖದ ದರ್ಶನದ ಅವಳಿಗಾಗಿತ್ತು. ‘ನಿನ್ನ ಕೆಲಸ ನೋಡಿಯೇ ವಿವಾಹವಾದೆ ಹೊರತು…. ನಿನ್ನ ಚೆಂದ ಮಣ್ಣು ಮಸೀ ಎಲ್ಲಾ ಇಲ್ಲ ” ಎಂದು ಅವನು ಉತ್ತರಿಸಿದಾಗ …!?? ಮೌನದಿಂದಲೇ ಆ ಬೆಂಕಿಯ ಮಳೆಯನ್ನು ಸಹಿಸಿದಳು ರೋಹಿಣಿ.

ಬಾಲ್ಯಂದಿದಲೂ ಹಣ, ಆಸ್ತಿಗಳ ನಡುವೆ ಬದುಕಿದ್ದ ಶರತ್ ತಾನೂ ಸ್ವಂತವಾಗಿ ಮನೆ, ಹೊಲ ಮಾಡಿ ತನ್ನದೆ ಸಾಮ್ರಾಜ್ಯ ಕಟ್ಟ ಬೇಕು ಎಂಬುದೇ ಅವರ ಜೀವನದ ಗುರಿಯಾಗಿತ್ತು. ಪ್ರತಿಯೊಂದಕ್ಕೂ ಲೆಕ್ಕಾಚಾರ ಹಾಕಿ ಅಳೆದು ತೂಗುವ ಅವನಿಗೆ ಸಂತಸ ಎಂದರೆ ದೊಡ್ಡಸ್ತಿಕೆ, ಹಣ ಇಷ್ಟೇ ಹೊರತು ಅವನ ಡಿಕ್ಷನರಿಯಲ್ಲಿ ಭಾವನೆ, ಆದರ್ಶ, ಸ್ನೇಹ, ಒಲವಿಗೆ ಜಾಗವೇ ಇರಲಿಲ್ಲ.

ಫೋಟೋ ಕೃಪೆ : thenewsminute

ಅದಗ್ಯೊ ಹೊರ ಜಗತ್ತಿಗೆ ಅವನು ತಾನು “ಆದರ್ಶ ಶಿಕ್ಷಕ ” ಎಂಬ ಹಣೆಪಟ್ಟಿಯನ್ನು ಮಾತಿನ ಕೌಶಲ್ಯದ ಮೂಲಕವೇ ಪಡೆದಿದ್ದ , ಜನರನ್ನು ಹಚ್ಚಿಕೊಂಡರು ತನ್ನದೇ ಆದ ಮಾನದಂಡಗಳನ್ನು ಗುರುತಿಸಿ ಸ್ನೇಹ ಮಾಡುತ್ತಿದ್ದ. ಹೊರತು ಭಾವನೆಗಳಿಂದ ಅಲ್ಲ. ಇಂತಹ ಪತಿಯಿಂದ ರೋಹಿಣಿಯ ಬದುಕು ಬೆಂಕಿ ಇಲ್ಲದೆ ಹತ್ತಿ ಉರಿಯಿತು. ತನ್ನ ಭಾವನೆಗಳನ್ನು ಹಂಚಿಕೊಳ್ಳುವ ಸಮಾನ ಮನಸ್ಕ ಗೆಳೆಯ ಬೇಕು ಎಂದು ಅವಳು ಹಂಬಲಿಸಿದ್ದು ಒಂದೆಡೆಯಾದರೆ, ಸಮಾಜ ಸೇವೆಯ ಬಾಗಿಲು ಶಾಶ್ವತವಾಗಿ ಮುಚ್ಚಿದ್ದು, ಎಲ್ಲವು ಅವಳನ್ನು ಜರ್ಜರಿತಗೂಳಿಸಿದ್ದವು. ಆದರೆ ಹೊರ ಜಗತ್ತಿಗೆ ಇದ್ಯಾವುದರ ಸುಳಿವು ಕಾಣದಂತೆ ಶರತ್ ಒಂದು ಸುಂದರ ಕೋಟೆಯನ್ನೆ ಕಟ್ಟಿದ್ದ. ಆ ಕೋಟೆಯ ಕೆಡವಲು ರೋಹಿಣಿಗೆ ಅಸಾಧ್ಯವಾಗಿತ್ತು.

ಒಮ್ಮೊಮ್ಮೆ ಈ ಬದುಕಿಗೆ ಯಾವುದು ಮುಖ್ಯ ಎಂದು ರೋಹಿಣಿಗೆ ದ್ವಂದ್ವವಾಗುತ್ತಿತ್ತು ವೃತ್ತಿಯೇ?, ಮಕ್ಕಳೇ?,  ಸಿದ್ದಾಂತಗಳೇ ? ಯಾವುದರ ಹಿಂದೆ ಹೊರಟರೂ ನೆಮ್ಮದಿ, ತೃಪ್ತಿ ಸಿಗದು. ಅಂದರ ಹಿಂದಿನ ಓಟ ನಿಲ್ಲಿಸಿರಲಿಲ್ಲ. ಎಲ್ಲಾ ಬೇಕೆಂದು ಓಡುತ್ತಾ ನಾವು ನಿಂತ ನೆಲವನ್ನೆ ಮರೆಯುತ್ತಾ ಸಿಕ್ಕು ಹಾಕಿಕೊಂಡು ಒದ್ದಾಡುವುದೇ ಈ ಜೀವನವೇ? ಎಂದು ಗಮ್ಯವಾಗಿ ಅವಳ ಯೋಚನೆಗಳು ಮನದಾಳದಲ್ಲಿ ಭವಿಷ್ಯವನ್ನು ವಿಶ್ಲೇಷಣೆ ಮಾಡುತ್ತಿರುತ್ತವೆ.

ಇದೇಲ್ಲಾ ಇದ್ದರು ರೋಹಿಣಿ ಶಾಲೆಯಲ್ಲೆ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡುತ್ತಿದ್ದಳು. ಪಠ್ಯೇತರ ಚಟುವಟಿಕೆಗಳಲ್ಲಿ ಮಕ್ಕಳಿಗೆ ಮಾರ್ಗದರ್ಶನ ನೀಡುತ್ತಾ ಅವರಿಗೆ ಗೆಳತಿಯಾಗಿ, ತಾಯಿಯಾಗಿ ಸಹ ಶಾಲೆಯಲ್ಲಿ ರೋಹಿಣಿ ಹೆಸರಾಗಿದ್ದಳು. ತನಗೆ ಹೆಣ್ಣು ಮಗು ಇಲ್ಲ ಎಂಬ ನೋವನ್ನು ಶಾಲಾ ಮಕ್ಕಳಲ್ಲಿ ಮರೆತಳು. ತನ್ನ ಸಂಬಳದ ಅರ್ಧದಷ್ಟು ಭಾಗವನ್ನು ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಮೀಸಲು ಇಟ್ಟು ಈ ಮುಖಾಂತರ ತನ್ನ ಸಮಾಜ ಸೇವೆಯನ್ನು ಮುಂದುವರೆಸಿದ್ದಳು. ಶರತ್ ನ ಅಡ್ಡ ಗೋಡೆಯ ಲೆಕ್ಕಿಸದೆ, ಅವನ‌ ಮಾತುಗಳಿಗೆ “ಜಡವಾಗಿ ” ಮನೆಯಲ್ಲಿ ಇರುತ್ತಿದ್ದಳು .

(ಮುಂದುವರೆಯುತ್ತದೆ…)


  • ರೇಶ್ಮಾಗುಳೇದಗುಡ್ಡಾಕರ್
0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW