ನಮ್ಮ ಮಹಾಬಲೇಶ್ವರ ಪ್ರವಾಸದಲ್ಲಿ ನಾವು ಉಳಿದುಕೊಂಡ ಮನೆಯೊಡತಿ ‘ಹೇತಾ ಪಂಡಿತ್’ ಪುರಾತನ ಕಲೆ, ವಾಸ್ತುಶಾಸ್ತ್ರದ ಕ್ಷೇತ್ರದಲ್ಲಿ ಗೋವಾದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ಜಾನಪದ ಕ್ಷೇತ್ರದ ತೊಡಗುವಿಕೆಯ ಕುರಿತು ಗೊತ್ತಾದದ್ದು ಈ ಪುಸ್ತಕದಿಂದ ನಾವು ಅಲ್ಲಿಂದ ಹೊರಡುವಾಗ ಮನೆಯ ಮ್ಯಾನೇಜರ್ ಉಡುಗೊರೆಯಾಗಿ ಕೊಟ್ಟ ಪುಸ್ತಕವಿದು. – ಕಿರಣ ಭಟ್, ಮುಂದೆ ಓದಿ …


ಕರುಣೆಯೆದೆಯ ಗಿಡುಗವೂ ಭುಜಂಗನೆಂಬ ನಾಗನೂ
ಅಯ್ಯೊ ರಾಮಾ, ಅಯ್ಯೋ ರಾಮಾ
ಕಣ್ಣು ಮುಚ್ಚಿ ಹೊಯ್ಯತಿದೆ ಮಳೆ
ದೊರೆ ಭುಜಂಗ ದೊರೆ ಭುಜಂಗ
ಬೆಟ್ಟದಡಿಗೆ ಬಂದಿದಾನೆ
ಜೋರು ಮಳೆಗೆ ಜಾರಿ ಜಾರಿ
ಉರುಳಿ ಉರುಳಿ ಬಿದ್ದಿದಾನೆ
ಗರುಡ ಹಾವ ಕಂಡಿದಾಳೆ
ದೊರೆಯ ಬಳಿಗೆ ಹಾರಿದಾಳೆ
ಅಕೆಯೆದೆಯ ತುಂಬ ತುಂಬ
ಪ್ರೀತಿ ಹಾಲ ಹಾಲ ಹೊಳೆ
ಜಾರಿನಲ್ಲಿ ನೋಯುವವನ
ನೀರಿನಲ್ಲಿ ತೋಯುವವನ
ಕರುಣೆಯಿಂದ ನೋಡಿದಾಳೆ
ನೀರಿನಿಂದ ಎತ್ತಿದಾಳೆ
ಗೂಡಿನೊಳಗೆ ಒಯ್ದು ಅವನ
ಗರಿಗಳಿಂದ ಒರೆಸಿದಾಳೆ
ಹಾಲು ಜೇನು ಕೊಟ್ಟು ಅವನ
ಹಸಿವ ಬೇನೆ ನೀಗಿದಾಳೆ
ಎಂಥ ಕರುಣೆ ಎಂಥ ಕರುಣೆ
ಗುಡ್ಡಗಾಡ ಹಕ್ಕಿಯದು
ಭೂಮಿತಾಯ ಹೋಲುವಂಥ
ಹರವಿನೆದೆಯ ಪಕ್ಷಿಯದು
- ಕಿರಣ ಭಟ್ (ನಾಟಕಕಾರರು, ರಂಗಭೂಮಿ ಕಲಾವಿದರು, ನಿರ್ದೇಶಕರು), ಹೊನ್ನಾವರ.
