ಹಿಂದಿ ಭಾಷೆಯ ಮಹತ್ವವನ್ನು ಜಾಗೃತಿಗೊಳಿಸಲು ಸೆಪ್ಟೆಂಬರ್ 14 ರಂದು ಹಿಂದಿ ದಿವಸವನ್ನು ಆಚರಿಸಲಾಗುತ್ತದೆ. ಭಾರತ ಗಣರಾಜ್ಯದ ಅಧಿಕೃತ ಭಾಷೆಗಳಲ್ಲಿ ಒಂದಾಗಿ ಹಿಂದಿಯನ್ನು ಅಳವಡಿಸಿದ್ದು ಸ್ಮರಿಸುವ ದಿನವಾಗಿದೆ. ರಾಷ್ಟ್ರೀಯ ಹಿಂದಿ ಭಾಷಾ ದಿವಸದ ಬಗ್ಗೆ ಅವಿನಾಶ ಸೆರೆಮನಿ ಅವರು ಬರೆದ ಲೇಖನವನ್ನು ತಪ್ಪದೆ ಮುಂದೆ ಓದಿ…
ಭಾಷೆಗಳು ಪ್ರತಿಯೊಬ್ಬ ಮನುಜನ ಉಸಿರು. ಸಂವಹನ ನಡೆಸಲು ಅತಿಮುಖ್ಯವಾದುದು ಆಯಾ ಜನಾಂಗ, ಪ್ರಾಂತ್ಯ, ರಾಜ್ಯವಾರು ಆಧಾರದ ಮೇಲೆ ಭಾಷೆಗಳು ಜನ್ಮತಾಳಿವೆ. ಪ್ರತಿ ಭಾಷೆಗೂ ತನ್ನದೆಯಾದ ಇತಿಹಾಸ ಪರಂಪರೆ ಇದೆ. ಭಾಷೆಯನ್ನು ಕೂಡ ಸಂಭ್ರಮಿಸಬೇಕು ಎನ್ನುವ ಉದ್ದೇಶದಿಂದಲೆ ಭಾಷೆಗಳಿಗೂ ಒಂದು ದಿನ ಮೀಸಲಿಡಲಾಗಿದೆ. ಅದೇ ರೀತಿಯಲ್ಲಿ ಇಂದು ಅಂದರೆ ಸೆಪ್ಟೆಂಬರ್ 14 ರಂದು ಪ್ರತಿವರ್ಷ ರಾಷ್ಟ್ರೀಯ ಹಿಂದಿ ಭಾಷಾ ದಿವಸ ಆಚರಿಸಲಾಗುತ್ತದೆ. ಈ ದಿನ ಎಲ್ಲ ಶಾಲಾ ಕಾಲೇಜುಗಳಲ್ಲಿ ಉಪನ್ಯಾಸಗಳನ್ನು ಏರ್ಪಡಿಸುವ ಮೂಲಕ ಹಿಂದಿ ಭಾಷೆಯ ಅರಿವನ್ನು ಮೂಡಿಸಲಾಗುತ್ತದೆ.
ಹಿನ್ನೆಲೆ:
ಸೆಪ್ಟೆಂಬರ್ 14 ರಂದೆ ರಾಷ್ಟ್ರೀಯ ಹಿಂದಿ ದಿವಸ ಆಚರಿಸುವುದೇಕೆ ಅಂತ ಪ್ರಶ್ನೆ ಮೂಡುವುದು ಸಹಜ,1949ರಲ್ಲಿ ಸಂವಿಧಾನ ಸಭೆಯು ದೇವನಾಗರಿ ಲಿಪಿಯಲ್ಲಿ ಹಿಂದಿಯನ್ನು ಭಾರತದ ರಾಷ್ಟ್ರೀಯ ಭಾಷೆಯಾಗಿ ಅಧಿಕೃತವಾಗಿ ಅಳವಡಿಸಿಕೊಂಡಿದ್ದರ ಸವಿನೆನಪಿಗಾಗಿ ಪ್ರತಿವರ್ಷ ಈ ದಿನದಂದು ರಾಷ್ಟ್ರೀಯ ಹಿಂದಿ ದಿನವನ್ನು ಆಚರಿಸುವರು.
ಈ ದಿನದ ಪ್ರಮುಖವಾದ ಉದ್ದೇಶವೆಂದರೆ ಹಿಂದಿ ಭಾಷೆಯ ಬಗ್ಗೆ ಅರಿವು ಮುಡಿಸುವುದರ ಜೊತೆಗೆ ಬಳಕೆ ಮಾಡುವ ವಿಧಾನ, ಭಾಷಾ ಪರಂಪರೆ, ವಿವಿಧ ಜನಾಂಗಕೆ ಪರಿಚಯಿಸುವುದು, ಏಕತಾ ಭಾವ. ಮೂಡಿಸುವುದು.
ದೇಶದ ಹಿತ ಕಾಪಾಡುವಲ್ಲಿ ಸಾಂಸ್ಕೃತಿಕ ಅಭಿವ್ಯಕ್ತಿಯಲ್ಲಿ ಪಾತ್ರ, ಮಹತ್ವವನ್ನು ತಿಳಿಸುವುದೇ ಪ್ರಮುಖ ಉದ್ದೇಶ.
ಹಿಂದಿ ಭಾಷೆಯ ಮಹತ್ವ :
- ರಾಷ್ಟ್ರೀಯ ಏಕತೆಯ ಮೂಡಿಸಲು ಸಹಕಾರಿ
- ವ್ಯಾಪಾರ ವಾಣಿಜ್ಯ, ಸಂವಹನಕ್ಕೆ ಸಹಾಯ
- ಭಾರತದಲ್ಲಿ ಸುಮಾರು 45%ಜನರು ಈ ಭಾಷೆ ಮೇಲೆ ಅವಲಂಬಿತರಾಗಿದ್ದಾರೆ.
- ಭವ್ಯ ಇತಿಹಾಸ ಸಂಸ್ಕೃತಿ ಸಂಸ್ಕಾರ ಹಿನ್ನೆಲೆ ಹೊಂದಿರುವ ಭಾಷೆ
- ಉದ್ಯೋಗವಕಾಶಕ್ಕೆ ವಾಣಿಜ್ಯೋದ್ಯಮಕ್ಕೆ ಬಹುಮುಖ್ಯವಾಗಿದೆ.
- ಅಂತಾರಾಷ್ಟ್ರೀಯ ಸಂವಹನ ಮತ್ತು ರಾಜತಾಂತ್ರಿಕ ಭಾಷೆ ಎಂದು ಮನ್ನಣೆ ಪಡೆದಿದೆ
- ವಿಶ್ವಸಂಸ್ಥೆ ಗುರುತಿಸಿದ ಅಧಿಕೃತ ಭಾಷೆಗಳಲ್ಲಿ ಹಿಂದಿಯೂ ಕೂಡ ಒಂದು
- ಜನಾಂಗ, ಸರ್ವಧರ್ಮದವರ ನಡುವೆ ಬಾಂಧವ್ಯ ಬೆಸೆಯಲು ಸಹಕಾರಿ
- ವೈಜ್ಞಾನಿಕ ಮತ್ತು ಶೈಕ್ಷಣಿಕವಾಗಿ ಬಲು ಉಪಕಾರಿಯಾಗಿದೆ.
- ವಿದೇಶಿ ವ್ಯಾಪಾರ ನಡೆಸಲು ಮೂಲ ಭಾಷೆಯಾಗಿದೆ.
ಇವುಗಳಷ್ಟೇ ಅಲ್ಲದೆ ಹಿಂದಿ ಭಾಷೆಯು ಇನ್ನು ಅನೇಕ ಆಯಾಮಗಳಿಂದಲೂ ಮಹತ್ವವನ್ನು ಪಡೆದಿದ್ದು ಭವ್ಯ ಭಾರತದ ರಾಷ್ಟ್ರೀಯ ಭಾಷೆಯಾಗಿ ಆಡಳಿತ ಭಾಷೆಯಾಗಿ ಬಳಕೆ ಮಾಡುವರು.ಈ ಭಾಷೆ ಭಾರತಾಂಬೆಯ ಸಾಂಸ್ಕೃತಿಕ ಪರಂಪರೆಯ ಹೆಬ್ಬಾಗಿಲು.ರಾಷ್ಟ್ರೀಯ ಅಂತಾರಾಷ್ಟ್ರೀಯ ಸಂಬಂಧಗಳನ್ನು ಬೆಸೆಯುವಲ್ಲಿ ಈ ಭಾಷೆ ಮುಂಚೂಣಿಯಲ್ಲಿದೆ. ಒಟ್ಟಿನಲ್ಲಿ ಹಿಂದಿ ಭಾಷೆ ಸರ್ವ ರೀತಿಯಲ್ಲೂ ಏಳಿಗೆಗೆ ಪೂರಕವಾಗಿ ದೇಶದ ಆರ್ಥಿಕತೆಗೆ ಸ್ನೇಹಪರವಾಗಿದೆ ಆದ್ದರಿಂದ ಹಿಂದಿ ಬರೀ ಭಾಷೆಯಲ್ಲ ಇದು ಪ್ರತಿ ಕ್ಷೇತ್ರದ ನಾಡಿಮಿಡಿತ ದೇಶದ ವ್ಯವಹಾರಿಕ ಕ್ಷೇತ್ರದ ತುಡಿತ.
- ಅವಿನಾಶ ಸೆರೆಮನಿ
