ಎಲ್ಲಿಯೂ ಕೇಳರಿಯದ ಹೂಲಿಯ ಗತಕಾಲದ ವೈಭವದ ಕುರಿತು ಗುರು ಕುಲಕರ್ಣಿ ಅವರು “ಹರನ ಕೊರಳ ಹೂಮಾಲೆ- ಹೂಲಿ” ಅಂಕಣದ ಮೂಲಕ ಓದುಗರೊಂದಿಗೆ ಹಂಚಿಕೊಳ್ಳುತ್ತಿದ್ದಾರೆ ತಪ್ಪದೆ ಮುಂದೆ ಓದಿ…
ಡಾ. ಜೇಮ್ಸ್ ಬರ್ಜಸ್ ಕಂಡ ಹೂಲಿ :
ಡಾ. ಜೇಮ್ಸ್ ಬರ್ಜಸ್ ಭಾರತೀಯ ಪುರಾತತ್ವ ಶಾಸ್ತ್ರದ ಅಧ್ವರ್ಯುಗಳಲ್ಲಿ ಒಬ್ಬರು.
೧೮೩೨ರಲ್ಲಿ ಇಂಗ್ಲಂಡಿನಲ್ಲಿ ಜನಿಸಿದ್ದ ಡಾ. ಬರ್ಜಸ್, ಭಾರತಕ್ಕೆ ಬಂದು ಶಿಕ್ಷಣ ಇಲಾಖೆಯಲ್ಲಿ ಮೊದಲು ಕಲಕತ್ತೆಯಲ್ಲಿ, ನಂತರ ಮುಂಬೈಯಲ್ಲಿ ಕೆಲಸ ಮಾಡತೊಡಗಿದ್ದರು. ಆದರೆ ಈ ದೇಶದ ಅಗಾಧ ಪ್ರಾಚ್ಯ ಸಿರಿಯನ್ನು ನೋಡಿ, ಅವರಿಗೆ ಇತಿಹಾಸ-ಪ್ರಾಚ್ಯಶಾಸ್ತ್ರದಲ್ಲಿ ಆಸಕ್ತಿ ಹುಟ್ಟಿತು. ೧೮೭೨ರಲ್ಲಿ ಅವರು “ದಿ ಇಂಡಿಯನ್ ಆಂಟಿಕ್ವರಿ” ಎಂಬ ಖ್ಯಾತ ಪತ್ರಿಕೆಯನ್ನು ಸ್ಥಾಪಿಸಿದರು. ಹದಿಮೂರು ವರ್ಷಗಳ ಕಾಲ ಅದನ್ನು ನಡೆಸಿ, ಅದಕ್ಕೊಂದು ಭದ್ರ ಬುನಾದಿ ಹಾಕಿ ಕೊಟ್ಟರು. ಆ ಪತ್ರಿಕೆಯನ್ನು ಮುಂದೆ ಡಾ.ಫ್ಲೀಟ್, ಸರ್. ರಿಚರ್ಡ್ ಟೆಂಪಲ್ ಮುಂತಾದ ಪ್ರಬೃತಿಗಳು ನಡೆಸಿ ಅದಕ್ಕೆ ದೊಡ್ಡ ಹೆಸರು ತಂದು ಕೊಟ್ಟರು.
೧೯೭೩ರಲ್ಲಿ ಸರಕಾರ ಡಾ. ಬರ್ಜಸ್ ಅವರ ಆಸಕ್ತಿ-ಅಧ್ಯಯನ ಗಮನಿಸಿ ಅವರನ್ನು ಆರ್ಕಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾದ ಪಶ್ಚಿಮ ಭಾರತದ ಮುಖ್ಯಸ್ಥರನ್ನಾಗಿ ನೇಮಿಸಿತು. ವೃತ್ತಿ – ಪ್ರವೃತ್ತಿ ಒಂದೇಯಾದ ನಂತರ ಡಾ. ಬರ್ಜಸ್ ಆಸಕ್ತಿಯಿಂದ ಕೆಲಸ ಶುರುಮಾಡಿದರು, ಮೊಟ್ಟಮೊದಲಿಗೆ ಬಾಂಬೆ ಕರ್ನಾಟಕದ ಜಿಲ್ಲೆಗಳ ಪ್ರಾಚ್ಯ ಸರ್ವೇಕ್ಷಣ ಶುರುಮಾಡಿದರು – ಜನೇವರಿ ೧೫- ಮೇ ೧೯೭೪ರ ವರೆಗೆ ನಡೆದ ಸರ್ವೆಯ ವರದಿಯು ಜಾಲತಾಣದಲ್ಲಿ ಲಭ್ಯವಿದೆ – Report Of The First Seasons Operations In The Belgam and Kaladgi Districts January To May 1874.
ಸಂಪಗಾವ್ -ಬೈಲಹೊಂಗಲ – ಸವದತ್ತಿ – ಯಲ್ಲಮ್ಮನಗುಡ್ಡಗಳ ಸರ್ವೇಕ್ಷಣ ಮಾಡಿ ೧೯೭೪, ಫೆಬ್ರುವರಿ ೨೭ರಂದು ಹೂಲಿಗೆ ಬಂದ ಡಾ. ಬರ್ಜಸ್, ಇಲ್ಲಿಯ ಗುಡಿಗಳ ಅಭ್ಯಾಸ ಮಾಡಿ, ಫೋಟೋ ತೆಗೆದುಕೊಂಡರು. ಅವರು ಪ್ರಕಟಿಸಿದ ವರದಿಯಲ್ಲಿರುವ ಹೂಲಿಯ
ಪಂಚಲಿಂಗಪ್ಪನ ಗುಡಿಯ ಚಿತ್ರ ಮತ್ತು ನಕಾಶೆ:


ಡಾ. ಬರ್ಜಸ್ ಅವರು ತೆಗೆದ ಹೂಲಿಯ ಗುಡಿಗಳ ಚಿತ್ರಗಳನ್ನು ಬ್ರಿಟೀಷ್ ಲೈಬ್ರರಿಯವರು ಜಾಲತಾಣದಲ್ಲಿ ಒದಗಿಸಿದ್ದಾರೆ – ಲಿಂಕ್. ನೂರೈವತ್ತು ವರ್ಷಗಳ ಹಳೆಯ ಹೂಲಿಯ ಆ ಫೋಟೋಗಳು ನಿಮ್ಮ ಅವಗಾಹನೆಗಾಗಿ:
ಪಂಚಲಿಂಗಪ್ಪನ ಗುಡಿಯ ಪೂರ್ವದ ನೋಟ ಮತ್ತು ಉತ್ತರದ ನೋಟ:

(ವರದಿಯಲ್ಲಿ ಇದೇ ಚಿತ್ರದ ʼಬ್ಲಾಕ್ʼ ಅನ್ನು ಮುದ್ರಿಸಲಾಗಿದೆ)

ಕೆರೆದಂಡೆಯ ಅಂಧಕೇಶ್ವರ ಗುಡಿ(?) – ಹಿಂದೆ ಕಾಣಿಸತಾ ಇರೋದು ಮನಿಸಿದ್ದಪ್ಪನ ಗುಡ್ಡ (?)

ಕೆರೆದಂಡೆಯ ಭೀಮೇಶ್ವರ ಗುಡಿ(?)

ಗುಡ್ಡದಲ್ಲಿರುವ ತಾರಕೇಶ್ವರ ಗುಡಿ:

- ಗುರು ಕುಲಕರ್ಣಿ – ಧಾರವಾಡ ಜಿಲ್ಲೆಯ ಹಳ್ಳಿಯೊಂದರಲ್ಲಿ ಹುಟ್ಟಿದ ಲೇಖಕರು, ಓದಿದ್ದು ಎಲೆಕ್ಟ್ರೋನಿಕ್ಸ್ ಇಂಜಿನಿಯರಿಂಗ್ ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಈಗ . ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಜೊತೆಗೆ ಹವ್ಯಾಸಿ ಬರಹಗಾರರಾಗಿದ್ದು, ಪತ್ರಿಕೆಗಳಲ್ಲಿ ಲಲಿತ ಪ್ರಬಂಧಗಳು, ಸಣ್ಣ ಕಥೆಗಳು ಪ್ರಕಟವಾಗಿವೆ. “ದನಿಪಯಣ” ಎಂಬ ಊರು-ನಾಡುಗಳ ಇತಿಹಾಸ ತಿಳಿಸುವ ಪಾಡ್‌ಕಾಸ್ಟ್‌ನ ಕರ್ತೃ ಕೂಡಾ ಆಗಿದ್ದಾರೆ.
