‘ಹೊರಟ ದೋಣಿ’ ಕವನ

ಬೆಳಗೋ ರವಿಯ ಕಿರಣ ಗಗನ ತುಂಬಿ ನಿಂತಿದೆ. ಮೂಡಣ ಪಡುವಣ, ಚೆಲ್ಲಿ ರಂಗವಲ್ಲಿ ಬಿಡಿಸಿದೆ…ನಾಗರಾಜ ಬಿ.ನಾಯ್ಕ ಅವರ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…

ಕಡಲಿಗೆ ಹೊರಟಿದೆ ಪ್ರೀತಿ ದೋಣಿ
ತೆರೆ ತೆರೆಯ ದಾಟಿ
ಒಲವ ಮಾತಿಗೆ ಮಂಟಪ ಕಟ್ಟಿ
ಮನದಿ ನಗುವಿರಿಸಿ

ಹರಿವು ಸಹಜ ಅರಿವು ನಿಜ
ಜಗದೊಳಗೆ ಬದುಕಲು
ತೆರೆ ತೆರೆಯ ದಾಟಿ ಮುಂದೆ
ಮನಸೊಳಗೆ ಉಳಿಯಲು

ಬೆಳಗೋ ರವಿಯ ಕಿರಣ
ಗಗನ ತುಂಬಿ ನಿಂತಿದೆ
ಮೂಡಣ ಪಡುವಣ
ಚೆಲ್ಲಿ ರಂಗವಲ್ಲಿ ಬಿಡಿಸಿದೆ

ಓಡೋ ದೋಣಿ ಮಿಂಚೋ ಮೀನು
ಮುಗಿಲ ರಾಶಿ ನೋಟಕೆ
ಕಡಲ ಒಳಗೆ ಬೆಳ್ಳಿ ಗೆಜ್ಜೆ
ಎಳೆ ಮೀನ ಮರಿಯ ಹೆಜ್ಜೆ

ಹೊರಟ ದೋಣಿಗೆ ಹುಟ್ಟು ನಂಟು
ಬೆವರು ಬದುಕು ಒಲವ ಗಂಟು
ಅನ್ನ ಗಂಜಿ ಕಾಡೋ ಹಸಿವೆಗೆ
ಉಂಡ ಮನವದು ಸಗ್ಗದರಿವಿಗೆ


  • ನಾಗರಾಜ ಬಿ.ನಾಯ್ಕ- ಹುಬ್ಬಣಗೇರಿ, ಕುಮಟಾ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading