ಹೊಸ ವರ್ಷ (ಭೋಗ ಷಟ್ಪದಿ) – ಚನ್ನಕೇಶವ ಜಿ ಲಾಳನಕಟ್ಟೆ

‘ಸುಗ್ಗಿ ಕಾಲದೊಳಗೆ ಕಾದು…ನುಗ್ಗಿ ಬರುವ ವರುಷವಿಹುದು’…ಸುಂದರ ಸಾಲುಗಳು ಕವಿ ಚನ್ನಕೇಶವ ಜಿ ಲಾಳನಕಟ್ಟೆ ಲೇಖನಿಯಲ್ಲಿ ಅರಳಿದ ಕವನ, ತಪ್ಪದೆ ಓದಿ…

ಅರಳಿ ಹೊಸತು ವರುಷ ಮರಳಿ
ಹೊರಳಿ ಹರುಷ ಧರೆಯಲುರುಳಿ
ಕರೆಯುತಿಹುದು ಕರವ ಬೀಸಿ ಹಿಡಿಯುತಪ್ಪುತ
ಅರಸುತರಸಿ ಸಿಹಿಯನುಣಿಸಿ
ಸಿರಿಯ ಸೊಬಗು ಜಗದೊಳಿಳಿಸಿ
ಬೆರೆಸುತಿಹುದು ಮನಗಳನ್ನು ಖುಷಿಯನುಣಿಸುತ

ನೋವನಳಿಸಿ ನಲಿವನಿಳಿಸಿ
ಬೇವು ಪಡೆದು ಬೆಲ್ಲವೆರೆದು
ಭಾವ ವೀಣೆ ನುಡಿಸಿ ಕುಣಿಸಿ ಹರಸುತಿರುವುದು
ಜಾವ ಮಾಗಿ ಕಾಲವಿರಲು
ಸೇವೆ ಮಾಡುತಿಹುದು ಕರೆದು
ಜೀವ ಜೀವ ಬೆಸುಗೆ ಹಾಕಿ ಕುಣಿಸುತಿರುವುದು

ಸುಗ್ಗಿ ಕಾಲದೊಳಗೆ ಕಾದು
ನುಗ್ಗಿ ಬರುವ ವರುಷವಿಹುದು
ಸಗ್ಗವಿದುವೆ ರೈತ ಜನಕೆ ಹೊಸತು ವರ್ಷವು
ಹಿಗ್ಗಿ ಹಿಗ್ಗಿ ಬರುವ ವರುಷ
ತಗ್ಗಿ ಬಗ್ಗಿ ಹರುಷದಲ್ಲಿ
ಹುಗ್ಗಿಮಾಡಿ ತಿನ್ನುತಿಹರು ಜಗಕೆ ಹರ್ಷವು.


  • ಚನ್ನಕೇಶವ ಜಿ ಲಾಳನಕಟ್ಟೆ.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading