ಯಾರಿಗೆ ಯಾರುಂಟು ಒಣ ಡಂಭಾಚಾರದ, ಬಂಡಾಟ ಪ್ರತಿ ದಿನ ಅದೇ ಮಾತು, ಕಣ್ಣು ಒದ್ದೆಯಾದ ಈ ದಿನ…ಕವಿ ನಟರಾಜ್ ಸೋನಾರ್ ಅವರ ಲೇಖನಿಯಲ್ಲಿ ಅರಳಿದ ಒಂದು ಸುಂದರ ಕವನ, ತಪ್ಪದೆ ಓದಿ…
ಕಣ್ಣು ಒದ್ದೆಯಾದ ಈ ದಿನ
ಇಲ್ಲದಿಲ್ಲ ! ಅನುದಿನದ ಅನುಭಾವ
ದಿನವೂ ದುಡಿದ ದೇಹ ಮನಸ್ಸು
ಸದಾ ಹೊಂದಿಸಿಕೊಳ್ಳುವ ಆರ್ಥಿಕತೆ
ಹೊಸ ವರುಷದ ಹಿಂದಿನ ದಿನಗಳ
ಮೆಲುಕು ಹಿಂದಿರುಗಿ ನೋಡಿದಾಗ
ನೋವುಂಡ ಹೃದಯದ ಮಾತುಗಳು
ಕಣ್ಣು ಒದ್ದಯಾದ ದಿನಗಳ ಆಂಕ್ರಂದನ
ವ್ಯವಸ್ಥೆಯ ನೈಜತೆ ಅರಿಯದೆ ಕಟಕಿ
ಕುಟುಕುವ ಮೊನಚು ನುಡಿಗಳ ವೇದನೆ
ಸದಾ ಕಣ್ಣು ಒದ್ದೆಯಾದ ಈ ದಿನ
ಅದೇನು ಚೆಂದ ಪ್ರತಿದಿನವೂ ಕದನ
ಅಡುವ ಮಾತಿನ ತೂಕ ಇಳಿಸಿದ ಮನ
ಅಂದರೆ ಏನಾದೀತು ? ಎಂದು ತಿಳಿಯದ
ಬಿರುಸು ಮಾತಿನ ಸಣ್ಣ ಮನಸ್ಸಿನ ದುರಳತನ
ಎಷ್ಟೊಂದು ಮಾತಿನ ಚಪಲ ತೀರದಷ್ಟು ನಿಷ್ಪಲ
ನೊಂದು ಕೊಂಡ ಮನ ಮಮ್ಮಲಮರಿಗಿದ
ಅ ಕ್ಷಣ ಕಣ್ಣು ಒದ್ದೆಯಾದ ಈ ದಿನ
ಯಾರಿಗೆ ಯಾರುಂಟು ಒಣ ಡಂಭಾಚಾರದ
ಬಂಡಾಟ ಪ್ರತಿ ದಿನ ಅದೇ ಮಾತು
ಕಣ್ಣು ಒದ್ದೆಯಾದ ಈ ದಿನ
ದಿನಗಳು ಉರುಳಿದಂತೆ ಹಗಲು ರಾತ್ರಿ
ಯಾದಂತೆ ಮಾಡದ ತಪ್ಪಿಗೆ ತಪ್ಪೊಪ್ಪಿಗೆಯಂತೆ
ಹೃದಯ ಸಂತೈಸಿಕೊಳ್ಕುವ ಸುದಿನ
ಮತ್ತೇ ಕಣ್ಣು ಒದ್ದೆಯಾದ ಈ ದಿನ
ಏಕೆ ಅಷ್ಟೊಂದು ಧಾಷ್ರ್ಟದ ಭಾವ
ಬರುವಾಗ ನೀ ನೇನಾದರೂ ತಂದಿರುವೆಯಾ
ಯಾಕೆ ಈ ದೊಡ್ಡಸ್ತಿಕೆಯ ಅಹಂಕಾರ
ರೋಷ ಕಿಚ್ಚು ಸಿಟ್ಟು ಸೆಡುವು ಕಾಡುವುದು
ಮುಂದೊಂದು ದಿನ
ಸೂಕ್ಷ್ಮ ಮನಸ್ಸಿನ ತಿಳಿಗೊಳವನು
ಕಣ್ಣು ಒದ್ದಯಾದ ಈ ದಿನ
ಪ್ರೀತಿಸು ಮಣ್ಣನ್ನು ಧ್ಯಾನಿಸು ಜೀವನವನ್ನು
ಅದೇ ನಿನ್ನ ಬಾಳಿನ ಕಣ್ಣ ತರೆಸುವ ಸುದಿನ
ಕಣ್ಣು ಒದ್ದೆಯಾದ ಈ ದಿನ
- ನಟರಾಜ್ ಸೋನಾರ್ – ಮಾಜಿ ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ, ಕುಷ್ಟಗಿ.
