‘ಪ್ರೇಯಸಿ’ ಕವನ – ಡಾ. ಲಕ್ಷ್ಮಣ ಕೌಂಟೆ

ಪ್ರೇಯಸಿ ಇಲ್ಲದೆ, ಪ್ರೇಮಿ ಉಳಿಯುತ್ತಾನೆ ಹೇಗೆ?…ಪ್ರೇಮ ಕವಿ ಡಾ. ಲಕ್ಷ್ಮಣ ಕೌಂಟೆ ಅವರ ಸುಂದರ ಕವನ ಓದುಗರ ಮುಂದಿದೆ, ತಪ್ಪದೆ ಓದಿ…

ನವಿಲೇ ಇಲ್ಲದ ಗರಿಗಳು
ನಲಿಯುತ್ತವೆ ಹೇಗೆ?
ಪ್ರೇಯಸಿ ಇಲ್ಲದೆ
ಪ್ರೇಮಿ ಉಳಿಯುತ್ತಾನೆ ಹೇಗೆ?
ಗರಿ ತೋರಿಸುತ್ತ
ಗಾಯಬ್ ಆಗದಿರು ಪ್ರಿಯೆ
ನೇರ ಎದೆಗೇ ಗಾಯವಾಗುತ್ತದೆ

ವಾಸಿ ಮಾಡುವುದಕ್ಕೆ
ಮುಲಾಮೇ ಇಲ್ಲ ನನ್ನಲ್ಲಿ..
ಹಚ್ಚಿದರೆ ನೀನೇ ಹಚ್ಚಬೇಕು..
ಮಾಗಬಹುದೇನೋ ಗಾಯ
ನಿನ್ನ ಮಾಂತ್ರಿಕ ಬೆರಳ ಸ್ಪರ್ಶಕೂ

ಒಲುಮೆ ಇರಲಿ
ಮಾಯಾಮೃಗದಂತೆ
ಮಾಯವಾಗದಿರು..
ಪ್ರೇಮದೇವತೆ
ಕೊಡಬೇಕಿರುವುದು
ವರವೇ ಹೊರತು ಶಾಪವಲ್ಲ


  • ಡಾ. ಲಕ್ಷ್ಮಣ ಕೌಂಟೆ – ಕವಿ, ಲೇಖಕರು, ಉಪನ್ಯಾಸಕರು, ಕಲಬುರಗಿ.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading