ನನ್ನ ಗೆಳೆಯ, ನಾಡಿನ ಧೀಮಂತ ಕವಿ ಡಾ. ಹೆಚ್ ಎಸ್.ವೆಂಕಟೇಶ ಮೂರ್ತಿಯವರ ಹುಟ್ಟಿದ ಹಬ್ಬ ಈ ದಿನ. ಆವರಿಗೆ ಶುಭಾಶಯಗಳನ್ನು ಕೋರುತ್ತಾ ಎರಡು ವರ್ಷಗಳ ಹಿಂದೆ ಅವರನ್ನು ಕುರಿತು ನಾನು ಬರೆದ ಕವನವನ್ನು ತಪ್ಪದೆ ಓದಿ – ಮೇಗರವಳ್ಳಿ ರಮೇಶ್.
ಹೆಚ್.ಎಸ್.ವೆ೦ಕಟೇಶ ಮೂರ್ತಿ
ಅಕ್ಷರದ ಸಾಲು ಸಾಲುಗಳಲ್ಲಿ ಹಿಡಿದಿಡುವು
ದಸದಳಆ ಮೇರು ಹಿಮ ಬೆಟ್ಟವನ್ನ.
ದೀರ್ಘ ಧ್ಯಾನದಮೌನ ಮುರಿದರೆ ಸಾಕು
ಪುಟ ಪುಟಗಳಲಿಪಟ ಪಟನೆ ಬಿರಿವ ಕಾವ್ಯ
ಜುಳು ಜುಳಿಸಿ ಹರಿದ ತೊರೆ ನದಿಯಾಗಿ ಭೊರ್ಗರೆವ
ಜಲಪಾತ. ಮಲ್ಲಿಗೆಯ ಸೌಗ೦ಧ
ತೀಡಿ ಬೀಸುವ ತ೦ಗಾಳಿ ಕೊಳಲ
ಪ್ರೇಮದ ಕೃಷ್ಣ; ದಾವಣಿಯ ಮುಗುದೆ ರಾಧೆ.
ಉತ್ತರಾಯಣದ ಕ೦ಬನಿ ಧಾರೆ ಬದುಕ ಬೇರಿಗೆಹರಿದು
ಹೊಸ ಚಿಗುರು, ಹೂ, ಹಣ್ಣು, ಕೋಗಿಲೆಯ ಹೊಸ ಹಾಡು.
ಶ೦ಖದೊಳಗಿನ ಮೌನ ಕವಿತೆಯಾಗುವ ಹೊತ್ತು
ನೆರೆತ ತಲೆಗೂದಲಲಿ ಎ೦ಥ ಮಿ೦ಚು!
ಸಾಗುತಿದೆ ಹೀಗೇ ಶೋಧಿಸುತ ಪಯಣ
ಸಿ೦ದಾ ಬಾದನ ಕಾವ್ಯ ನೌಕೆಯ ಯಾನ!
- ಮೇಗರವಳ್ಳಿ ರಮೇಶ್ – (ನಿವೃತ್ತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಧಿಕಾರಿ)
