ಹೂವಿನ ತೆರದಲಿ ಅರಳುತ ಅರಳುತ…ಕವಿಯತ್ರಿ ರೇಷ್ಮಾ ಉಮೇಶ ಅವರು ಲೇಖನಿಯಲ್ಲಿ ಅರಳಿದ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…
ಹುಣ್ಣಿಮೆ ಚಂದಿರ
ಹುಣ್ಣಿಮೆ ರಾತ್ರಿಯಲಿ
ಬೆಳಕನು ಚೆಲ್ಲುತ
ಬಾನಲಿ ಚಂದಿರ ಮೂಡುವನು
ಮೆಲ್ಲಗೆ ಮೆಲ್ಲಗೆ
ಏರುತ ಏರುತ
ಎಲ್ಲೆಡೆ ಬೆಳಕನು ಬೀರುವನು.
ಹೂವಿನ ತೆರದಲಿ
ಅರಳುತ ಅರಳುತ
ಕಣ್ಣಿಗೆ ಮುದವನೆ ನೀಡುವನು
ನೋಡುತ ನೋಡುತ
ನಿಂತರೆ ಸಾಕು
ನಮ್ಮಯ ಕಣ್ಣನು ಕುಕ್ಕುವನು
ಓಡುತ ನೋಡುತ
ನಡೆಯುತಲಿದ್ದರೆ
ಓಡುತ ನಡೆಯುತ ಸಾಗುವನು
ಇರುಳಲು ನಗೆಯನು
ಸೂಸುತ ಸೂಸುತ
ಎಲ್ಲರ ಮನವನು ಕದಿಯುವನು
ಹೆತ್ತವರಾರು
ಈ ಸುಂದರ ವದನನ
ಬಲ್ಲಿಹರೇನು ಜಗದೊಳಗೆ?
- ರೇಷ್ಮಾ ಉಮೇಶ – ಶಿಕ್ಷಕರು ಶ್ರೀವಲಿ ಪ್ರೌಢ ಶಾಲೆ, ಚಿತ್ರಾಪುರ, ಶಿರಾಲಿ.