ಪಾರಂಪರಿಕ ವೈದ್ಯರಾದ ಸುಮನಾ ಮಳಲಗದ್ದೆ ಅವರು ವೀರ್ಯವೃದ್ಧಿಗೆ ಮನೆ ಮದ್ದಿನ ಕುರಿತು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ವೀರ್ಯವೃದ್ಧಿಗೆ ಮನೆ ಮದ್ದು ಹುಣಸೆ ಬೀಜ. ಹುಣಸೆ ಹಣ್ಣು ಖರೀದಿ ಮಾಡಿದಾಗ ಅದರೊಂದಿಗೆ ಬೀಜಗಳು ಸಹಜ ಸಹಜವಾಗಿ ಕಸದ ಬುಟ್ಟಿಗೆ ಸೇರುವ ಕಸದಲ್ಲಿ ಇರುವ ಅಮೃತ ನೋಡಿ.

*ಬೀಜವನ್ನು ಹುರಿದು ಮೇಲಿನ ಸಿಪ್ಪೆ ತೆಗೆದು ನುಣ್ಣಗೆ ಪುಡಿ ಮಾಡಿ ಅದಕ್ಕೆ ಬೆಲ್ಲ ಸೇರಿಸಿ ಊಟದ ನಂತರ ಜಗಿದು ತಿನ್ನಿ.
*ಹುರಿದ ಬೀಜದ ಪುಡಿಯನ್ನು ಚಹಾ ಮಾಡಿದಂತೆ ಮಾಡಿ ಕುಡಿಯಿರಿ.
*ಹುರಿದ ಬೀಜಗಳನ್ನು ಬಾಯಿಗೆ ಹಾಕಿ ಜಗಿದು ತಿನ್ನಿ.
ಇದು ಪ್ರಕೃತಿ ಸಹಜವಾಗಿ ವೀರ್ಯ ವೃದ್ಧಿ ಆಗುತ್ತದೆ. ಪುರುಷತ್ವ ಹೆಚ್ಚಿಸಲು ಸುಲಭದ ಉಪಾಯ. ಈಗ ಹಲಸಿನ ಹಣ್ಣಿನ ಸೀಜನ್ ನಲ್ಲಿ ಧಾರಾಳ ಹಣ್ಣು ತಿನ್ನುತ್ತೇವೆ ಬೀಜ ಬೀದಿ ಪಾಲು.ದಿನಕ್ಕೆ ನಾಲ್ಕರಿಂದ ಐದು ಬೀಜವನ್ನು ಸ್ವಲ್ಪ ಚಾಕುವಿನಿಂದ ಚುಚ್ಚಿ ಕೊಳ್ಳಿ ಇಲ್ಲವಾದರೆ ಸಿಡಿಯುತ್ತದೆ.ನಂತರ ಹುರಿಯಿರಿ ಸಿಪ್ಪೆ ತೆಗೆದು ಸ್ವಲ್ಪ ಕುಟ್ಟಿ ತಾಟೆ ಬೆಲ್ಲ ಸೇರಿಸಿ ತಿನ್ನಿ ನಿಮ್ಮ sperm count ಹೆಚ್ಚಾಗುತ್ತದೆ.ಇದಕ್ಕಾಗಿ ವಿಷೇಶವಾಗಿ ತಯಾರಿಸಿದ ಔಷಧಿ ಅಗತ್ಯ ಇದ್ದರೆ ನನ್ನನ್ನು ಸಂಪರ್ಕಿಸಬಹುದು.
- ಸುಮನಾ ಮಳಲಗದ್ದೆ – ಪಾರಂಪರಿಕ ವೈದ್ಯರು
