ಮರೆಯಲಾಗದ ವಿಮೋಚನಾ ದಿನ!

ಸೆಪ್ಟೆಂಬರ್ 17 ಕಲ್ಯಾಣ ಕರ್ನಾಟಕ ಜನತೆಯ ಪಾಲಿಗೆ ಮರೆಯಲಾಗದ ದಿನ. ನಿಜಾಮನ ಕಪಿಮುಷ್ಠಿಯಿಂದ ವಿಮೋಚನೆಗೊಂಡ ಪುಣ್ಯ ದಿನ. ದೇಶಕ್ಕೆ 1947 ಆಗಸ್ಟ್ 15 ರಂದು ಸ್ವಾತಂತ್ರ ಸಿಕ್ಕರೂ ಕಲ್ಯಾಣ (ಹೈದ್ರಾಬಾದ್) ಕರ್ನಾಟಕ ಭಾಗ ನಿಜಾಮನ ಕಪಿಮುಷ್ಠಿಯಿಂದ ಬಿಡುಗಡೆಗೊಂಡದ್ದು ಬರೋಬ್ಬರಿ ಒಂದು ವರ್ಷ ಮೂವತ್ತೆರಡು ದಿನಗಳ ನಂತರ. ಅಂದರೆ, 1948 ಸೆಪ್ಟೆಂಬರ್ 17 ರಂದು. ವಿಮೋಚನಾ ದಿನದ ಕುರಿತು ಶರಣುಗೌಡ ಪಾಟೀಲ್ ಅವರು ಬರೆದ ಈ ಲೇಖನವನ್ನು ತಪ್ಪದೆ ಮುಂದೆ ಓದಿ… 

ದೇಶಕ್ಕೇ ಸ್ವಾತಂತ್ರ್ಯ ಸಿಕ್ಕಿದ್ದರೂ ಕಲ್ಯಾಣ ಕರ್ನಾಟಕ ನಿಜಾಮರ ಹಿಡಿತದಲ್ಲಿತ್ತು. ಕಲ್ಯಾಣ ಕರ್ನಾಟಕ ಹಿಂದುಳಿದ ಪ್ರದೇಶ ಅಂತಾನೇ ಗುರುತಿಸಿಕೊಂಡಿದೆ. ಅಭಿವೃದ್ಧಿಯಲ್ಲಿ ಮಾತ್ರವಲ್ಲ. ಈ ಪ್ರದೇಶ ಸ್ವಾತಂತ್ರ ಪಡೆಯುವಲ್ಲಿಯೂ ಹಿಂದೆಯೇ ಉಳಿದಿತ್ತು. 1947 ಆಗಸ್ಟ್ 15 ರಂದು ಭಾರತ ಬ್ರಿಟೀಷರ ಗುಲಾಮಗಿರಿಯಿಂದ ಸ್ವಾತಂತ್ರ್ಯ ಪಡೆಯಿತು. ಆದರೆ, ಹೈದ್ರಾಬಾದ್ ನಿಜಾಮನ ಆಳ್ವಿಕೆಗೆ ಒಳಪಟ್ಟಿದ್ದ ಈಗಿನ ಕಲ್ಯಾಣ ಕರ್ನಾಟಕ ಪ್ರದೇಶ ಮತ್ತು ಆಂಧ್ರ, ಮಹಾರಾಷ್ಟ್ರದ ಕೆಲ ಪ್ರದೇಶಗಳು 1947 ರ ನಂತರವೂ ಸ್ವಾತಂತ್ರ್ಯಗೊಂಡಿರಲಿಲ್ಲ. ಹೈದ್ರಾಬಾದ್ ರಾಜ್ಯದ ನಿಜಾಮ ಮೀರ್ ಉಸ್ಮಾನ್ ಅಲಿ ಭಾರತದ ಒಕ್ಕೂಟದಲ್ಲಿ ವಿಲೀನವಾಗಲು ಸುತಾರಾಂ ಒಪ್ಪಲಿಲ್ಲ. ಭಾರತದ ಒಕ್ಕೂಟ ವ್ಯವಸ್ಥೆ ಒಪ್ಪದ ನಿಜಾಮರ ವಿರುದ್ಧ ಜನ ದಂಗೆ ಏಳಲಾರಂಭಿಸಿದರು. ಆದರೆ ದಂಗೆ ಎದ್ದ ಜನರನ್ನ ಹತ್ತಿಕ್ಕಲು ನಿಜಾಮನ ಮತಾಂಧ ಸೇನಾನಿ ಖಾಸಿಂ ರಜ್ವಿ ತನ್ನ

ರಜಾಕಾರ್ ಸಂಘಟನೆಯ ಮೂಲಕ ಅನಾಚಾರದ ಹಾದಿ ಹಿಡಿದಿದ್ದ. ರಜಾಕಾರರಿಂದ ಕೊಲೆ, ಲೂಟಿ, ಅತ್ಯಾಚಾರಗಳು ತೀವ್ರವಾದವು. ರಜಾಕಾರರ ವಿರುದ್ಧ ಹಳ್ಳಿ ಹಳ್ಳಿಗಳಲ್ಲಿ ಹೋರಾಟಗಳು ನಡೆದವು. ವಿಮೋಚನೆ ಹೋರಾಟದ ಪ್ರಮುಖರೆಂದರೆ, ಸ್ವಾಮಿ ರಾಮಾನಂದ ತೀರ್ಥ, ಕೊಲ್ಲೂರು ಮಲ್ಲಪ್ಪ, ಸರ್ದಾರ ಶರಣಗೌಡ, ಚಂದ್ರಶೇಖರ್ ಪಾಟೀಲ, ಡಿ. ಆರ್. ಅವರಾದಿ, ಜಗನ್ನಾಥ್ ರಾವ್ ಚಂಡ್ರಕಿ, ಚಟ್ನಹಳ್ಳಿ ವೀರಣ್ಣ, ಎಸ್. ಬಿ. ಅವದಾನಿ, ವಿಶ್ವನಾಥ ರೆಡ್ಡಿ ಮುದ್ನಾಳ, ಜೆ. ಕೆ ಪ್ರಾಣೇಶಾಚಾರ್ ಮುಂತಾದವರು ಸೇರಿದ್ದಾರೆ.

ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕರೂ ಈ ಭಾಗದಲ್ಲಿ ತ್ರಿವರ್ಣ ಧ್ವಜ ಹಿಡಿದು ಓಡಾಡುವದು ಕಷ್ಟವಾಗಿತ್ತು. ಯಾಕಂದ್ರೆ ರಜಾಕಾರರ ಕ್ರೌರ್ಯ ಎಲ್ಲೆ ಮೀರಿತ್ತು. ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಗೋರ್ಟಾ ಗ್ರಾಮದಲ್ಲಿ 200ಕ್ಕೂ ಹೆಚ್ಚು ಸ್ವಾತಂತ್ರ್ಯ ಹೋರಾಟಗಾರರನ್ನು ನಿಜಾಮರ ಕಟ್ಟಾಳುಗಳಾದ ರಜಾಕಾರರು ನಿರ್ದಯವಾಗಿ ಕೊಂದಿದ್ದರು. ಜನರ ಮೇಲೆ ಹಿಂಸಾಚಾರ ನಡೆಸುತ್ತಿದ್ದ. ರಜಾಕಾರರ ವಿರುದ್ಧ ಜನ ಕೂಡ

ರೊಚ್ಚಿಗೆದ್ದು ಅಲ್ಲಲ್ಲಿ ರಜಾಕಾರರನ್ನು ಕೊಂದು ಹಾಕಲು ಆರಂಭಿಸಿದರು, ಪರಿಸ್ಥಿತಿ ಕೈ ಮೀರತೊಡಗಿತು. ಹಿಂಸೆ ಕೊನೆಗಾಣಿಸಿ ನಿಜಾಮರ ಆಡಳಿತಕ್ಕೆ ಪೂರ್ಣ ವಿರಾಮ ಹಾಕಲು ನಿರ್ಧರಿಸಿದ ಉಕ್ಕಿನ ಮನುಷ್ಯ ಅಂದಿನ ಗೃಹ ಮಂತ್ರಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ‘ಆಪರೇಷನ್ ಪೋಲೋ’ ಹೆಸರಿನ ಪೋಲೀಸ ಕಾರ್ಯಾಚರಣೆ.


  • ಶರಣುಗೌಡ ಪಾಟೀಲ್

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading