ಭಾರತವನ್ನು ವಿಶ್ವವು ಏಕೆ ವಿಶೇಷ ಹಾಗೂ ವಿಶಿಷ್ಟ ರಾಷ್ಟ್ರವೆಂದು ಗುರುತಿಸುತ್ತದೆ ಎಂಬುದಕ್ಕೆ ಹತ್ತು ಹಲವು ಕುತುಹಲಕಾರಿ ಕಾರಣಗಳಿವೆ. ಅವುಗಳನ್ನು ನೋಡೋಣ..
- ಭಾರತ ದೇಶವು ೨೯ ರಾಜ್ಯ ಮತ್ತು ೭ ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡಿದೆ. ನಮ್ಮ ಪ್ರತಿಯೊಂದು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳು ತನ್ನದೇ ಆದ ಭಾಷೆ, ಸಾಂಪ್ರದಾಯಿಕ ಉಡುಗೆ, ಅಡುಗೆ ಹಾಗೂ ರೀತಿ-ರಿವಾಜುಗಳನ್ನು ಒಳಗೊಂಡಿದೆ. ಅಷ್ಟೇ ಅಲ್ಲದೆ ಬೀಜಗಣಿತ (algebra), ಸೊನ್ನೆ (number ‘0’), ಶ್ಯಾಂಪು, ಚದುರಂಗ(chess), ‘ಪೈ’ನ್ ಬೆಲೆ (value of pi) ಮತ್ತು ವಜ್ರದ ಗಣಿಗಾರಿಕೆಯನ್ನು(dimond mining) ವಿಶ್ವಕ್ಕೆ ಮೊಟ್ಟಮೊದಲಾಗಿ ಪರಿಚಯಿಸಿದ್ದು ನಮ್ಮ ಹೆಮ್ಮೆಯ ಭಾರತ.
- ಕ್ರಿಸ್ಟೋಫರ್, ಕೋಲಂಬಸ್ ಅವರು ಜಲಮಾರ್ಗದ ಮೂಲಕ ಅಮೆರಿಕವನ್ನು ಕಂಡುಹಿಡಿಯುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಭಾರತವನ್ನು ಕಂಡು ಹಿಡಿಯುತ್ತಾರೆ. ಅದು ಹದಿನೇಳನೇ ಶತಮಾನದ ಪೂರ್ವ ಕಾಲ ಅಂದು ನಮ್ಮ ದೇಶ ಸಂಪದ್ಭರಿತ ರಾಷ್ಟ್ರಗಳಲ್ಲಿ ಒಂದಾಗಿತ್ತು. ಕ್ರಿಸ್ಟೋಫರ್ ಮತ್ತು ಕೊಲಂಬಸ್ ನಮ್ಮ ದೇಶದ ಸಂಪತ್ತನ್ನು ಕಂಡು ಆಕರ್ಷಿತರಾದರು.
- ಭಾರತವು ತನ್ನ ೧,೦೦,೦೦೦ ವರ್ಷದ ಇತಿಹಾಸದಲ್ಲಿ ಯಾವುದೇ ದೇಶದ ಮೇಲೆ ಆಕ್ರಮಣ ಮಾಡಿಲ್ಲ.
- ವ್ಯಾಟಿಕನ್ ಸಿಟಿ ಮತ್ತು ಮೆಕ್ಕಾ ಈ ಎರಡು ಪ್ರಸಿದ್ಧ ತಾಣಗಳ ಒಟ್ಟು ಯಾತ್ರಿಕರಿಗಿಂತ ನಮ್ಮ ತಿರುಪತಿ ಬಾಲಾಜಿಗೆ ಮತ್ತು ಕಾಶಿ ವಿಶ್ವನಾಥನ ದೇಗುಲಗಳಿಗೆ ಬರುವ ಯಾತ್ರಿಕರ ಸಂಖ್ಯೆ ಹೆಚ್ಚಿನ ಸಂಖ್ಯೆಯಲ್ಲಿದೆ.
- ಭಾರತ ಮಾತ್ರ ಅಧಿಕ ಮಸೀದಿಗಳನ್ನು(೩,೦೦,೦೦೦) ಹೊಂದಿರುವ ರಾಷ್ಟ್ರವಾಗಿದೆ.
- ದೀಪಾವಳಿಯಲ್ಲಿ ಪಟಾಕಿಯನ್ನು ಕೊಳ್ಳಲು ಸರಿ ಸುಮಾರು ೩,೦೦೦ ಕೋಟಿಯಷ್ಟು ಹಣವನ್ನು ಭಾರತದ ಜನರು ವ್ಯಯಿಸುತ್ತಾರೆ.
- ಭಾರತದ ಲಕ್ನೋದಲ್ಲಿರುವ ‘ದ ಸಿಟಿ ಮಾಂಟೆಸ್ಸರಿ’ ಶಾಲೆಯು ೪೫,೦೦೦ ವಿದ್ಯಾರ್ಥಿಗಳನ್ನು ಹೊಂದಿದ್ದು ಇದು ವಿಶ್ವದ ಅತಿ ದೊಡ್ಡ ಶಾಲೆಯಾಗಿದೆ.
- ಭಾರತದ ೨೦೧೪ ರ ಚುನಾವಣೆಯಲ್ಲಿ ೫೪ ಕೋಟಿ ಜನರು ತಮ್ಮ ಮತವನ್ನು ಚಲಾಯಿಸಿದ್ದಾರೆ. ಇದು ಯುಎಸ್ಎ, ಯುಕೆ, ಆಸ್ಟ್ರೇಲಿಯಾ ಮತ್ತು ಜಪಾನ್ ದೇಶದ ಒಟ್ಟು ಜನಸಂಖ್ಯೆಯಾಗಿದೆ.
- ಸರಿ ಸುಮಾರು ೯೦,೦೦೦ ಪ್ರಕಾರದ ಜೀವಸಂಕುಲಗಳನ್ನು ಒಳಗೊಂಡಿದ್ದು, ಅದರಲ್ಲಿ ೩೫೦ ಪ್ರಕಾರದ ಸಸ್ತನಿ, ೧,೨೦೦ ಪ್ರಕಾರದ ಪಕ್ಷಿಗಳು ಹಾಗೂ ೫೦,೦೦೦ಪ್ರಭೇದದ ಅಥವಾ ಜಾತಿಯ ಗಿಡ ಮರಗಳನ್ನು ಹೊಂದಿರುವ ವಿಶಿಷ್ಟವಾದ ಭೌಗೋಳಿಕ ಹಾಗೂ ನೈಸರ್ಗಿಕ ಶ್ರೀಮಂತಿಕೆಯನ್ನು ಹೊಂದಿರುವ ರಾಷ್ಟ್ರ ನಮ್ಮ ಭಾರತ ಎಂದರೆ ಉತ್ಪ್ರೇಕ್ಷೆಯ ಮಾತಲ್ಲ.
- ಹೀಗೆ ನಾವೆಲ್ಲರೂ ತಿಳಿದಿರುವ ಹಾಗೆ ಭಾರತ ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ರಾಷ್ಟ್ರ ಪ್ರತಿಯೊಂದು ರಾಜ್ಯದಲ್ಲೂ ಒಂದೊಂದು ಭಾಷೆ ಚಾಲ್ತಿಯಲ್ಲಿದ್ದು ,ರಾಷ್ಟ್ರ ಭಾಷೆಯಾದ ಹಿಂದಿಯನ್ನು ಹೊರತು ಪಡಿಸಿ ೧೦ ರಾಜ್ಯಗಳಲ್ಲಿನ ಇಪ್ಪತ್ತೈದು ಮಿಲಿಯನ್ ಗೂ ಅಧಿಕ ಜನರು ಉಪಯೋಗಿಸುವ ಪ್ರಮುಖ ಭಾಷೆಗಳೆಂದರೆ ಬೆಂಗಾಳಿ, ತೆಲುಗು, ಮರಾಠಿ, ತಮಿಳು, ಉರ್ದು, ಗುಜರಾತಿ, ಕನ್ನಡ, ಮಲಯಾಳಂ, ಓಡಿಯಾ ಮತ್ತು ಪಂಜಾಬಿ.
ಇಂತಹ ಕುತೂಹಲಕಾರಿ ಸಂಗತಿಗಳನ್ನು ಒಳಗೊಂಡಿರುವ ಕಾರಣ ವಿಶ್ವವು ನಮ್ಮ ಭಾರತವನ್ನು ವಿಶೇಷ ಹಾಗೂ ವಿಶಿಷ್ಟ ರಾಷ್ಟ್ರವೆಂದು ಗುರುತಿಸುತ್ತದೆ ಎಂದು ತಿಳಿಯುತ್ತದೆ.
- ಕಾವ್ಯ ದೇವರಾಜ್