ಮತ್ತೆ ಮತ್ತೆ ಕೇಳಬೇಕೆನ್ನಿಸುವ ಡಾ.ಗಜಾನನ ಶರ್ಮಾ ಅವರ ‘ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ’ ರಚನೆಯ ಹಾಡಿಗೆ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಅಭಿನಂದನೆ ಸಲ್ಲಿಸಿದೆ, ತಪ್ಪದೆ ಮುಂದೆ ಓದಿ…
ಕರ್ನಾಟಕ ವಿದ್ಯುತ ಪ್ರಸರಣ ನಿಗಮದಲ್ಲಿ ಹಿರಿಯ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ ನಮ್ಮ ಹೆಮ್ಮೆಯ ಲೇಖಕರಾದ ಡಾ.ಗಜಾನನ ಶರ್ಮಾ ಅವರ ರಚಿತ ‘ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ’ ಎಂಬ ಹಾಡನ್ನು ಅಯೋಧ್ಯೆಯ ರಾಮ ಮಂದಿರದ ಆವರಣದಲ್ಲಿ ಪ್ರಸಾರ ಮಾಡಲಾಗಿದೆ. ಈ ಕುರಿತು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಕನ್ನಡದಲ್ಲಿ ಟ್ವಿಟ್ ಮಾಡಿದೆ ಅಭಿನಂದನೆ ಸಲ್ಲಿಸಿದೆ. ಪ್ರಭು ಶ್ರೀರಾಮಚಂದ್ರನ ಕುರಿತಾದ ಹೃದಯಕ್ಕೆ ಹತ್ತಿರವಾಗಿರುವ ಈ ಮನೋಜ್ಞ ಗೀತೆಯ ರಚನೆಗಾಗಿ ಡಾ.ಗಜಾನನ ಶರ್ಮಾ ಅವರಿಗೆ ಅಭಿನಂದನೆಗಳು, ಜೈ ಶ್ರೀರಾಮ್ ಎಂದು ಹೇಳಲಾಗಿದೆ.

ಧರ್ಮಪತ್ನಿಯೊಂದಿಗೆ ಲೇಖಕರು ಡಾ.ಗಜಾನನ ಶರ್ಮಾ
ಚೆನ್ನಭೈರಾದೇವಿ, ಪ್ರಮೇಯ ಸೇರಿದಂತೆ ಹಲವಾರು ಕೃತಿಗಳು ಅವರು ಬರೆದಿದ್ದಾರೆ.
ಅಯೋಧ್ಯೆ ಪುಣ್ಯಭೂಮಿಯಲ್ಲಿ ಕನ್ನಡದ ಕಂಪು ಪಸರಿದ್ದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ, ಡಾ.ಗಜಾನನ ಶರ್ಮಾ ಅವರಿಗೆ ಆಕೃತಿಕನ್ನಡ ಪತ್ರಿಕೆ ಅಭಿನಂದನೆ ಸಲ್ಲಿಸುತ್ತದೆ.
- ‘ಇನ್ನಷ್ಟು ಬೇಕೆನ್ನ….’ಸಾಹಿತ್ಯ ಡಾ. ಗಜಾನನ ಶರ್ಮ
- ಜೇಮ್ಸ್ ಚಿತ್ರ ತಂಡದ ಜೊತೆ ‘ಡಾ.ಗಜಾನನ ಶರ್ಮಾ’
- ‘ಚೆನ್ನಭೈರಾದೇವಿ’ ಪುಸ್ತಕ ಪರಿಚಯ – ಸೌಮ್ಯ ಸನತ್
- ಆಕೃತಿ ಕನ್ನಡ ನ್ಯೂಸ್